ಇತ್ತೀಚಿನ ಸುದ್ದಿ
ಮುಂಗಾರು ವಿಳಂಬ: ಕಾಗವಾಡದಲ್ಲಿ ಮೇವು, ನೀರಿನ ಕೊರತೆ; ಬರ ಸಮೀಕ್ಷೆಗೆ ಮುಂದಾದ ಬೆಳಗಾವಿ ಡಿಸಿ; ಶಾಸಕ ರಾಜು ಕಾಗೆ ಪರಿಶೀಲನೆ
05/08/2023, 13:41

ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಚಿಕ್ಕೋಡಿ ಉಪವಿಭಾಗದ ಕಾಗವಾಡ ವಿಧಾನಸಭಾ ಕ್ಷೇತ್ರದ ಶಿವನೂರ,ಜಂಬಗಿ,ಸಂಬರಗಿ,ಶಿರೂರ,ಖಿಳೆಗಾಂವ್, ಮದಭಾವಿ ಹಾಗೂ ಅನಂತಪುರ ಗ್ರಾಮಗಳಿಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಭೇಟಿ ನೀಡಿ ಬರ ಪರಿಸ್ಥಿತಿ ಅವಲೋಕಿಸಿದರು.
ಮುಂಗಾರು ವಿಳಂಬ ಹಿನ್ನೆಲೆ, ಭೀತ್ತನೆ ಕಾರ್ಯ ಮಾಡದೆ ರೈತರು ಕಂಗಾಲಾಗಿದ್ದಾರೆ ದನ- ಕರುಗಳಿಗೆ ಮೇವಿನ ಸಮಸ್ಯೆ ಜ್ವಲಂತವಾಗಿದೆ, ಗಡಿಯಲ್ಲಿ ಸಂಪೂರ್ಣ ಬರ ಆವರಿಸಿ ಜನರು ಗಡಿಭಾಗದ ಮಹಾರಾಷ್ಟ್ರಕ್ಕೆ ಗುಳೆ ಹೋಗುವ ಪರಿಸ್ಥಿತಿ ಬಂದಿದೆ ಕೂಡಲೆ ವರದಿ ಸಲ್ಲಿಸಿ ಬರ ಘೋಷಣೆಗೆ ಶಾಸಕ ರಾಜು ಕಾಗೆ ಜಿಲ್ಲಾಧಿಕಾರಿ ಮುಖೇನ ಮನವಿ ಮಾಡಿದ್ದಾರೆ. ಮುಂಗಾರು ವಿಳಂಬವಾದ ಹಿನ್ನೆಲೆಯಲ್ಲಿ ಜಿಲ್ಲೆಗೆ ಬರ ಆವರಿಸುವ ಭೀತಿ ಹೆಚ್ಚಾಗಿತ್ತು ಆದರೆ ಮೊನ್ನೆ ಸುರಿದ ಮಳೆಗೆ ಜಿಲ್ಲೆಯಲ್ಲಿ ನೀರು ಹಾಗೂ ಮೇವಿನ ಸಮಸ್ಯೆ ಕಡಿಮೆಯಾಗಿದೆ. ಆದರೆ ಕಾಗವಾಡ ವಿಧಾನಸಭಾ ಕ್ಷೇತ್ರದ ಮದಭಾವಿ ಹಾಗೂ ಅನಂತಪುರ ಹೂಬಳಿ ಕ್ಷೇತ್ರಕ್ಕೆ ಮಳೆ ನಿರೀಕ್ಷೆಗಿಂತಲೂ ಕಡಿಮೆ ಆಗಿದೆ ಅಂದಾಜು – 9 ಮಳೆ ವರದಿಯಾಗಿದೆ. ಇದರಿಂದ ಕ್ಷೇತ್ರದಲ್ಲಿ ಬರ ಪರಿಸ್ಥಿತಿ ಎದುರಾದ ಹಿನ್ನೆಲೆ ಸರ್ಕಾರ ಮಟ್ಟದಲ್ಲಿ ವರದಿ ಸಲ್ಲಿಸಿ, ಪ್ರತಿಶ ಗ್ರಾಮದಲ್ಲೂ ಗೋಶಾಲೆಗಿಂತ ಪ್ರತಿ ಮನೆಗೂ ಮೇವು ಪಶು ಆಹಾರದ ವ್ಯವಸ್ಥೆ ಮಾಡುವ ಬಗ್ಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಭರವಸೆ ನೀಡಿದರು.