7:03 AM Monday22 - December 2025
ಬ್ರೇಕಿಂಗ್ ನ್ಯೂಸ್
ಗಾಂಧಿ ಭಾರತವನ್ನು ಗೋಡ್ಸೆ ಭಾರತವಾಗಿ ಮಾಡಲು ಬಿಡುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಟಿಪ್ಪರ್ -ಬೊಲೆರೋ ಜೀಪ್ ಡಿಕ್ಕಿ: ಕರ್ತವ್ಯದಲ್ಲಿ ತೆರಳುತ್ತಿದ್ದ ಬಿಎಸ್ಸೆನ್ನೆಲ್ ಸಿಬ್ಬಂದಿಗಳಿಗೆ ಗಾಯ ಹೌದು…ವೈದ್ಯೋ ನಾರಾಯಣೋ ಹರಿ; ಆದರೆ, ದಾದಿಯರು ಎಲೆ ಮರೆಯ ಕಾಯಿ! ಪೌರ ಕಾರ್ಮಿಕರು ಸೇರಿ ಎಲ್ಲ ಕಾರ್ಮಿಕರಿಗೆ ಪಾಲಿಕೆಯಿಂದಲೇ ನೇರ ವೇತನ ಪಾವತಿಗೆ ಕ್ರಮ:… ಕ್ರೆಡಲ್‌ನಿಂದ ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನಾಚರಣೆ: ಚಿತ್ರ ಬಿಡಿಸಿದ ಪ್ರೌಢಶಾಲೆ ಮಕ್ಕಳು ಮಡಿಕೇರಿ ಹನಿಟ್ರ್ಯಾಪ್ ಪ್ರಕರಣ: ನಾಪತ್ತೆಯಾಗಿದ್ದ ಮತ್ತಿಬ್ಬರು ಆರೋಪಗಳ ಬಂಧನ Belagavi | ಆರೋಗ್ಯ ಸೇತು-ಸಂಚಾರಿ ಆರೋಗ್ಯ ಘಟಕಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ವಲಸಿಗರಿಂದ ಅಕ್ರಮ ಚಟುವಟಿಕೆ: ಗಡಿಪಾರಿಗೆ ಸದನದಲ್ಲಿ ಶಾಸಕ ಡಾ. ಮಂತರ್ ಗೌಡ ಆಗ್ರಹ ಉರುಳಿಗೆ ಸಿಲುಕಿ ಹುಲಿ ಸಾವಿನ ಪ್ರಕರಣ: ಆರೋಪಿಗಳ ಪತ್ತೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಕಲಿ‌ ದಾಖಲೆ ಸೃಷ್ಟಿಸಿ 512 ಎಕರೆ ಅರಣ್ಯ-ಕಂದಾಯ ಭೂಮಿ ಕಬಳಿಕೆ ಯತ್ನ: ಆರೋಪಿ…

ಇತ್ತೀಚಿನ ಸುದ್ದಿ

ಮುಳಿಯ ಜ್ಯುವೆಲ್ಸ್ ನಲ್ಲಿ ‘ಚಿನ್ನದಂತ ಅಪ್ಪ ನನ್ನ ಅಪ್ಪ’ ವಿಶೇಷ ಅನುಬಂಧ ಕಾರ್ಯಕ್ರಮ

23/06/2024, 19:28

ಪುತ್ತೂರು(reporterkarnataka.com): ಒಳ್ಳೆ ವಿಚಾರಗಳನ್ನು ನಮ್ಮ ಸಂಸ್ಕೃತಿಗೆ ಅಳವಡಿಸಿಕೊಳ್ಳುವುದು ಹಿರಿಯರಿಂದ ನಡೆದು ಬಂದ ಸಂಪ್ರದಾಯವಾಗಿದೆ. ಈ ನಿಟ್ಟಿನಲ್ಲಿ ಮುಳಿಯದ ವತಿಯಿಂದ ಅಪ್ಪಂದಿರ ದಿನಕ್ಕೆ ವಿಶೇಷ ಸ್ಥಾನವನ್ನು ನೀಡಿ ಆಚರಣೆಗೆ ತರಲಾಗಿದೆ. ಐದು ಶೋರೂಂ ನಲ್ಲಿ ಸೇರಿದ ಜನರನ್ನು ನೋಡಿದರೆ ಮಹತ್ವವಿದೆ ಎಂಬುದು ತಿಳಿಯುತ್ತದೆ ಎಂದು ಮುಳಿಯ ಜ್ಯುವೆಲ್ಸ್ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಹೇಳಿದರು.

ಶನಿವಾರ ಪುತ್ತೂರು ಶಾಖೆಯಲ್ಲಿ ಮುಳಿಯ ಜ್ಯುವೆಲ್ಸ್ ವತಿಯಿಂದ ವಿಶ್ವ ಅಪ್ಪಂದಿರ ದಿನದ ಅಂಗವಾಗಿ ಚಿನ್ನದಂತ ಅಪ್ಪ ನನ್ನ ಅಪ್ಪ ವಿನೂತನ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಂದೆಯವರು ಸಂಸ್ಥೆ ನಡೆಸುವ ಸಮಯದಲ್ಲಿ ೯೧೬ ಚಿನ್ನಾಭರಣ ಎಂಬ ವ್ಯವಸ್ಥೆ ಇಲ್ಲದಿದ್ದರೂ, ಅವರ ಕಾಲದಲ್ಲಿ ನೀಡಿದ ಚಿನ್ನಾಭರಣಗಳು ಅದೇ ಗುಣಮಟ್ಟದಲ್ಲಿತ್ತು. ಆ ಪ್ಯೂರಿಟಿಯನ್ನು ಅಂದು ಗ್ರಾಹಕರಿಗೆ ನೀಡಿದ ಕಾರಣದಿಂದ ಇಂದಿಗೂ ಮುಳಿಯದ ಹೆಸರು ಉತ್ತಮವಾಗಿ ಉಳಿದುಕೊಂಡಿದೆ. ಸಂಸ್ಥೆಯ ಬೆಳವಣಿಗೆಯಲ್ಲೂ ಇದು ಮಹತ್ವದ ಪಾತ್ರವನ್ನು ವಹಿಸಿದೆ ಎಂದು ತಿಳಿಸಿದರು.
ಚಿನ್ನದಂತ ಅಪ್ಪ ನನ್ನ ಅಪ್ಪ ವಿನೂತನ ಕಾರ್ಯಕ್ರಮವನ್ನು ಮುಳಿಯ ಸಂಸ್ಥೆಯ ಹಿರಿಯರಾದ ಶ್ಯಾಮ್ ಭಟ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸಿಲ್ವರ್ ಉತ್ಸವದ ಅಂಗವಾಗಿ ವಿವಿಧ ವಿನ್ಯಾಸದ ಆಭರಣಗಳನ್ನು ಬಿಡುಗಡೆ ಮಾಡಲಾಯಿತು.
ಗ್ರಾಹಕರಾದ ರವಿ ಕುಮಾರ್ ಮಾತನಾಡಿ, ಹಿರಿಯರ ಕಾಲದಿಂದಲೂ ಮುಳಿಯದ ಗ್ರಾಹಕರಾಗಿದ್ದು, ಚಿನ್ನ ಎಂದರೆ ಮುಳಿಯ ಎಂದು ಹೆಸರುವಾಸಿಯಾಗಿದೆ. ಮುಳಿಯ ಸಂಸ್ಥೆ ವ್ಯಾಪಾರಕ್ಕೆ ಮಾತ್ರ ಸೀಮಿತವಾಗಿರದೆ, ಗ್ರಾಹಕರ ಸಂತೃಪ್ತಿಗೂ ಹೆಚ್ಚಿನ ಮಹತ್ವ ನೀಡುತ್ತಿರುವುದು ಕಾರ್ಯಕ್ರಮಗಳ ಮೂಲಕ ತಿಳಿಯುತ್ತದೆ ಎಂದರು.
ವಿಶೇಷ ರೀತಿಯ ಅನುಭಂದ ಕಾರ್ಯಕ್ರಮ, ವಿನೂತನ ಆಟಗಳು, ಪ್ರಶ್ನೋತ್ತರಗಳು, ಅಂತರಾತ್ಮದ ಮಾತುಗಳ ಕಾರ್ಯಕ್ರಮ ನಡೆಯಿತು. ಸಂಗೀತ ಮನೋರಂಜನೆಯನ್ನು ಗ್ರಾಹಕರಿಗೆ ನೀಡಲಾಯಿತು. ಗ್ರಾಹಕ ಇಸ್ಮಾಯಿಲ್ ನೆಲ್ಯಾಡಿ ಅಭಿಪ್ರಾಯಗಳನ್ನು ಹಂಚಿಕೊಂಡರು.
ಸಂಸ್ಥೆಯ ನಿರ್ದೇಶಕಿ ಕೃಷ್ಣವೇಣಿ ಪ್ರಸಾದ್ ಮುಳಿಯ, ಶಾಖಾ ಪ್ರಬಂಧಕ ರಾಘವೇಂದ್ರ ಪಾಟೀಲ್, ಮಾರುಕಟ್ಟೆ ಮುಖ್ಯಸ್ಥ ಸಂಜೀವ, ಪ್ಲೋರ್ ಮ್ಯಾನೇಜರ್ ಆನಂದ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.
ಪ್ಲೋರ್ ಮ್ಯಾನೇಜರ್ ಪ್ರವೀಣ್ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿ ಸೌರಭ ರಾವ್ ಸಹಕರಿಸಿದರು.
*ಏಕಕಾಲದಲ್ಲಿ ಕಾರ್ಯಕ್ರಮ:*
ಪುತ್ತೂರು, ಬೆಳ್ತಂಗಡಿ, ಮಡಿಕೇರಿ, ಗೋಣಿಕೊಪ್ಪಲ್, ಬೆಂಗಳೂರು ಶೋರೋಂ ನಲ್ಲಿ ಏಕಕಾಲದಲ್ಲಿ ಚಿನ್ನದಂತ ಅಪ್ಪ ನನ್ನ ಅಪ್ಪ ವಿನೂತನ ಕಾರ್ಯಕ್ರಮ ನಡೆಯಿತು. ೨೦೦ಕ್ಕೂ ಅಧಿಕ ತಂದೆ ಮಗ, ಅಪ್ಪ ಮಗಳು ಜೋಡಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮನರಂಜನಾ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡರು.

ಇತ್ತೀಚಿನ ಸುದ್ದಿ

ಜಾಹೀರಾತು