ಇತ್ತೀಚಿನ ಸುದ್ದಿ
ಮೂಡಿಗೆರೆ: ಮಳೆಗೆ ಮೊದಲ ಬಲಿ: ಮರ ಬಿದ್ದು ಸ್ಕೂಟಿಯಲ್ಲಿ ಪ್ರಯಾಣಿಸುತ್ತಿದ್ದ ಹೋಂಸ್ಟೇ ಮಾಲೀಕ ದಾರುಣ ಸಾವು
21/05/2023, 20:59

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
2023ರ ಮಳೆಗೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಭಾನುವಾರ ಮೊದಲ ಬಲಿಯಾಗಿದೆ. ಸ್ಕೂಟರ್ ಮೇಲೆ ಮರ ಬಿದ್ದು ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂಡಿಗೆರೆ ತಾಲೂಕಿನ ಚಿಕ್ಕಹಳ್ಳ ಬಳಿ ಘಟನೆ ನಡೆದಿದೆ.
ಮೃತರನ್ನು ವೇಣುಗೋಪಾಲ್ (45) ಎಂದು ಗುರುತಿಸಲಾಗಿದೆ.
ಚಿಕ್ಕಹಳ್ಳ ಗ್ರಾಮದಲ್ಲಿ ವೇಣುಗೋಪಾಲ್ ಅವರು
ಹೋಂ ಸ್ಟೇ ನಡೆಸುತ್ತಿದ್ದರು. ಹೋಂ ಸ್ಟೇಯ ತುಸು ದೂರದಲ್ಲಿ ಮರ ಬಿದ್ದು ಸ್ಥಳದಲ್ಲೇ ಸಾವು ಕಂಡಿದ್ದಾರೆ. ಒಂದೇ ಒಂದು ನಿಮಿಷ ತಡವಾಗಿದ್ದರೆ ಮನೆ ಸೇರಿಕೊಳ್ಳುತ್ತಿದ್ದರು.
ಮೂಲತಃ ಉತ್ತರ ಕರ್ನಾಟಕ ವೇಣುಗೋಪಾಲ್ ಮೂಡಿಗೆರೆಯಲ್ಲಿ ಮದುವೆಯಾಗಿ ಇಲ್ಲೇ ವಾಸವಿದ್ದರು. ಹೋಂ ಸ್ಟೇ ಜೊತೆ ಮೂಡಿಗೆರೆಯಲ್ಲಿ ಬಳೆ ಅಂಗಡಿ ಇಟ್ಟುಕೊಂಡಿದ್ದರು.ಒಂದರ ಹಿಂದೆ ಒಂದರಂತೆ ಒಂದೇ ಕಾಲಕ್ಕೆ ಮೂರು ಮರಗಳು ಬಿದ್ದಿವೆ. ಸ್ಕೂಟಿಯಲ್ಲಿದ್ದ ವೇಣುಗೋಪಾಲ್, ಮರ ಬೀಳುತ್ತಿದ್ದಂತೆ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.
ಆಲ್ದೂರು ಠಾಣ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.