9:12 AM Sunday21 - December 2025
ಬ್ರೇಕಿಂಗ್ ನ್ಯೂಸ್
ಗಾಂಧಿ ಭಾರತವನ್ನು ಗೋಡ್ಸೆ ಭಾರತವಾಗಿ ಮಾಡಲು ಬಿಡುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಟಿಪ್ಪರ್ -ಬೊಲೆರೋ ಜೀಪ್ ಡಿಕ್ಕಿ: ಕರ್ತವ್ಯದಲ್ಲಿ ತೆರಳುತ್ತಿದ್ದ ಬಿಎಸ್ಸೆನ್ನೆಲ್ ಸಿಬ್ಬಂದಿಗಳಿಗೆ ಗಾಯ ಹೌದು…ವೈದ್ಯೋ ನಾರಾಯಣೋ ಹರಿ; ಆದರೆ, ದಾದಿಯರು ಎಲೆ ಮರೆಯ ಕಾಯಿ! ಪೌರ ಕಾರ್ಮಿಕರು ಸೇರಿ ಎಲ್ಲ ಕಾರ್ಮಿಕರಿಗೆ ಪಾಲಿಕೆಯಿಂದಲೇ ನೇರ ವೇತನ ಪಾವತಿಗೆ ಕ್ರಮ:… ಕ್ರೆಡಲ್‌ನಿಂದ ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನಾಚರಣೆ: ಚಿತ್ರ ಬಿಡಿಸಿದ ಪ್ರೌಢಶಾಲೆ ಮಕ್ಕಳು ಮಡಿಕೇರಿ ಹನಿಟ್ರ್ಯಾಪ್ ಪ್ರಕರಣ: ನಾಪತ್ತೆಯಾಗಿದ್ದ ಮತ್ತಿಬ್ಬರು ಆರೋಪಗಳ ಬಂಧನ Belagavi | ಆರೋಗ್ಯ ಸೇತು-ಸಂಚಾರಿ ಆರೋಗ್ಯ ಘಟಕಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ವಲಸಿಗರಿಂದ ಅಕ್ರಮ ಚಟುವಟಿಕೆ: ಗಡಿಪಾರಿಗೆ ಸದನದಲ್ಲಿ ಶಾಸಕ ಡಾ. ಮಂತರ್ ಗೌಡ ಆಗ್ರಹ ಉರುಳಿಗೆ ಸಿಲುಕಿ ಹುಲಿ ಸಾವಿನ ಪ್ರಕರಣ: ಆರೋಪಿಗಳ ಪತ್ತೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಕಲಿ‌ ದಾಖಲೆ ಸೃಷ್ಟಿಸಿ 512 ಎಕರೆ ಅರಣ್ಯ-ಕಂದಾಯ ಭೂಮಿ ಕಬಳಿಕೆ ಯತ್ನ: ಆರೋಪಿ…

ಇತ್ತೀಚಿನ ಸುದ್ದಿ

ಮುಖ್ಯಮಂತ್ರಿ ಬೊಮ್ಮಾಯಿಗೆ ಪತ್ರಕರ್ತ ಬಿ.ರವೀಂದ್ರ ಶೆಟ್ಟಿ ಅವರ ‘ನಮ್ಮ ಮಂಗಳೂರು’ ಪುಸ್ತಕ ಹಸ್ತಾಂತರ; ಮೇಯರ್ ಸಮರ್ಪಣೆ

12/08/2021, 13:46

ಮಂಗಳೂರು(reporterkarnataka.com):

ಪತ್ರಕರ್ತ ಬಿ. ರವೀಂದ್ರ ಶೆಟ್ಟಿ ರಚಿಸಿದ ‘ನಮ್ಮ ಮಂಗಳೂರು’ ಪುಸ್ತಕವನ್ನು  ಮಂಗಳೂರು ಮೇಯರ್  ಪ್ರೇಮಾನಂದ ಶೆಟ್ಟಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಇಂದು ನಗರದಲ್ಲಿ ಹಸ್ತಾಂತರಿಸಿದರು.

ಈ ಪುಸ್ತಕ ಮಂಗಳೂರಿನ ಸಮಗ್ರ ಮಾಹಿತಿ ಒಳಗೊಂಡಿದೆ. ಪುಸ್ತಕದ ಬಗ್ಗೆ ಸಿಎಂ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಪುಸ್ತಕ ದಲ್ಲಿ ಏನೇನಿದೆ ?

* ಹಿರಿಯ ಪತ್ರಕರ್ತ ಬಿ. ರವೀಂದ್ರ ಶೆಟ್ಟಿ ಬರೆದಿರುವ ‘ನಮ್ಮ ಮಂಗಳೂರು’ ಅತ್ಯಪೂರ್ವ ಮಾಹಿತಿಗಳಿರುವ ಅಪರೂಪದ ಕೃತಿ. 

*  ಮಂಗಳೂರು ಸುತ್ತಮುತ್ತಲಿನ ಪ್ರವಾಸಿ ತಾಣಗಳ ಪೂರ್ತಿ ಚಿತ್ರಣ.

* ದೇವಸ್ಥಾನ, ದೈವಸ್ಥಾನ, ಮಸೀದಿ, ಚರ್ಚ್ ಹೀಗೆ ಎಲ್ಲಾ ಶ್ರದ್ಧಾ ಕೇಂದ್ರಗಳ ವಿವರಗಳು.

* ಶೈಕ್ಷಣಿಕ ಹಬ್ ಎಂಬ ಹೆಸರುವಾಸಿಯಾಗಿರುವ ಮಂಗಳೂರಿನಲ್ಲಿ ಎಷ್ಟು ಶಾಲೆ, ಕಾಲೇಜು, ವೈದ್ಯಕೀಯ, ಎಂಜೀನಿಯರಿಂಗ್, ವೃತ್ತಿಪರ ಕಾಲೇಜುಗಳಿವೆ ಎಂಬುವುದರ ಡಿಟೈಲ್ಸ್ ನಮ್ಮ ಮಂಗಳೂರು ಗ್ರಂಥದಲ್ಲಿದೆ. 

* ಮಂಗಳೂರು ಸುತ್ತಮುತ್ತ ಎಷ್ಟು ಆಸ್ಪತ್ರೆಗಳಿವೆ, ಹೊಟೇಲ್‌ಗಳಿವೆ ಎಂಬುವುದರ ಚಿತ್ರಣ.

*ಮಂಗಳೂರು ಸುತ್ತಮುತ್ತ ಇರುವ ಕೆರೆ, ಮಾರುಕಟ್ಟೆ, ಮೈದಾನ, ಪಾರ್ಕ್, ಕ್ರೀಡಾಂಗಣ, ಸ್ಮಶಾನಗಳ ಮಾಹಿತಿಗಳು

* ನಮ್ಮ ಸಂಸದರು, ಶಾಸಕರು, ಮೇಯರ್, ಉಪಮೇಯರ್, ಕಾರ್ಪೊರೇಟರ್‌ಗಳ ಸಚಿತ್ರ ವಿವರಗಳು.

*ಕಾರ್ಪೊರೇಶನ್‌ನಿಂದ ನಾಗರಿಕರಿಗೆ ಲಭಿಸುವ ಸೌಲಭ್ಯಗಳೇನು, ಅದನ್ನು ಪಡೆದುಕೊಳ್ಳಲು ಏನೇನು ಮಾಡಬೇಕು ಮಾರ್ಗದರ್ಶಿ ಮಾಹಿತಿ.

*ಮಂಗಳೂರಿನ ಅಪರೂಪದ ಫೋಟೋಗಳ ಸಂಗ್ರಹ.

*ಪೊಲೀಸ್ ಠಾಣೆ, ಮಾಧ್ಯಮ ಸಂಸ್ಥೆಗಳುಗಳ ದೂರವಾಣಿ ಸಂಖ್ಯೆಗಳು.

*ಯಾವ ನಂಬರ್‌ನ ಬಸ್ ಎಲ್ಲಿ ಸಂಚರಿಸುತ್ತೆ ಎಂಬುದರ ಮಾಹಿತಿಗಳು.

ಸಂಗ್ರಹಯೋಗ್ಯ ಅಪರೂಪದ ಕೃತಿ ನಮ್ಮ ಮಂಗಳೂರು.
ನಮ್ಮ ಮಂಗಳೂರು ಕೃತಿಗಾಗಿ ಸಂಪರ್ಕಿಸಿರಿ :  9343381791/ 9731976777

ಇತ್ತೀಚಿನ ಸುದ್ದಿ

ಜಾಹೀರಾತು