ಇತ್ತೀಚಿನ ಸುದ್ದಿ
ನಿಗೂಢವಾಗಿ ನಾಪತ್ತೆಯಾಗಿದ್ದ ವಿದ್ಯಾರ್ಥಿ ದಿಗಂತ್ ಸುರಕ್ಷಿತವಾಗಿ ಪತ್ತೆ: ಉಡುಪಿಯಲ್ಲಿ ಪ್ರತ್ಯಕ್ಷ
08/03/2025, 17:18

ಬಂಟ್ವಾಳ(reporterkarnataka.com):ಫೆ.25 ರಂದು ಮನೆಯ ಹತ್ತಿರದ ಆಂಜನೇಯ ವ್ಯಾಯಾಮ ಶಾಲೆಗೆ ಹೋಗಿಬರುತ್ತೇನೆಂದು ಹೇಳಿ ಹೋಗಿದ್ದ ಪಿಯು ವಿದ್ಯಾರ್ಥಿ ದಿಗಂತ್ ಕ್ಷೇಮವಾಗಿ ಪತ್ತೆಯಾಗಿದ್ದಾನೆಂದು ತಿಳಿದು ಬಂದಿದೆ.
ಆತನ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಕಾಣೆಯಾದ ದಿನದಂದು ಆತನ ಚಪ್ಪಲಿ, ಮೊಬೈಲ್ ಪತ್ತೆಯಾದ ಬಳಿಕ ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿತ್ತು. ಫರಂಗಿಪೇಟೆಯಲ್ಲಿ ಬೃಹತ್ ಪ್ರತಿಭಟನೆಗಳು ನಡೆದಿದ್ದು ಶೀಘ್ರವಾಗಿ ಪತ್ತೆ ಹಚ್ಚುವಂತೆ ಒತ್ತಾಯಿಸಲಾಗಿತ್ತು. ವಿಶ್ವ ಹಿಂದು ಪರಿಷತ್, ವಿದ್ಯಾರ್ಥಿ ಪರಿಷತ್ ಸೇರಿದಂತೆ ಹಲವು ಸಂಘಟನೆಗಳು ಕಳೆದ ಹನ್ನೆರಡು ದಿನಗಳಿಂದ ವಿದ್ಯಾರ್ಥಿ ಕಾಣೆಯಾಗಿರುವುದನ್ನು ಪತ್ತೆ ಮಾಡದಿರುವ ಪೊಲೀಸ್ ಇಲಾಖೆಯ ಬಗ್ಗೆ ಆರೋಪ ಮಾಡಿದ್ದು ಮಾ.10 ರ ಒಳಗೆ ಪತ್ತೆಯಾಗದಿದ್ದಲ್ಲಿ ರಾಜ್ಯ ವ್ಯಾಪಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದವು.
ಪಕ್ಕದ ಉಡುಪಿಯಲ್ಲಿ ಬಾಲಕ ಪತ್ತೆಯಾಗಿದ್ದು , ಪೊಲೀಸರು ಕರೆತರುತ್ತಿದ್ದಾರೆ ಎನ್ನಲಾಗಿದೆ.