ಇತ್ತೀಚಿನ ಸುದ್ದಿ
ಮಸ್ಕಿ ಮೌನೇಶ್ವರ ಮುದ್ದು ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವ: ಪಲ್ಲಕ್ಕಿ ಮಹೋತ್ಸವ
05/04/2026, 16:49
ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ಮಸ್ಕಿ ರಾಯಚೂರು
info.reporterkarnataka@gmail.com
ಶ್ರೀ ಗುರುವಪ್ಪ ತಾತ ಮತ್ತು ಚೆನ್ನಯ್ಯ ತಾತನವರ ಆಶೀರ್ವಾದದಿಂದ ದೇಗುಲದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಿಗಿದವು ಮೌನೇಶ್ವರ ದೇವಸ್ಥಾನದ ಧರ್ಮಾಧಿಕಾರಿ ಮೌನೇಶ ತಾತ ನೇತೃತ್ವದಲ್ಲಿ ಕಾರ್ಯಕ್ರಮಗಳು ಜರುಗಿದವು.
ಬೆಳಿಗ್ಗೆ ಮೌನೇಶ್ವರ ಅಭಿಷೇಕ, ಪಾದಪೂಜೆ, ಬೆಳಿಗ್ಗೆ 10ಕ್ಕೆ ಸಾಮೂಹಿಕ ಉಪಯನ, ಹೋಮ ಸಾಯಂಕಾಲ 5:00 ಗಂಟೆಗೆ ಗಂಗಾ ಪೂಜೆ, ಪುರವಂತಿಕೆ ಸೇವಾ ಕಾರ್ಯ, ಮಹಾ ಪ್ರಸಾದ ರಾತ್ರಿ 8ಕ್ಕೆ ದುರ್ಗಾದೇವಿ ಭಜನಾ ಮಂಡಳಿಯಿಂದ ಭಜನಾ ಕಾರ್ಯಕಮ ಜರುಗಿದವು. ಪ್ರಮುಖ ಬೀದಿಗಳಲ್ಲಿ ಪುರವಂತರ ಮೆರವಣಿಗೆ ಪಲ್ಲಕ್ಕಿ ಮಹೋತ್ಸವ ಕಳಸ ಕನ್ನಡ ಜೈಕಾರದೊಂದಿಗೆ ಮಸ್ಕಿ ಪಟ್ಟಣದಲ್ಲಿ ಜೈ ಘೋಷಗಳೊಂದಿಗೆ ಸಾರ್ವಜನಿಕರ ಮನಸ್ಸ ಆಕರ್ಷಿಸಲಾಯಿತು.



2ರಂದು ನಸುಕಿನ ಜಾವ 5ಕ್ಕೆ ಸುಪ್ರಭಾತ, ಮೌನೇಶ್ವರರಿಗೆ ವೇದೋಕ್ತ ಪಂಚಾಮೃತ ಅಭಿಷೇಕ, ಷೋಡಶೋಪಚಾರ ಪೂಜೆ, ಮಂಗಳಾರತಿ ಬೆ.7ರಿಂದ ಸಂಜೆ 8ರವರೆಗೆ ನಗರದ ಪ್ರಮುಖ ಬೀದಿಗಳ ಮೂಲಕ ಮೌನೇಶ್ವರ ಪಲ್ಲಕ್ಕಿಯ ಮೆರವಣಿಗೆ, ಪುರವಂತರ ಸೇವಾ ನಂದಿ ಕೋಲು ಕುಣಿತ, ಭಜನೆ ಮೊದಲಾದ ಕಲಾ ತಂಡಗಳು ಮೆರವಣಿಗೆಗೆ ಮೆರುಗು ಜರುಗಿದವು.
ರಾತ್ರಿ 8 ಗಂಟೆಗೆ ಧೂಳಗಾಯಿ ಸಮಾರಂಭದೊಂದಿಗೆ ಗವಿ ಪ್ರವೇಶವಾಗುವುದು. ಮಸ್ಕಿ ಪಟ್ಟಣದ ಮೌನೇಶ್ವರ ಭಕ್ತರು, ವಿಶ್ವಕರ್ಮ ಸಮಾಜದವರು, ವಿವಿಧ ಗ್ರಾಮಗಳ ಭಕ್ತರು ಜಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.













