ಇತ್ತೀಚಿನ ಸುದ್ದಿ
ಎನ್.ಆರ್.ಪುರ: ತಂದೆ- ಮಗನ ಮೇಲೆ ಕಾಡಾನೆ ದಾಳಿ; ತಂದೆ ಸಾವು; ಮಗ ತಪ್ಪಿಸಿಕೊಂಡು ಪಾರು
19/12/2024, 15:12
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕಾಫಿನಾಡಲ್ಲಿ ಆನೆ ದಾಳಿಗೆ ಮತ್ತೊಂದು ಬಲಿಯಾಗಿದೆ.
ಎನ್.ಆರ್.ಪುರ ತಾಲೂಕಿನ ಮಡಬೂರು ಗ್ರಾಮದ ಬಳಿ ವೃದ್ದರೊಬ್ಬರ ಕಾಡಾನೆ ದಾಳಿ ನಡೆಸಿ ಸಾವು ಸಂಭವಿಸಿದೆ.
20 ದಿನದಲ್ಲಿ ಕಾಡಾನೆ ದಾಳಿಗೆ ಇದು ಎರಡನೇ ಬಲಿಯಾಗಿದೆ.
ತೋಟಕ್ಕೆ ಹೋಗಿದ್ದ ತಂದೆ-ಮಗನ ಮೇಲೆ ಒಂಟಿ ಸಲಗ ದಾಳಿ ನಡೆಸಿದೆ. ಮಗ ಓಡಿ ಹೋಗಿ ತಪ್ಪಿಸಿಕೊಂಡಿದ್ದಾನೆ, ತಂದೆ ಆನೆ ದಾಳಿಗೆ ಬಲಿಯಾಗಿದ್ದಾರೆ.
ಮೃತಪಟ್ಟವರನ್ನು ಎಲಿಯಾಸ್ (75) ಎಂದು ಗುರುತಿಸಲಾಗಿದೆ. ಮಗ ವರ್ಗೀಸ್ ಆನೆ ದಾಳಿಯಿಂದ ಪಾರಾಗಿದ್ದಾರೆ. ಎಲಿಯಾಸ್ ಅವರು ಕೇರಳದಿಂದ ಬಂದು ಅಡಿಕೆ-ಬಾಳೆ ತೋಟ ಮಾಡಿಕೊಂಡಿದ್ದರು. ಕಾಡಾನೆ ಎಲಿಯಾಸ್ ಅವರನ್ನು
ಸಾಯಿಸಿದ ಬಳಿಕ ಮೃತದೇಹ ಸುತ್ತುತ್ತಾ ಸ್ಥಳದಲ್ಲೇ ನಿಂತಿತ್ತು.
ಮೃತದೇಹಕ್ಕೆ ಒದೆಯುತ್ತಾ, ಘೀಳಿಡುತ್ತಾ ಸ್ಥಳದಲ್ಲೇ ಸಲಗ ನಿಂತಿತ್ತು.ನವೆಂಬರ್ 30ರಂದು ಸೀತೂರಲ್ಲಿ ಉಮೇಶ್ ಎಂಬುವರನ್ನ ಕಾಡಾನೆ ಸಾಯಿಸಿತ್ತು.
ಅರಣ್ಯ ಇಲಾಖೆ ವಿರುದ್ಧ ಮಲೆನಾಡಿಗರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲೇ ಸ್ಥಳಿಯರು, ಪೊಲೀಸರು, ಅರಣ್ಯ ಅಧಿಕಾರಿಗಳು ಬೀಡುಬಿಟ್ಟಿದ್ದಾರೆ.