ಇತ್ತೀಚಿನ ಸುದ್ದಿ
Mysore | ಪಿರಿಯಾಪಟ್ಟಣ: ಸ್ನಾನಕ್ಕೆ ತೆರಳಿದ ಸಹೋದರಿಯರು ಅನುಮಾನಾಸ್ಪದ ಸಾವು
25/10/2025, 21:50
 
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಗ್ರಾಮದ ಮನೆಯೊಂದರಲ್ಲಿ ಸ್ನಾನ ಮಾಡಲು ತೆರಳಿದ್ದ ಸಹೋದರಿಯರು ಅನುಮಾನಾಸ್ಪದವಾಗಿ ಸಾವನಪ್ಪಿರುವ ಘಟನೆ ನಡೆದಿದೆ.
ಗ್ರಾಮದ ನಿವಾಸಿಗಳಾದ ಗುಲ್ಮರ್ಮ್ (25),ಸಿಮ್ರಾನ್ ತಾಜ್ (20) ಮೃತಪಟ್ಟ ದುರ್ದೈವಿಗಳು. ಸ್ನಾನಕ್ಕೆ ಹೋದವರು ಬಹಳ ಹೊತ್ತಿನ ಬಳಿಕವೂ ಬಚ್ಚಲು ಮನೆಯಿಂದ ಹೊರಗೆ ಬರದೇ ಇದದ್ದನ್ನು ಗಮನಿಸಿದ ತಂದೆ ಅಲ್ತಾಫ್ ಬಾಗಿಲು ತೆಗೆದು ನೋಡಿದಾಗ ಅರೆ ಪ್ರಜ್ಞೆ ಅವಸ್ಥೆಯಲ್ಲಿ ಬಿದ್ದಿರುವುದು ಕಂಡು ಬಂದಿದ್ದು ತಕ್ಷಣ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಘಟನೆಗೆ ಗ್ಯಾಸ್ ಗೀಜರ್ ಸೋರಿಕೆಯಿಂದ ಸಾವನಪ್ಪಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಸಂಬಂಧ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












 
