ಇತ್ತೀಚಿನ ಸುದ್ದಿ
ನಾಗಮಂಗಲದಲ್ಲಿ ‘ವೈದ್ಯರ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮಕ್ಕೆ ಶಾಸಕ ಸುರೇಶ್ ಗೌಡ ಚಾಲನೆ
27/05/2021, 07:28
ಡಿ.ಆರ್ .ಜಗದೀಶ್ ದೇವಲಾಪುರ ನಾಗಮಂಗಲ
info.reporterkarnataka@gmail.com
ನಾಗಮಂಗಲ ತಾಲ್ಲೂಕು ಕೇಂದ್ರದಲ್ಲಿ ವೈದ್ಯರ ನಡೆ ಹಳ್ಳಿಯ ಕಡೆ ಸರ್ಕಾರದ ಯೋಜನೆಗೆ ಶಾಸಕ ಸುರೇಶಗೌಡ ಶುಭ ಹಾರೈಸಿ ಚಾಲನೆ ನೀಡಿದರು.
ನಾಗಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಆವರಣದಲ್ಲಿ ವೈದ್ಯರ ನಡೆ ಹಳ್ಳಿಯ ಕಡೆ ಯೋಜನೆಗೆ ವಾಹನವನ್ನು ಸಾಂಕೇತಿಕವಾಗಿ ಉದ್ಘಾಟನೆ ಮಾಡುವ ಮುಖಾಂತರ ಚಾಲನೆ ನೀಡಿದರು.
ತಾಲ್ಲೂಕಿನಲ್ಲಿ ಇರುವ ಹಳ್ಳಿಗಳ ಕಡೆ ಆರೋಗ್ಯ ಅಧಿಕಾರಿಗಳನ್ನು ಬಳಸಿಕೊಂಡು ಯೋಜನೆಗೆ ಕಾರ್ಯ ರೂಪಿಸುವುದಾಗಿ ಅವರು ತಿಳಿಸಿದರು.
ಸರ್ಕಾರದ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಲು ಹಳ್ಳಿಗರು ಈಗಾಗಲೇ ಸ್ವಯಂಕೃತವಾಗಿ ತಪಾಸಣೆ ಮಾಡಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಇರುವ ಸಿಬ್ಬಂದಿಗಳನ್ನು ಬಳಸಿಕೊಂಡು ಸೋಂಕಿತರನ್ನು ಗುರುತಿಸಿ ಕರೋನಾ ಸೆಂಟರಿಗೆ ಕಳಿಸುವ ಮುಖಾಂತರ ಸೋಂಕಿತರ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸಿದ್ದು ತಾಲ್ಲೂಕಿನಲ್ಲಿ ಕಾರ್ಯರೂಪಕ್ಕೆ ತರಲಾಗಿದೆ ಎಂದು ತಾಲ್ಲೂಕು ಆರೋಗ್ಯ ಆಡಳಿತಾಧಿಕಾರಿ ಪ್ರಸನ್ನ ತಿಳಿಸಿದರು.
ಇದೇ ಸಂದರ್ಭದಲ್ಲಿ ತಾಲ್ಲೂಕು ದಂಡಾಧಿಕಾರಿ ಕುಂಞಿ ಅಹಮದ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸತೀಶ್, ಪ್ರಭಾರ
ಆರೋಗ್ಯಾಧಿಕಾರಿ ಪ್ರಸನ್ನ, ವೈದ್ಯಾಧಿಕಾರಿಯಾಗಿ ಚೇತನ್ ಹಾಗೂ ತಾಲ್ಲೂಕು ಅಧಿಕಾರಿಗಳು ಸಿಬ್ಬಂದಿ ವರ್ಗದವರು ಹಾಜರಿದ್ದರು.