ಇತ್ತೀಚಿನ ಸುದ್ದಿ
ಎನ್. ಆರ್. ಪುರ: ರಾಜ್ಯ ಹೆದ್ದಾರಿಯಲ್ಲಿ ಓಡಾಡಿದ ಕಾಡಾನೆ; ನಾಗರಿಕರಲ್ಲಿ ಹೆಚ್ಚಿದ ಆತಂಕ
03/01/2025, 20:17
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಿಕ್ಕಮಗಳೂರು ಜಿಲ್ಲೆಯ ಎನ್. ಆರ್. ಪುರ ತಾಲೂಕಿನ ಅರಂಬಳ್ಳಿ ಮುಖ್ಯರಸ್ತೆಯಲ್ಲಿ ಕಾಡಾನೆಯೊಂದು ಓಡಾಟ ನಡೆಸಿ, ನಾಗರಕರಲ್ಲಿ ಆತಂಕ ಸೃಷ್ಟಿಸಿತು.
ಒಂಟಿ ಸಲಗ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಬಿಂದಾಸ್ ಆಗಿ
ಓಡಾಟ ನಡೆಸಿತು. ಕಾಡಾನೆ ಓಡಾಟದಿಂದ ವಾಹನ ಸವಾರರಲ್ಲಿ ಆತಂಕ ಉಂಟಾಯಿತು.ಕಾಡಾನೆ ರಸ್ತೆಯಲ್ಲಿದ್ದ ಹಿನ್ನೆಲೆಯಲ್ಲಿ ವಾಹನ ಸವಾರರು ಕೆಲ ಹೊತ್ತು ಕಾದು ನಿಂತರು. ಆನೆ
ಕೆಲ ಕಾಲ ರಸ್ತೆಯಲ್ಲಿಯೇ ಇದ್ದು ನಂತರ ಕಾಡಿನತ್ತ ತೆರಳಿತು.
ಈ ಭಾಗದಲ್ಲಿ ಒಂದು ತಿಂಗಳಲ್ಲಿ ಇಬ್ಬರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಆನೆಯನ್ನು
ಸ್ಥಳಾಂತರ ಮಾಡುವಂತೆ ಸ್ಥಳೀಯರು ಹಲವು ಬಾರಿ ಆಗ್ರಹಿಸಿದ್ದಾರೆ.