ಇತ್ತೀಚಿನ ಸುದ್ದಿ
ಮುಳ್ಳಯ್ಯನಗಿರಿ: ಶಾಲಾ ಮಕ್ಕಳಿದ್ದ ಜೀಪ್ ಪಲ್ಟಿ; 6 ವಿದ್ಯಾರ್ಥಿಗಳಿಗೆ ಗಾಯ; ಆಸ್ಪತ್ರೆಗೆ ದಾಖಲು
22/12/2025, 18:24
ಸಂತೋಪ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮುಳ್ಳಯ್ಯನಗಿರಿ ರಸ್ತೆಯಲ್ಲಿ ಶಾಲಾ ಮಕ್ಕಳ ಜೀಪ್ ಪಲ್ಟಿಯಾದ ಪರಿಣಾಮ 6 ಮಕ್ಕಳಿಗೆ ಸಣ್ಣ-ಪುಟ್ಟ ಗಾಯವಾಗಿದ್ದು,ವಆಸ್ಪತ್ರೆಗೆ ದಾಖಲಿಸಲಾಗಿದೆ.
ಕೇರಳದಿಂದ ಬಸ್ ಮಾಡಿಕೊಂಡು ಮಕ್ಕಳನ್ನು ಶಾಲಾ ಪ್ರವಾಸಕ್ಕೆ ಕರೆದು ತರಲಾಗಿತ್ತು. ಟ್ರಾವೆಲ್ ಏಜೆನ್ಸಿ ಮೂಲಕ ಕೇರಳದಿಂದ ಶಾಲಾ ಮಕ್ಕಳು ಆಗಮಿಸಿದ್ದರು.
ಬಸ್ ಹೋಗಲ್ಲ ಅಂತ, ಜೀಪ್ ನಲ್ಲಿ ಮಕ್ಕಳನ್ನು ಕರೆದು ತರಲಾಗಿತ್ತು. ಚಾಲಕನ ಅತಿ ವೇಗದಿಂದ ನಿಯಂತ್ರಣ ತಪ್ಪಿ ಜೀಪ್ ಪಲ್ಟಿಯಾಗಿದೆ.
ಅಪಘಾತವಾಗುತ್ತಿದ್ದಂತೆ ಚಾಲಕ ಜೀಪ್ ಬಿಟ್ಟು ಪರಾರಿಯಾಗಿದ್ದಾನೆ. 6 ಮಕ್ಕಳನ್ನ ಜಿಲ್ಲಾಸ್ಪತ್ರೆಗೆ ಸ್ಥಳಿಯರು ದಾಖಲಿಸಿದ್ದಾರೆ.
ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.












