ಇತ್ತೀಚಿನ ಸುದ್ದಿ
ಮುಂಗಾರು ಮುಗಿಯುವ ಮುನ್ನವೇ ಕುಡಿಯುವ ನೀರಿಗೆ ಹಾಹಾಕಾರ!: ಬರದ ಕರಿಛಾಯೆಯಲ್ಲಿ ಜನರ ಬದುಕು!!
04/09/2023, 10:43

ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಪ್ರಸಕ್ತ ಸಾಲಿನ ಮುಂಗಾರು ಮುಗಿಯುವ ಮುನ್ನವೇ ನೀರಿಗಾಗಿ ಜನರ ಪರದಾಟ ಆರಂಭವಾಗಿದೆ. ರಾಜ್ಯಾದ್ಯಂತ ಈ ಬಾರಿ ಮಳೆ ಪ್ರಮಾಣ ತೀರಾ ಇಳಿಮುಖವಾಗಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಈ ಬಾರಿ ನೀರಿನ ಸಮಸ್ಯೆ ಹೇಳಿ ತೀರದು.
ಅಥಣಿ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರದ ಪರಿಸ್ಥಿತಿ ಏರ್ಪಟ್ಟಿದ್ದು ಸಕಾಲಕ್ಕೆ ಮಳೆಯಾಗದ ಕಾರಣ ಬರದ ಛಾಯೆ ಆವರಿಸಿದೆ. ತಾಲೂಕಿನ ಅಡಹಳ್ಳಿ,ಕೋಹಳ್ಳಿ,ಕಕಮರಿ,ಐಗಳಿ ಸೇರಿದಂತೆ ಕೊಟ್ಟಲಗಿ ಭಾಗದಲ್ಲಿ ಕುಡಿಯುವ ನೀರಿಗೆ ಜನರು ಪರದಾಡುವ ಪರಿಸ್ಥಿತಿ ಎದುರಾಗಿದ್ದು ಕಿಲೋ ಮೀಟರಗಟ್ಟಲೆ ಸಂಚರಿಸಿ ಕುಡಿಯುವ ನೀರು ತರಬೇಕಾಗಿದ್ದು ಮಹಿಳೆಯರು,ಪುರುಷರು ನಿತ್ಯದ ದುಡಿಮೆ ನಿಲ್ಲಿಸಿ ನೀರಿಗಾಗಿ ಅಲೆಯುವಂತಾಗಿದೆ.
ರಾಜ್ಯದ ಜನರಿಗೆ ವಿವಿಧ ಭಾಗ್ಯಗಳನ್ನು ಕೊಟ್ಟಿರುವ ರಾಜ್ಯ ಸರ್ಕಾರ ಕೂಡಲೇ ಅಥಣಿ ತಾಲೂಕಿನ ಕೆಲವು ಗ್ರಾಮಗಳನ್ನು ಬರಪೀಡಿತ ಗ್ರಾಮಗಳೆಂದು ಘೋಷಿಸಿ ಜನರಿಗೆ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವು ಕೊಡುವ ಮೂಲಕ ಸ್ಪಂದಿಸಬೇಕೆಂದು ಜನರು ಆಗ್ರಹಿಸಿದ್ದಾರೆ.