ಇತ್ತೀಚಿನ ಸುದ್ದಿ
ನಾವು ಎಷ್ಟು ಗಿಡಗಳನ್ನು ನೆಟ್ಟು ಬೆಳೆಸುತ್ತೇವೆಯೋ ಅಷ್ಟು ಪುಣ್ಯ ಪ್ರಾಪ್ತಿಯಾಗುತ್ತದೆ: ಅನಿತಾ ಬಸವರಾಜ್ ಮಂತ್ರಿ
22/08/2021, 15:55
ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು
info.reporterkarnataka@gmail.com
ರಾಯಚೂರು ಜಿಲ್ಲೆಯ ಸಿರವಾರ ತಾಲೂಕು ಆಸ್ಪತ್ರೆಯ ಬೇಡಿಕೆ ಮೇರೆಗೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ತಾಲೂಕು ಅಧ್ಯಕ್ಷೆ ಅನಿತಾ ಬಸವರಾಜ್ ಮಂತ್ರಿ ಅವರು ಪರಿಸರ ಕಾರ್ಯದಲ್ಲಿ ತೊಡಗಿದ್ದಾರೆ.
ಪರಿಸರ ಪ್ರೇಮದ ಜತೆಗೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಅಲ್ಲದೆ ಕೊರೊನಾ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ದಾರಿದೀಪವಾಗಿದ್ದಾರೆ. ಇಂತಹ ಕೆಲಸ ಮಾಡುವ ಅವರಿಗೆ ಅರಣ್ಯ ಅಧಿಕಾರಿಗಳಾದ ಅಮರೇಶ್ ನಾಯಕ್ ಸ್ಪಂದಿಸಿ ತಕ್ಷಣವೇ ಐವತ್ತಕ್ಕೂ ಹೆಚ್ಚು ಗಿಡಗಳನ್ನು ತಾಲೂಕು ಆಸ್ಪತ್ರೆಗೆ ಸ್ವತಃ ತಾವೇ ಬಂದು ನೀಡಿದರು. ಪರಿಸರ ಪ್ರೇಮ ಮೆರೆದ ಸಿರವಾರ ತಾಲೂಕು ಆಸ್ಪತ್ರೆ ಯ ಸಿಬಂದಿಗಳಿಗೆ ಪ್ರಶಂಸಿದರು.
ವೇದಿಕೆಯನ್ನು ಉದ್ದೇಶ ಮಾತನಾಡಿದ ಅನಿತಾ ಅವರು ಗಿಡಗಳನ್ನು ನಾಟಿಸುವುದು ಅಷ್ಟೇ ಅಲ್ಲ ಅವುಗಳನ್ನು ಸುರಕ್ಷಿತವಾಗಿ ಬೆಳೆಸಬೇಕು .ಅವು ಬೆಳೆದು ದೊಡ್ಡದಾದಾಗ ಆಕ್ಸಿಜನ್ ಹೆಚ್ಚಾಗುತ್ತದೆ.
ನಾವು ಪರಿಸರದಲ್ಲಿ ಎಷ್ಟು ಗಿಡಗಳನ್ನು ನೆಡುತ್ತೇವೆಯೋ ಅಷ್ಟು ಜನರವನ್ನು ಕಾಪಾಡಿದಷ್ಟೇ ಪುಣ್ಯ ದೊರಕುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರುನಾಡ ಸೇವಕರು ಜಿಲ್ಲಾಧ್ಯಕ್ಷ ಸಿದ್ದರಾಮೇಶ್ವರ ಎಂ., ಮುಖ್ಯ ಅರಣ್ಯ ಅಧಿಕಾರಿಗಳಾದ ಅಮರೇಶ್ ನಾಯಕ್, ಬಸಲಿಂಗಪ್ಪ ಸಾಹುಕಾರ್,ಕೌಂಸಲರ್ ಕೃಷ್ಣ ನಾಯಕ್, ಮುಖ್ಯ ಆಡಳಿತ ಆರೋಗ್ಯ ಅಧಿಕಾರಿಗಳಾದ ಪರಿಮಳ ಮೇತ್ರಿ, ಡಾ.ಸುನಿಲ್ ಸರೋದೆ, ಹೆಲ್ತ್ ಇನ್ಸ್ ಪೆಕ್ಟರ್ ಯಲ್ಲಲಿಂಗ ಪೂಜಾರಿ, ಪೊಲೀಸ್ ಇಲಾಖೆಯ ಎ ಎಸ್ ಐ ರಾಮಜಿ ಮತ್ತು ಪರಿಸರ ಪ್ರೇಮಿಗಳು ಇದ್ದರು.