ಇತ್ತೀಚಿನ ಸುದ್ದಿ
ಮೂಡಿಗೆರೆ: ಎರಡು ಕಾರುಗಳ ಮಧ್ಯೆ ಭೀಕರ ಅಪಘಾತ; ಓರ್ವ ಸ್ಥಳದಲ್ಲೇ ಸಾವು
06/05/2022, 21:24
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮೂಡಿಗೆರೆ ತಾಲ್ಲೂಕಿನ ಗಾಂಧಿಘರ್ ಬಳಿ ಕಾರುಗಳು ಪರಸ್ಫರ ಡಿಕ್ಕಿಯಾಗಿ ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಬೆಟ್ಟದಮನೆಯ ಬಿ.ಕೆ.ಲಕ್ಷ್ಮಣ್ ಗೌಡ,(65)ಸ್ಥಳದಲ್ಲೇ ಸಾವಪ್ಪಿದ್ದಾರೆ.ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ.

ಮಗನಿಗೆ ಹೊಸ ಸ್ಕೂಟಿಯನ್ನು ಕೊಡಿಸಿದ ಲಕ್ಷ್ಮಣಗೌಡ ಹೊಸ ವಾಹನದ ಪೂಜೆಗೆಂದು ಬೆಟ್ಟದ ಮನೆ ಕಡೆಗೆ ತೆರಳುತ್ತಿದ್ದರು ಎನ್ನಲಾಗಿದೆ.

ಗೋಣಿಬೀಡು ಕಡೆಯಿಂದ ವೇಗವಾಗಿ ಬಂದ ಇನ್ನೊಂದು ವಾಹನ ಇವರ ವಾಹನಕ್ಕೆ ಅಪ್ಪಳಿಸಿದ್ದು ಅದರಲ್ಲಿದ್ದ ಕೆಲವರಿಗೆ ಗಾಯಗಳಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ .














