ಇತ್ತೀಚಿನ ಸುದ್ದಿ
ಮೂಡಿಗೆರೆ ಪೊಲೀಸ್ ಠಾಣೆ ಎದುರೇ ಬಿಜೆಪಿಯ ಎರಡು ಗುಂಪಿನ ನಡುವೆ ವಾರ್: ಕೈಕೈ ಮಿಲಾಯಿಸಿದ ಕಾರ್ಯಕರ್ತರು; ಮೂಕ ಪ್ರೇಕ್ಷಕರಾದ ಖಾಕಿ ಪಡೆ!
27/03/2023, 23:47
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕಾಫಿನಾಡು ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ಪೊಲೀಸ್ ಠಾಣೆಯ ಎದುರೇ ಬಿಜೆಪಿಯ ಎರಡು ಬಿಜೆಪಿ ಗುಂಪಿನ ಮಧ್ಯೆ ವಾರ್ ನಡೆದಿದೆ. ಹಲವು ದಿನಗಳಿಂದ ಇದ್ದ ಅಸಮಾಧಾನ ಸೋಮವಾರ ಸ್ಫೋಟಗೊಂಡಿದೆ.
ಸ್ಟೇಷನ್ ಎದುರಿನ ಆಟೋ ನಿಲ್ದಾಣದ ವಿಚಾರದಲ್ಲಿ ಕಿರಿಕ್ ನಡೆದಿದೆ. ಶಾಸಕ ಕುಮಾರಸ್ವಾಮಿ ಹಾಗೂ ಎಂ.ಎಲ್.ಸಿ. ಪ್ರಾಣೇಶ್ ಬೆಂಬಲಿಗರ ಮಧ್ಯೆ ಗಲಾಟೆ ನಡೆದಿದೆ.



ಆಟೋ ನಿಲ್ದಾಣದ ಬಳಿ ನೆರಳಿಗಾಗಿ ಎಂ.ಎಲ್.ಸಿ. ನಿಧಿಯಲ್ಲಿ ಶೆಡ್ ನಿರ್ಮಾಣ ಮಾಡಲಾಗಿತ್ತು.
ಶೆಡ್ ತೆರವಿಗೆ ಮುಂದಾದ ಪಟ್ಣಣ ಪಂಚಾಯಿತಿ ಮುಂದಾಗಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ಇಬ್ಬರು ನಾಯಕರ ಬೆಂಬಲಿಗರ ಮಧ್ಯೆ ಸಂಘರ್ಷ ಏರ್ಪಟ್ಟಿದೆ.
ಠಾಣಾ ಸರಹದ್ದಿನಲ್ಲಿ, ಪೊಲೀಸರ ಎದುರೇ ಬಿಜೆಪಿಯ ಎರಡು ಗುಂಪಿನ ಕಾರ್ಯಕರ್ತರು ಕೈ-ಕೈ ಮಿಲಾಯಿಸಿದ್ದಾರೆ. ಮೂಡಿಗೆರೆ ಬಿಜೆಪಿ ಟಿಕೆಟ್ ವಿಚಾರಕ್ಕೂ ಈ ಗಲಾಟೆಗೆ ಸಂಬಂಧವಿದೆ ಎನ್ನಲಾಗಿದೆ.














