ಇತ್ತೀಚಿನ ಸುದ್ದಿ
ನಾಡು ಕಟ್ಟುವ ಹೊಣೆ ಎಲ್ಲರದ್ದು: ಕನ್ನಡತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರದೀಪ್ ಕುಮಾರ್
24/11/2022, 11:05
ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ಬೆಂಗಳೂರು
info.reporterkarnataka@gmail.com
ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಸೊರಗುತ್ತಿದ್ದು, ಕನ್ನಡಿಗರು ಅಲ್ಪಸಂಖ್ಯಾತರಾಗುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಪ್ರದೀಪ್ ಕುಮಾರ್ ಕಳವಳ ವ್ಯಕ್ತಪಡಿಸಿದರು.
ಎಂಜಿ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ಶ್ರೀ ದುರ್ಗಾ ಫೌಂಡೇಶನ್ ಹಮ್ಮಿಕೊಂಡಿದ್ದ 67ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಅಪ್ಪು ನಮನ ಮತ್ತು ಕರುನಾಡ ಹಬ್ಬ ಕಾರ್ಯಕ್ರಮದಲ್ಲಿ
2022ರ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಹೆಮ್ಮೆಯ ಕನ್ನಡಿಗ ಮತ್ತು ಕನ್ನಡತಿ ಪ್ರಶಸ್ತಿ ಪ್ರದಾನ ಪ್ರಶಸ್ತಿಯನ್ನು ಮಲ್ಲಯ್ಯ ಶಿವಮೂರ್ತಿಯ್ಯ ಕೋಮಾರಿ,ಪ್ರಶಾಂತ ಮಲಗಾವಿ , ಮಹಾಂತೇಶ್ ಪೂಜಾರಿ,
ಗೋಕುಲ್ ಸಾಬ್ ಬಾವಾಜಿ,ಡಾ. ಗೌತಮಿ ಗೌಡ, ಶರಣಮ್ಮ ಮಾಲಿ ಪಾಟೀಲ್ , ಎಸ್. ಎನ್. ಮಂಜುಳಾ ಸೋಮಶೇಖರ್ ದಿನೇಶ್, ಜಿ , ಅಜಯ್ ನಾಯಕ್ ,ಉಷಾರಾಣಿ, ಡಿ ,ಇಂದ್ರಮ್ಮ , ಎಂ. ಟಿ. ಯೋಗೀಶ್ ಕುಮಾರ ನಂದ ಕುಮಾರ್ , ರೋಶನ್, ಎಂ.ಆರ್ .
ರೇವಣ್ಣ ಸಿದ್ದೆ ಗೌಡ, ಆರ್. ಕೆ , ಬಿಂದು ಗೌಡ ,ಜನೇಲಾಜಸ್ವಿ ,
ಡಾ. ಹಲೀಮಾ,ಸೀಮಾ ಕಿರಣ್ ಭೂಮಿಕ ರೂಪ, ಎಚ್ ಗೌಡ , ನಯನ ಸೂಡ , ರಶ್ಮಿ. ಎಂ. ಎಸ್ .,ವಿದುಷಿ ಎಸ್, ಎನ್, ಮೇಘನಾ ರಾವ್ ಉಮಾದೇವಿ. ಎಲ್. ಎಸ್ , ನಾಗರತ್ನ ತಡಕನಹಳ್ಳಿ ,ತೀರ್ಥ ಹೊನ್ನಮ್ಮ ,ರವಿ ನಂದನ, ಡಾ. ಸುಧಾಕರ ಜಿ, ಲಕ್ಕವಳ್ಳಿ , ಕುಶಾಲ ಹರದೇ ಗೌಡ , ಆರ್ನಿ .ಹೆಚ್,
ರವರಿಗೆ ಸನ್ಮಾನಿಸಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಕನ್ನಡ ನಾಡು, ನುಡಿಕಟ್ಟುವ ಜವಾಬ್ದಾರಿ ನಮ್ಮೆಲ್ಲರದ್ದು. ನಾಡು, ನುಡಿ, ನೆಲ, ಜಲಕ್ಕೆ ಅಪಮಾನವಾದರೆ ನಾವು ಸಹಿಸುವುದಿಲ್ಲ. ಇದರ ಬಗ್ಗೆ ನಾವೆಲ್ಲರೂ ತಕ್ಷಣ ಎಚ್ಚೆತ್ತುಕೊಂಡು ನಾಡನ್ನು ಸಮೃದ್ಧಿಗೊಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಪಣ ತೊಡೋಣ ಎಂದರು.
ನಂತರ ಮಾತನಾಡಿದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷರಾದ ಡಾ. ಆರ್. ಎಚ್. ಪವಿತ್ರ ರಾಜ್ಯದಲ್ಲಿ ಅನೇಕ ಭಾಷೆಗಳನ್ನು ಮಾತನಾಡುವವರಿದ್ದು ಬೇರೆ ರಾಜ್ಯಗಳಿಂದ ವಲಸೆ ಬಂದವರಿಂದ ಕನ್ನಡ ಭಾಷೆಯನ್ನು ಬಳಸುವವರ ಸಂಖ್ಯೆ ಕ್ಷೀಣಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾಂಗ್ರೆಸ್ ಯುವ ಮುಖಂಡ ಪ್ರದೀಪ್ ಕುಮಾರ್, ಶ್ರೀ ದುರ್ಗಾ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷರಾದ ಡಾ. ಆರ್. ಎಚ್. ಪವಿತ್ರ, ಶ್ರೀ ಕಲ್ಪವೃಕ್ ಸೌಹಾರ್ದ ಸಹಕಾರಿ ನಿಯಮಿತ ಅಧ್ಯಕ್ಷರಾದ ಬಸವರಾಜ ಪೂಜಾರಿ, ರೂಪದರ್ಶಿ ಶಿಲ್ಪಾ ಸುಧಾಕರ್, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾದ ದಿವ್ಯಾ ಆರ್ .ಕೆ, ಸಂತೋಷ್ ಕಿರಾಲು, ವಿದ್ಯಾ, ನಾಗಶ್ರೀ,ಮಹೇಶ್ ಉಪಸ್ಥಿತರಿದ್ದರು.