11:36 AM Saturday4 - October 2025
ಬ್ರೇಕಿಂಗ್ ನ್ಯೂಸ್
Kodagu | ಡಿವೈಎಸ್ಪಿ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ಅ. 16 ರವರೆಗೆ… ಹೆತ್ತಬ್ಬೆಯನ್ನೇ ಕೊಂದ ಪಾಪಿ ಪುತ್ರ: ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಹತ್ಯೆ; ಆರೋಪಿಯ… Kodagu | ಮಂಜಿನ ನಗರಿ ಮಡಿಕೇರಿಯಲ್ಲಿ ಜನೋತ್ಸವಕ್ಕೆ ಜನಜoಗುಳಿ: ದಶ ಮಂಟಪಗಳಿಂದ ಶೋಭಾ… Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ… ಮಡಿಕೇರಿ ದಸರಾ ಶೋಭಯಾತ್ರೆಗೆ ತೆರೆ: ದಶಮoಟಪಗಳ ತೀರ್ಪುಗಾರರ ವಿರುದ್ದ ಆಕ್ರೋಶ; ಪ್ರತಿಭಟನೆ ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ ವಿಶ್ವ ವಿಖ್ಯಾತ ಮೈಸೂರು ದಸರಾ: ಜಂಬೂ ಸವಾರಿಗೆ ಗಜಪಡೆ ಸಜ್ಜು ಮೈಸೂರು ಅರಮನೆಗೆ ಬೆಳ್ಳಿ ರಥದಲ್ಲಿ ಹೊರಟ ಚಾಮುಂಡಿ ದೇವಿ: ಬಿಗಿ ಬಂದೋಬಸ್ತ್ Bangaluru | ಇತಿಹಾಸಕಾರ, ಲೇಖಕ ಡಾ. ರಾಮಚಂದ್ರ ಗುಹಾಗೆ ಮಹಾತ್ಮ ಗಾಂಧಿ ಸೇವಾ…

ಇತ್ತೀಚಿನ ಸುದ್ದಿ

ಮಸ್ಕತ್‌ನ ತುಳು ಮನಸ್ಸುಗಳನ್ನು ಗೆದ್ದ ‘ಮಿ.ಮದಿಮಾಯೆ’ ! ; ಭರವಸೆ ಮೂಡಿಸಿದ ಯುವ ಚಿತ್ರ ತಂಡ

02/12/2023, 20:31

ವೆಂಚರ್ ಎಂಟರ್ ಟೈನ್ಮೆಂಟ್ಸ್ ಸಾರಥ್ಯದಲ್ಲಿ ಎಂ.ಎಂ.ಎಂ. ಗ್ರೂಪ್ಸ್ ನಿರ್ಮಾಣದ ‘ಮಿಸ್ಟರ್ ಮದಿಮಯೆ’ ತುಳು ಚಿತ್ರ ಮಸ್ಕತ್‌ನ ವೋಕ್ಸ್ ಚಿತ್ರಮಂದಿರ ಮತ್ತು ಸಲಲಾದ ಸಿನಿಪೋಲಿಸ್ ಚಿತ್ರಮಂದಿರದಲ್ಲಿ ಪ್ರದರ್ಶನಗೊಂಡು ಅಮೋಘ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ.

ಯುವ ಚಿತ್ರ ತಂಡ ನಿರ್ಮಿಸಿದ ಮಿ.ಮದಿಮಾಯೆ ಸಿನಿಮಾ ನಿರೀಕ್ಷೆಗೂ ಮೀರಿ ಜನ ಮೆಚ್ಚುಗೆಗೆ ಪಾತ್ರವಾಗಿದ್ದು, ಚಿತ್ರವನ್ನು ವೀಕ್ಷಿಸಿದ ಮಂದಿ ಚಿತ್ರತಂಡದ ಪ್ರಯತ್ನವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಈ ಮೂಲಕ ಮಿ.ಮದಿಮಾಯೆ ಚಿತ್ರ ಹೊಸ ನಿರೀಕ್ಷೆಯನ್ನು ಮೂಡಿಸಿದೆ.

ಸ್ಪೆಷಲ್ ಪ್ರೀಮಿಯರ್ ಶೋ ಸಂದರ್ಭದಲ್ಲಿ ಚಿತ್ರದ ಪ್ರಮುಖ ಪಾತ್ರದಲ್ಲಿರುವ ಸಾಯಿ ಕೃಷ್ಣ ಕುಡ್ಲ, ರವಿಕಾಂತ್ ಪೂಜಾರಿ, ರವಿ ರಾಮಕುಂಜ, ಸುನಿಲ್ ನೆಲ್ಲಿಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು.

ಶ್ವೇತಾ ಸುವರ್ಣ, ಮನೋಜ್ ಡಿಸೋಜಾ, ಮಾಧುರಿ ಸುವರ್ಣ, ಸುನಿಲ್ ಮಿನೇಜಸ್ , ಎಲ್ಸನ್ ಡಿಕೋಸ್ತ ಮೊದಲಾದವರನ್ನೊಳಗೊಂಡ ವೆಂಚರ್ ಎಂಟರ್ ಟೈನ್ ಮೆಂಟ್ಸ್ ಸಾರಥ್ಯದಲ್ಲಿ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ಮಿಸ್ಟರ್ ಮದಿಮಾಯೆ ಜ.5 ರಂದು ತುಳುನಾಡಿನಾದ್ಯಂತ ಪ್ರದರ್ಶನಗೊಳ್ಳಲಿದೆ.
ಮಸ್ಕತ್‌ನಲ್ಲಿ ಸಿನಿಮಾ ವೀಕ್ಷಿಸಿದ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಂಪೂರ್ಣ ಹಾಸ್ಯದ ಜತೆಗೆ ಉತ್ತಮ ಕತೆ ಇದೆ, ಸಮಾಜಕ್ಕೆ ಸಂದೇಶವೂ ಇದೆ ಹಾಗೂ ಕುಟುಂಬದೊಂದಿಗೆ ವೀಕ್ಷಿಸ ಬಹುದಾದ ಸಿನಿಮಾ ಇದಾಗಿದ್ದು, ಮುಂದಿನ ದಿನಗಳಲ್ಲಿ ಬೇರೆ ಬೇರೆ ತಾಣಗಳಲ್ಲಿ ಸಿನಿಮಾದ ಪ್ರೀಮಿಯರ್ ಶೋ ನಡೆಯಲಿದೆ.

ಬಹುತೇಕ ಹೊಸ ಕಲಾವಿದರನ್ನು ಒಳಗೊಂಡಿರುವ ಈ ಚಿತ್ರಕ್ಕೆ ನವೀನ್ ಜಿ ಪೂಜಾರಿ ಚೊಚ್ಚಲ ಬಾರಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಹಾಡುಗಳು ಈಗಾಗಲೇ ಸದ್ದು ಮಾಡುತ್ತಿದ್ದು, ಚಿತ್ರವು ಜ.5 ರಂದು ಎಲ್ಲಾ ಕಡೆಗಳಲ್ಲಿ ಬಿಡುಗಡೆಗೊಳ್ಳಲಿದೆ.

ಅದಕ್ಕಿಂತ ಮುಂಚಿತವಾಗಿ ಪ್ರಪಂಚದಾದ್ಯಂತ ವಿವಿಧ ಸ್ಥಳಗಳಲ್ಲಿ ಪ್ರೀಮಿಯರ್ ಶೋ ಗಳನ್ನು ನಡೆಸಲು ತಂಡ ಯೋಜನೆ ರೂಪಿಸುತ್ತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು