ಇತ್ತೀಚಿನ ಸುದ್ದಿ
ಮೈಸೂರು ದಸರಾ | ಗಜಪಡೆಗೆ ತಯಾರಿ: ಅಭಿಮನ್ಯುಗೆ ಮರದ ಅಂಬಾರಿ ಹೊರಿಸಿ ತಾಲೀಮು
16/09/2025, 19:05

ಗಿರಿಧರ್ ಕೊಂಪುಳಿರ ಮೈಸೂರು
info.reporterkarnata@gmail.com
ಮೈಸೂರು ದಸರಾಗಜಪಡೆಗೆ ತಯಾರಿ ಶುರುವಾಗಿದೆ, ಅಭಿಮನ್ಯುಗೆ ಮರದ ಅಂಬಾರಿ ಹೊರಿಸಿ ತಾಲೀಮು
ಮೈಸೂರು ದಸರಾ ಜಂಬೂಸವಾರಿಗೆ ದಿನಗಣನೆ ಶುರುವಾಗಿದೆ, ಕ್ಯಾಪ್ಟನ್ ಅಭಿಮನ್ಯು 700 ಕೆ.ಜಿ ತೂಕದ ಮರದ ಅಂಬಾರಿ ಹೊತ್ತು ತಾಲೀಮು ನಡೆಸಿದರು, ದಸರಾ ಹಬ್ಬಕ್ಕೆ ಸಜ್ಜಾಗಲು ಸರ್ಕಾರ ವಿಶೇಷ ವ್ಯವಸ್ಥೆ ಮಾಡಿದೆ. ಜಂಬೂಸವಾರಿಯಲ್ಲಿ ಪ್ರಮುಖ ಆಕರ್ಷಣೆಯಾಗಿರುವ ಗಜಪಡೆಗೆ ಭಾಗವಹಿಸಲು ಶ್ರೀಮಂತ ಪಾರಂಪರಿಕವಾಗಿ ತರಬೇತಿ ನಡೆಯುತ್ತಿದೆ. ಇದೇ ನಡುವೆ, ಹಿರಿಯ ಕ್ಯಾಪ್ಟನ್ ಅಭಿಮನ್ಯು ತಮ್ಮ ಆಯಾ ಭಾರವನ್ನೂ ಹೊತ್ತು ಗಜಪಡೆಯ ಭಾಗವಾಗಿ ತಯಾರಾಗುತ್ತಿದ್ದಾನೆ. ಅಭಿಮನ್ಯು 700 ಕೆ.ಜಿ ತೂಕದ ಮರದ ಅಂಬಾರಿ ಹೊತ್ತು ಬನ್ನಿಮಂಟಪದವರೆಗೆ ತಾಲೀಮು ನಡೆಸಿತು.
ಈ ಕಾರ್ಯಕ್ರಮದ ಆರಂಭದಲ್ಲಿ ಗಜಪಡೆಯ ಸ್ಥಳದಲ್ಲಿ ಸಾಂಪ್ರದಾಯಿಕ ಪೂಜೆ ನೆರವೇರಿತು. ನಂತರ 14 ಆನೆಗಳ ಒಗ್ಗಟ್ಟು ಸೇರಿದಂತೆ ಅಭಿಮನ್ಯು ಮುಂಚೂಣಿಯಲ್ಲಿ ತಂಡವು ಸಿಡಿಮದ್ದು ತಾಲೀಮು ನಡೆಸಿತು. ಮೊದಲ ಹಂತದ ತರಬೇತಿಯಲ್ಲಿ ಗಜಪಡೆಯ ಆನೆಗಳು ಮತ್ತು ಅಶ್ವದಳದ ಕುದುರೆಗಳು ಸಡಗರದಿಂದ ಪಾಲ್ಗೊಂಡವು.
ಇತ್ತೀಚೆಗೆ ಭಾರೀ ಜನಸಾಗರ ನಿರ್ಮಾಣ ವಾಗಿರುವ ಹಿನ್ನಲೆಯಲ್ಲಿ ಆನೆಗಳಿಗೆ ತೂಕ ಹೊರುವುದಕ್ಕೆ ವಿಶೇಷ ಸಿದ್ಧತೆ ಕೈಗೊಂಡಿದೆ. ಮುಖ್ಯ ಉದ್ದೇಶವೆಂದರೆ ದಸರಾ ಜಂಬೂಸವಾರಿಯ ವೇಳೆ ಯಾವುದೇ ತಾಂತ್ರಿಕ ಸಮಸ್ಯೆಗಳಿಲ್ಲದೆ ಹಬ್ಬ ಸಮಾರಂಭ ಸಾಗಿಸಲೂ ಸಿದ್ಧತೆ ಆಗಿದೆ.
ನವಂಬರ್ 22ರಿಂದ ಪ್ರಾರಂಭವಾಗಲಿರುವ ದಸರಾ ಹಬ್ಬವು ಅಕ್ಟೋಬರ್ 2ರ ವರೆಗೆ ಸಡಗರದಲ್ಲಿ ನಡೆಯಲಿದೆ. ಈ ಬಾರಿಯ ದಸರಾ ಉದ್ಘಾಟನೆ ಪ್ರಸಿದ್ಧ ಲೇಖಕಿ ಬಾನು ಮುಷ್ತಾಕ್ ನಡೆಸಲಿದ್ದಾರೆ. ಮೈಸೂರಿನ ಸಾಂಸ್ಕೃತಿಕ ಪರಂಪರೆಯ ಶ್ರೇಷ್ಠ ಪ್ರದರ್ಶನವೊಂದಾಗಿ ದಸರಾ ಹಬ್ಬ ನಡೆಯಲಿದೆ.