ಇತ್ತೀಚಿನ ಸುದ್ದಿ
Mysore | ವಿಶ್ವ ವಿಖ್ಯಾತ ಮೈಸೂರು ದಸರಾ ಉದ್ಘಾಟನೆ: ಸಾಹಿತಿ ಬಾನು ಮಸ್ತಾಕ್ ಗೆ ಅಧಿಕೃತ ಆಹ್ವಾನ
04/09/2025, 19:32

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟಕರ ಆಯ್ಕೆಗೆ ಹಲವು ವಿವಾದಗಳ ನಡುವೆಯೂ ಸಾಹಿತಿ ಬಾನು ಮುಸ್ತಾಕ್ ಅವರಿಗೆ ಮೈಸೂರು ಜಿಲ್ಲಾಡಳಿತ ವತಿಯಿಂದ ಅಧಿಕೃತ ಅಹ್ವಾನ ನೀಡಲಾಯಿತು.
ಸರ್ಕಾರದ ಪರವಾಗಿ ಮೈಸೂರು ಜಿಲ್ಲಾಧಿಕಾರಿ ಲಕ್ಷೀಕಾಂತ ರೆಡ್ಡಿ ಹಾಸನದ ಬಾನು ಮುಸ್ತಾಕ್ ಅವರ ನಿವಾಸಕ್ಕೆ ತೆರಳಿ ಅಧಿಕೃತವಾಗಿ ಅಹ್ವಾನ ನೀಡಿದರು. ಸಾಹಿತಿ ಬಾನು ಮುಸ್ತಾಕ್ ಅವರಿಗೆ ಶಾಲು ಹೊದಿಸಿ,ಮೈಸೂರು ಪೇಟ ತೋಡಿಸಿ ದಸರಾ ಉದ್ಘಾಟನೆಗೆ ಅಧಿಕೃತ ಅಹ್ವಾನ ನೀಡಲಾಗಿದ್ದು, ಸೆಪ್ಟೆಂಬರ್ 22ರಂದು ಬಾನು ಮುಸ್ತಾಕ್ ಚಾಮುಂಡಿ ಬೆಟ್ಟದಲ್ಲಿ ಮೈಸೂರು ದಸರಾವನ್ನು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ.