ಇತ್ತೀಚಿನ ಸುದ್ದಿ
Murder | ಚಿಕ್ಕಮಗಳೂರಲ್ಲಿ ತ್ರಿಬಲ್ ಮರ್ಡರ್: ವ್ಯಕ್ತಿಯಿಂದ ಅತ್ತೆ, ನಾದಿನಿ, 7 ವರ್ಷದ ಮಗುವಿನ ಅಮಾನುಷ ಹತ್ಯೆ
02/04/2025, 09:27

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಿಕ್ಕಮಗಳೂರು ತಾಲೂಕಿನ ಮಾಗಲು ಗ್ರಾಮದಲ್ಲಿ ತ್ರಿಬಲ್ ಮರ್ಡರ್ ನಡೆದಿದೆ. ವ್ಯಕ್ತಿಯೊಬ್ಬರು ಅಮಾನುಷವಾಗಿ ತನ್ನ ಅತ್ತೆ, ನಾದಿನಿ ಹಾಗೂ 7 ವರ್ಷದ ಮಗುವನ್ನು ಕೊಲೆ ಮಾಡಿದ್ದಾನೆ.
ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಸಮೀಪದ ಮಾಗಲು ಗ್ರಾಮದ ಜ್ಯೋತಿ (50), ಸಿಂಧು (26) ಹಾಗೂ 7 ವರ್ಷದ ಮಗು ಮೃತರು ಎಂದು ಗುರುತಿಸಲಾಗಿದೆ. ಪೂರ್ಣಪ್ರಜ್ಞಾ ಶಾಲೆಯ ಡ್ರೈವರ್ ರತ್ನಾಕರ್ ಹಂತಕ ಎಂದು ತಿಳಿದು ಬಂದಿದೆ.
ಮೃತ ಸಿಂಧು ಅವರ ಗಂಡ ಅವಿನಾಶ್ ಕಾಲಿಗೂ ಗುಂಡೇಟು ತಗುಲಿದೆ.
ನಾಡ ಬಂದೂಕಿನಿಂದ ಮೂವರನ್ನ ರತ್ನಾಕರ್ ಹತ್ಯೆಗೈದಿದ್ದಾನೆ. ಈ ಕುರಿತು ವೀಡಿಯೊ ಕೂಡ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾನೆ.
ಸ್ಥಳಕ್ಕೆ ಬಾಳೆಹೊನ್ನೂರು ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.