11:48 PM Wednesday17 - December 2025
ಬ್ರೇಕಿಂಗ್ ನ್ಯೂಸ್
ನಕಲಿ‌ ದಾಖಲೆ ಸೃಷ್ಟಿಸಿ 512 ಎಕರೆ ಅರಣ್ಯ-ಕಂದಾಯ ಭೂಮಿ ಕಬಳಿಕೆ ಯತ್ನ: ಆರೋಪಿ… ಇಂಜಿನಿಯರಿಂಗ್ ಸೀಟುಗಳನ್ನು ನುಂಗುತ್ತಿರುವ ಖಾಸಗಿ ವಿಶ್ವವಿದ್ಯಾಲಯಗಳು: ಸದನದ ಗಮನ ಸೆಳೆದ ಶಾಸಕ ಡಾ.… Kodagu | ಭಾಗಮಂಡಲ ಮೀಸಲು ಅರಣ್ಯದಲ್ಲಿ ಅಕ್ರಮ ಜಿಂಕೆ ಬೇಟೆ: ಆರೋಪಿಗಳು ಅರಣ್ಯ… 1600 ಪಿ.ಎಸ್.ಐ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ: ಗೃಹ ಸಚಿವ ಡಾ.ಜಿ.ಪರಮೇಶ್ವರ ಸಂಸತ್ ಅಧಿವೇಶನ | ರಾಜ್ಯಸಭೆಯಲ್ಲಿ ವೋಟ್‌ ಚೋರಿ ಚರ್ಚೆ; ಕಾಂಗ್ರೆಸ್‌ ವಿರುದ್ಧ ಗುಡುಗಿದ… Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ…

ಇತ್ತೀಚಿನ ಸುದ್ದಿ

ಮುಲ್ಕಿ: ಯುವತಿಯ ಸ್ನಾನದ ದೃಶ್ಯ ಸೆರೆ ಹಿಡಿಯಲು ಬಾತ್ ರೂಮ್ ನಲ್ಲಿ ಮೊಬೈಲ್ ಇಟ್ಟ ಯುವಕನ ಬಂಧನ

05/08/2023, 11:19

ಮಂಗಳೂರು(reporterkarnataka.com): ಉಡುಪಿಯ ಕಾಲೇಜೊಂದರ ಲೇಡಿಸ್ ಟಾಯ್ಲೆಟ್ ನಲ್ಲಿ ಹುಡುಗಿಯರೇ ಮೊಬೈಲ್ ಚಿತ್ರೀಕರಣ ನಡೆಸಿದ್ದಾರೆ ಎನ್ನಲಾದ ಪ್ರಕರಣ ಜೀವಂತವಾಗಿರುವಾಗಲೇ ನೆರೆಯ ಮಂಗಳೂರಿನ ಹೊರವಲಯದಲ್ಲಿ ಯುವತಿಯ ಸ್ನಾನದ ದೃಶ್ಯವನ್ನು ಸೆರೆ ಹಿಡಿಯಲು ಯುವಕನೊಬ್ಬ ಮೊಬೈಲ್ ಇಟ್ಟ ಪ್ರಕರಣ ಬೆಳಕಿಗೆ ಬಂದಿದೆ. ಯುವಕನ ಬಂಧಿಸಲಾಗಿದೆ.
ನೆರೆಮನೆಯ ಯುವತಿಯ ಸ್ನಾನದ ವಿಡಿಯೋ ಮಾಡಲು ಯುವಕ ಬಾತ್ ರೂಮ್ ನಲ್ಲಿ ಮೊಬೈಲ್ ಇಟ್ಟಿದ್ದ. ಇದೀಗ ಯುವಕನನ್ನು ಮುಲ್ಕಿ ಪೊಲೀಸರು ಬಂಧಿಸಿದ್ದಾರೆ.
ಮುಲ್ಕಿಯ ಪಕ್ಷಿಕೆರೆಯ ಸುಮಂತ್ ಪೂಜಾರಿ (22) ಬಂಧಿತ ಯುವಕ. ಈತ ತನ್ನ ನೆರೆಮನೆಯ ಬಾತ್ ರೂಂ ನಲ್ಲಿ ಮೊಬೈಲ್ ಬಚ್ಚಿಟ್ಟಿದ್ದನು. ಈ ಕೃತ್ಯ ಎಸಗಿದ ಯುವಕನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಮಂಗಳೂರು ನಗರ ಹೊರವಲಯದ ಮುಲ್ಕಿಯ ಪಕ್ಷಿಕರೆಯಲ್ಲಿ ಸುಮಂತ್ ಪೂಜಾರಿ ವಿಡಿಯೋ ಗಾಗಿ ನೆರೆಮನೆಯ ಸ್ನಾನಗೃಹದಲ್ಲಿ ಮೊಬೈಲ್ ಇಟ್ಟಿದ್ದನು. ಪಕ್ಕದ ಮನೆಯ ಯುವತಿಯ ಸ್ನಾನದ ವಿಡಿಯೋ ಗಾಗಿ ಈತ ಮೊಬೈಲ್ ಅಡಗಿಸಿ ಇಟ್ಟಿದ್ದನು.ಆದರೆ ಯುವತಿಯ ಬದಲಾಗಿ ಯುವತಿಯ ಅಣ್ಣ ಬಾತ್ ರೂಂ ಗೆ ಸ್ನಾನಕ್ಕಾಗಿ ಬಂದಿದ್ದನು.

ಬಾತ್ ರೂಂ ನಲ್ಲಿ ಮೊಬೈಲ್ ಇರುವುದನ್ನು ಯುವತಿಯ ಅಣ್ಣ ಗಮನಿಸಿದ್ದಾನೆ. ಈ ವೇಳೆ ಸುಮಂತ್ ಯುವತಿಯ ಅಣ್ಣನ ಕೈಗೆ ಸಿಕ್ಕಿಬಿದ್ದಿದ್ದಾನೆ. ಸುಮಂತ್ ವಿರುದ್ಧ ಯುವತಿಯ ಅಣ್ಣ ಪ್ರಜ್ವಲ್ ಮುಲ್ಕಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಆರೋಪಿ ಸುಮಂತ್ ಪೂಜಾರಿಯನ್ನು ಮುಲ್ಕಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು