4:54 AM Friday6 - February 2026
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್‌ನ ಲೂಟಿ ನೋಡಿ ಗಾಂಧೀಜಿಯ ಕೈಗೆ ಕೋಲು ಬಂದಿದೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ರಾಜ್ಯ ಆಹಾರ ಆಯೋಗದ ಅಧ್ಯಕ್ಷರ ತಂಡದಿಂದ ವಿವಿಧೆಡೆ ದಿಢೀರ್ ಭೇಟಿ: ಪರಿಶೀಲನೆ *ಕರಾವಳಿವರೆಗೆ ವಂದೇ ಭಾರತ್ ವಿಸ್ತರಿಸುವಂತೆ ರೈಲ್ವೆ ಸಚಿವರಿಗೆ ಸಂಸದ ಶ್ರೀನಿವಾಸ ಪೂಜಾರಿ ಮನವಿ* ಅನೈತಿಕ ಸಂಬಂಧ ಕೊಲೆಗೆ ಕಾರಣ?: ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಸೇರಿ 7… ಎಸಿ ಕೋರ್ಟ್ ಕೇಸ್: ಎರಡೂವರೆ ವರ್ಷದಲ್ಲಿ ಅಸಾಧ್ಯವಾದದ್ದನ್ನು ಸಾಧ್ಯವಾಗಿಸಿದ್ದೇವೆ: ಸಚಿವ ಕೃಷ್ಣ ಬೈರೇಗೌಡರು… ತೀರ್ಥಹಳ್ಳಿ ಸಮೀಪದ ಮೇಗರವಳ್ಳಿಯಲ್ಲಿ ಭೀಕರ ಅಪಘಾತ: ಗಾಯಾಳು ಮಹಿಳೆ ಸಾವು Madikeri | ಕುಶಾಲನಗರ ಬಳಿ ಬೈಕ್ ಡಿಕ್ಕಿ: ಪಾದಚಾರಿ ಯುವಕ ದಾರುಣ ಸಾವು ಪೊಲೀಸರಿಗೆ ತಲೆನೋವಾದ ಕೇರಳದ ‘ಮಲ್ಲು’ ಗ್ಯಾಂಗ್: ಚಿನ್ನದ ಉದ್ಯಮಿಗಳೇ ಇವರ ಟಾರ್ಗೆಟ್ ಉದ್ಯಮಿ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣ: ಕೇಂದ್ರ ವಿತ್ತ ಸಚಿವೆಗೆ ಕೇರಳ ಸಿಎಂ… ವರನಿಗೆ ಚಾಕು ಇರಿದ ಕೇಸ್‌ಗೆ ಬಿಗ್ ಟ್ವಿಸ್ಟ್ : ಸ್ಕೆಚ್ ಹಾಕಿದ್ದು ಅವರಲ್ಲ,…

ಇತ್ತೀಚಿನ ಸುದ್ದಿ

ನಾಳೆ ಭರ್ಜರಿ ಲಸಿಕೆ ಅಭಿಯಾನ: 50 ಸಾವಿರ ಮಂದಿಗೆ ನೀಡುವ ಗುರಿ!: ಎಲ್ಲೆಲ್ಲಿ ಲಭ್ಯ? ನೀವೇ ಓದಿ ನೋಡಿ

17/08/2021, 20:49

ಮಂಗಳೂರು(reporterkarnataka.com): ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ನಗರ ಆರೋಗ್ಯ ಕೇಂದ್ರಗಳು ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಇದೇ ಆ. 18ರಂದು ಕೋವಿಡ್ ಲಸಿಕಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು,  50 ಸಾವಿರಕ್ಕಿಂತ ಹೆಚ್ಚಿನ ವ್ಯಾಕ್ಸಿನ್ ನೀಡುವ ಗುರಿ ಹೊಂದಲಾಗಿದೆ.

ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಎರಡನೇ ಡೋಸ್ ಹಾಗೂ ಕದ್ರಿ ಶಿವಭಾಗ್ ಇ.ಎಸ್.ಐ ಹಾಗೂ ಬೈಕಂಪಾಡಿಯ ಇ.ಎಸ್.ಐ ಆಸ್ಪತ್ರೆಯಲ್ಲಿ ಕೋವಿಶೀಲ್ಡ್ ಎರಡನೇ ಡೋಸ್ ಮತ್ತು ಎನ್ ಆರ್ ಐ ಫಲಾನುಭವಿಗಳಿಗೆ ಕೋವಿಶೀಲ್ಡ್ ಎರಡನೇ ಡೋಸ್ ಲಸಿಕೆಯು ಜಿಲ್ಲಾ ವೆಸ್ಲಾಕ್ ಆಸ್ಪತ್ರೆಯಲ್ಲಿ ಲಭ್ಯವಿದೆ.

ಮಂಗಳೂರು ತಾಲೂಕಿನ ಈ ಕೆಳಕಂಡ ಎಲ್ಲಾ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಡೆಯಲಿರುವ ಕೋವಿಡ್ ಲಸಿಕಾ ಶಿಬಿರದಲ್ಲಿ ಮೊದಲ ಮತ್ತು ಎರಡನೇ ಡೋಸ್‌ ನೀಡಲಾಗುತ್ತಿದೆ. ವಿವರ ಹೀಗಿದೆ;

1. ಕುದುಲ್ ರಂಗರಾವ್ ಹಾಲ್, ಲೇಡಿಹಿಲ್, ಉರ್ವ.

2. ಸರಕಾರಿ ಪ್ರಾಥಮಿಕ ಶಾಲೆ ಮಣ್ಣಗುಡ್ಡೆ.

3. ನಾರಾಯಣ ಗುರು ಹಾಲ್, ಚಿಲಿಂಬಿ.

4. ಶಿವಶಕ್ತಿ ಕ್ಲಬ್ ಹಾಲ್, ಕುದ್ರೋಳಿ.

5. ಅಂಬಾಭವಾನಿ ಹಾಲ್, ಜಲ್ಲಿಗುಡ್ಡೆ.

6. ಗಣೇಶೋತ್ಸವ ಹಾಲ್, ಪಂಪವೆಲ್.

7. ಆನಂದ ರೆಸಿಡೆನ್ಸಿ ಹಾಲ್ ಮರೋಲಿ.

8. ಸೂಟರ್‌ಪೇಟೆ.

9. ಶಾರದೋತ್ಸವ ಟ್ರಸ್ಟ್ ಹಾಲ್, ವಿದ್ಯಾನಗರ, ಕೂಳೂರು.

10. ಸರಕಾರಿ ಪ್ರಾಥಮಿಕ ಶಾಲೆ ಕಾವೂರು.

II. ಕೃಷ್ಣ ನಗರ ಅಂಗನವಾಡಿ, ಕೂಳೂರು.

12. ಸರಕಾರಿ ಪ್ರಾಥಮಿಕ ಶಾಲೆ ಪೆರ್ಮುದೆ.

13. ಸರಕಾರಿ ಪ್ರಾಥಮಿಕ ಶಾಲೆ ಬೈಕಂಪಾಡಿ.

 14.ಲಕ್ಷ್ಮೀ ನಾರಾಯಣ ಹಾಲ್, ವಾರ್ಡ್ ನಂ.56.

15. ಪಾಂಡೇಶ್ವರ ವಾಡ್. ನಂ.46.

16. ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಜೆಪ್ಪು (ಕೋವ್ಯಾಕ್ಸಿನ್ -150) 

17. ಸರಕಾರಿ ಪ್ರಾಥಮಿಕ ಶಾಲೆ ಸುರತ್ಕಲ್, ವಾರ್ಡ್ ನಂ.4.

18,ಎಂ.ಜಿ.ಪಂ ಹಾಲ್, ವಾರ್ಡ್ ನಂ.5, ಸುರತ್ಕಲ್.

 19. ಅಂಬೇಡ್ಕರ್ ಭವನ, ವಾರ್ಡ್ ನಂ.6, ಸುರತ್ಕಲ್.

20. ವೆಂಕಟರಮಣ ಹಾಲ್, ಡೊಂಗರಕೆರೆ.

21.ಆದಿಮಾಯೆ ಹಾಲ್, ಮೋರ್ಗನ್‌ಗೇಟ್. 

22.ಬಹಶ್ರೀ ನಾರಯಣ ಗುರು ಮಂದಿರ, ಗುರುನಗರ ಹಾಗೂ

23. ಕುವೆಂಪು ಹಿರಿಯ ಪ್ರಾಥಮಿಕ ಶಾಲೆ, ನೆಲ್ಯಪದವು. 

ಸರಕಾರಿ ವಲಯವಲ್ಲದೇ  ನಿಗದಿಪಡಿಸಿದ ದರಗಳಂತೆ  ಖಾಸಗಿ ಆಸ್ಪತ್ರೆಗಳಲ್ಲಿಯೂ Covaxin,

Covishield, Sputnik ಲಸಿಕೆಯನ್ನು ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು