6:22 PM Sunday10 - November 2024
ಬ್ರೇಕಿಂಗ್ ನ್ಯೂಸ್
ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಓದುವ ಮಕ್ಕಳ ಪ್ರೋತ್ಸಾಹ ಧನ 1ರಿಂದ 2 ಲಕ್ಷಕ್ಕೆ… ಕೋವಿಡ್‌; ಯಡಿಯೂರಪ್ಪ, ಶ್ರೀರಾಮುಲು ವಿರುದ್ಧ ಭ್ರಷ್ಟಚಾರ ನಿಗ್ರಹ ಕಾಯ್ದೆಯಡಿಯಲ್ಲಿ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಕೋವಿಡ್ ಹಗರಣದ ಕುರಿತು ರಾಜಕೀಯ ‌ದ್ವೇಷಕ್ಕೆ ಪ್ರಾಸಿಕ್ಯೂಶನ್ ಅನುಮತಿ: ಯಡಿಯೂರಪ್ಪ ಹಣಗೆರೆಕಟ್ಟೆ ದೇವಸ್ಥಾನದ ಹಣ ಏರುಪೇರು ಆಗಿದ್ದು ಹೇಗೆ!?: ದೇವರ ಹಣದ ಲೆಕ್ಕ ಪಕ್ಕಾ… ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ನೂತನ ಶಸ್ತ್ರ ಚಿಕಿತ್ಸ ಕೊಠಡಿ ಕಾರ್ಯಾರಂಭ ವಿಧಾನಸಭೆ ಉಪ ಚುನಾವಣೆ: ಮತದಾನದ 48 ಗಂಟೆ ಮುನ್ನ ಚುನಾವಣಾ ಚರ್ಚೆ, ಸಂವಾದ,… ರೆಡ್ಡಿ ಪಟಾಲಂ ರಾಜಕೀಯವಾಗಿ ಬೆಳೆಯಲು ಅವಕಾಶ ಬೇಡ: ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಗೆ ಸೋಲುವ ಭೀತಿ ಎದುರಾಗಿದೆ; 20 ದಿನದೊಳಗೆ ಮುಖ್ಯಮಂತ್ರಿ ರಾಜೀನಾಮೆ: ಸಂಡೂರಿನಲ್ಲಿ… ಲ್ಯಾಂಡ್ ಜಿಹಾದ್: ಕಾಂಗ್ರೆಸ್ ನಿಂದ ಒಂದು ಕೋಮಿನ ತುಷ್ಟಿಕರಣ: ಕೇಂದ್ರ ಸಚಿವ ಪ್ರಹ್ಲಾದ… ಲಾಟರಿ, ಬೆಟ್ಟಿಂಗ್, ಮಟ್ಕಾ ನಿಯಂತ್ರಿಸಲು ಫ್ಲೈಯಿಂಗ್ ಸ್ಕ್ಯಾಡ್ ಕಾರ್ಯಾಚರಣೆ: ಹೆಚ್ಚುವರಿ ಜಿಲ್ಲಾಧಿಕಾರಿ ಸೂಚನೆ

ಇತ್ತೀಚಿನ ಸುದ್ದಿ

ಮುಖ್ಯಮಂತ್ರಿ ಆಯ್ತು, ಇದೀಗ ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆ ?: ಯಾರಿಗೆ ಒಲಿಯಲಿದೆ ಕಮಲ ಪಾಳಯದ ಪಟ್ಟ?

23/08/2021, 09:36

ರಾಜೀವಿಸುತ ಬೆಂಗಳೂರು

info.reporterkarnataka@gmail.com

ರಾಜ್ಯದ ಮುಖ್ಯಮಂತ್ರಿಯ ಬದಲಾವಣೆ ಮಾಡಿರುವ ಬಿಜೆಪಿ ಹೈಕಮಾಂಡ್ ಇದೀಗ ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆಗೆ ಮುಂದಾಗದೆ. ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಪುನರ್ ಸಂಘಟಿಸುವ ನಿಟ್ಟಿನಲ್ಲಿ ಈ ಬದಲಾವಣೆ ನಡೆಯಲಿದೆ ಎಂದು ತಿಳಿದು ಬಂದಿದೆ.

2023ರ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ವರಿಷ್ಠರು ಪಕ್ಷದಲ್ಲಿಯೂ ಹಲವು ಬದಲಾವಣೆಗಳನ್ನು ಮಾಡಲು ಮುಂದಾಗಿದ್ದಾರೆ. ಇದರ ಭಾಗವಾಗಿ ಪ್ರಮುಖವಾಗಿ ಪಕ್ಷದ ರಾಜ್ಯಾಧ್ಯಕ್ಷರು ಸೇರಿದಂತೆ ಹಲವಾರು ಹುದ್ದೆಗಳು ಬದಲಾಗುವ ನಿರೀಕ್ಷೆ ಇದೆ.

ರಾಜ್ಯ ಬಿಜೆಪಿ ಮಿಷನ್ 120ಗೆ ಸಿದ್ಧವಾಗಿದೆ. 2023ರ ವಿಧಾನಸಭೆಯಲ್ಲಿ ನಿಚ್ಚಳ ಬಹುಮತ ಸಾಧಿಸಿ ಅಧಿಕಾರದ ಕುರ್ಚಿಗೆ ಏರುವುದು ಅದರ ಕನಸಾಗಿದೆ. ಆಪರೇಶನ್ ಕಮಲದ ಮೂಲಕ ಅಧಿಕಾರಕ್ಕೆ ಬಂದರೆ ಅದರಿಂದಾಗುವ ಅನಾಹುತಗಳ ಪಾಠ ಕಲಿತಿರುವ ಕೇಸರಿ ಪಕ್ಷವು ಯಾವುದೇ ಆಪರೇಶನ್ ಇಲ್ಲದೆ ಅಧಿಕಾರಕ್ಕೇರಲು ತುದಿಗಾಲಿನಲ್ಲಿ ನಿಂತಿದೆ.

ಮುಂಬರುವ ವಿಧಾನಸಭೆಗೆ ಕೇವಲ 2 ವರ್ಷ ಮಾತ್ರ ಬಾಕಿ ಉಳಿದಿದೆ. ಇದರಲ್ಲಿ ಒಂದು ವರ್ಷ ಚುನಾವಣೆಗೆ ತಯಾರಿಗೆ ಬೇಕಾಗುತ್ತದೆ. ಮತ್ತೆ ಉಳಿಯುವುದು ಬರೇ ಒಂದು ವರ್ಷ ಮಾತ್ರ. ಈ ಕಾರಣದಿಂದ ಪಕ್ಷದ ಪುನರ್ ಸಂಘಟನೆಗೆ ಬಿಜೆಪಿ ವರಿಷ್ಠರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರನ್ನು ಪಕ್ಷದಿಂದ ಬದಿಗೆ ಸರಿಸಿ ಚುನಾವಣೆ ಗೆಲ್ಲಲು ಸಾಧ್ಯವೇ ಇಲ್ಲ ಎನ್ನುವುದು ಬಿಜೆಪಿ ವರಿಷ್ಠರಿಗೆ ಚೆನ್ನಾಗಿ ಗೊತ್ತಿದೆ. ಹಾಗಾಗಿ ಯಡಿಯೂರಪ್ಪ ಅವರಿಗೆ ಪಕ್ಷದ ರಾಜ್ಯಾಧ್ಯಕ್ಷ ಪಟ್ಟವನ್ನು ಕಟ್ಟಿ ರಾಜ್ಯಾದ್ಯಂತ ಅವರ ಮೂಲಕ ದಂಡಯಾತ್ರೆ ನಡೆಸುವುದು ಬಿಜೆಪಿ ಉದ್ದೇಶ ಎನ್ನಲಾಗಿದೆ. ಅಧ್ಯಕ್ಷ ಸ್ಥಾನ ನೀಡುವ ಮೂಲಕ ಯಡಿಯೂರಪ್ಪ ಅವರನ್ನು ಬಿಜೆಪಿಯಲ್ಲೇ ಕಟ್ಟಿ ಹಾಕುವುದು ಕೂಡ ಇದರ ಉದ್ದೇಶವಾಗಿದೆ. ಅಕಸ್ಮಾತ್ ಯಡಿಯೂರಪ್ಪ ಅವರು ವಯಸ್ಸು ಮತ್ತು ಆರೋಗ್ಯದ ಕಾರಣ ನೀಡಿ ಅಧ್ಯಕ್ಷ ಸ್ಥಾನವನ್ನು ನಿರಾಕರಿಸಿದರೆ ಅವರ ಪುತ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿರುವ ಬಿ. ವೈ. ವಿಜಯೇಂದ್ರ ಅವರಿಗೆ ಪಕ್ಷದ ಅಧ್ಯಕ್ಷ ಸ್ಥಾನವನ್ನು ನೀಡುವ ಮೂಲಕ ಯಡಿಯೂರಪ್ಪ ಅವರ ಅಭಿಮಾನಿ ಬಳಗವನ್ನು ಬಿಜೆಪಿಯಲ್ಲೇ ಉಳಿಸಿಕೊಳ್ಳುವ ತಂತ್ರಗಾರಿಕೆಯನ್ನು ಪಕ್ಷದ ವರಿಷ್ಠರು ಹಣೆದಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ

ವಿಜಯೇಂದ್ರ ಅವರಿಗೆ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನವನ್ನು ನಿರಾಕರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಪಕ್ಷದ ಅಧ್ಯಕ್ಷರ ಬದಲಾವಣೆಯ ಸಂದರ್ಭದಲ್ಲಿ ಅರವಿಂದ ಲಿಂಬಾವಳಿ, ಜಗದೀಶ್ ಶೆಟ್ಟರ್, ಸಿ. ಪಿ. ಯೋಗೀಶ್ವರ್ ಸೇರಿದಂತೆ ಹಲವು ನಾಯಕರಿಗೆ ಪಕ್ಷದ ಸಂಘಟನೆ ಜವಾಬ್ದಾರಿ ಸಿಗಲಿದೆ ಎನ್ನಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು