ಇತ್ತೀಚಿನ ಸುದ್ದಿ
ನಾಗರಹೊಳೆಯಲ್ಲಿ ಕಳ್ಳಬೇಟೆ: ಇಬ್ಬರ ಬಂಧನ, 4 ಮಂದಿ ಪರಾರಿ, ಸತ್ತ ಜಿಂಕೆ ಮರಿ ವಶಕ್ಕೆ,
19/05/2021, 08:24

ಪೊನ್ನಂಪೇಟೆ(reporterkarnataka news): ನಾಗರಹೊಳೆ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ಕಳ್ಳಬೇಟೆಗೆ ತೆರಳಿದ ದುಷ್ಕರ್ಮಿಗಳು ಜಿಂಕೆಗಳಿಗೆ ಹಾರಿಸಿದ ಗುಂಡಿನ ಶಬ್ದಕ್ಕೆ ಎಚ್ಚೆತ್ತ ಅರಣ್ಯ ಇಲಾಖೆಯ ಸಿಬ್ಬಂದಿಗಳು ಇಬ್ಬರನ್ನು ಬಂಧಿಸಿದ್ದಾರೆ.
ಪೊನ್ನಂಪೇಟೆ ತಾಲೂಕಿನ ಬಿರುನಾಣಿ ಬಾಡಗರಕೇರಿ ಗ್ರಾಮದ 6 ಮಂದಿ ಕಾರಿನಲ್ಲಿ ಬೇಟೆಗೆ ತೆರಳಿದ್ದು, ಪ್ರೀತಂ ಮತ್ತು ರಾಬಿನ್ ತಿಮ್ಮಯ್ಯ ಎಂಬುವರನ್ನು ಸ್ಥಳದಲ್ಲೇ ಬಂಧಿಸಲಾಗಿದೆ. ಬಂಧಿತರಿಂದ ಜಿಂಕೆ ಮರಿ ಮತ್ತು ಕಾರನ್ನು ವಶಕ್ಕೆ ಪಡೆಯಲಾಗಿದೆ ಜೊತೆಗಿದ್ದ ನಾಲ್ವರು ಪರಾರಿಯಾಗಿದ್ದಾರೆ.