ಇತ್ತೀಚಿನ ಸುದ್ದಿ
ಮೂಡಿಗೆರೆ: ಎಂ.ಪಿ.ಕುಮಾರಸ್ವಾಮಿ ಅವರಿಂದ ನೂತನ ಶಾಲೆ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ
10/12/2022, 19:15
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporter Karnataka@gmail.com
ಮೂಡಿಗೆರೆ ತಾಲೂಕಿನ ಕಡಿದಾಳು ಗ್ರಾಮದ ನೂತನ ಶಾಲಾ ಕಟ್ಟಡ ನಿರ್ಮಾಣ ಹಾಗೂ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆಯನ್ನು ಶಾಸಕ ಎಂ ಪಿ ಕುಮಾರಸ್ವಾಮಿ ನೆರವೇರಿಸಿದರು.
ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಶಾಲೆ ದೇವಾಲಯ ಇದ್ದಂತೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು. ಶಿಕ್ಷಣ ಪ್ರತಿಯೊಬ್ಬ ಮಗುವಿಗೂ ಸಿಕ್ಕಾಗ ಮಾತ್ರ ಗ್ರಾಮಗಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ. ಮಲೆನಾಡಿನಲ್ಲಿ ಇತ್ತೀಚೆಗೆ ನಿರ್ಮಾಣವಾದ ಆರ್ ಸಿ ಸಿ ಮೇಲ್ಚಾವಣಿ ಇರುವ ಕಟ್ಟಡಗಳು ಶೀತಲಗೊಂಡಿದ್ದು, ಮಲೆನಾಡಿನಲ್ಲಿ ಹಂಚಿನ ಮೇಲ್ಚಾವಣಿ ನಿರ್ಮಾಣ ಮಾಡುವುದು ಸೂಕ್ತ ಎಂದರು. ಕೋವಿಡ್ ನಿಂದಾಗಿ ಕಳೆದ ಎರಡು ವರ್ಷ ಕಾಮಗಾರಿಗಳು ನಿಂತಿದ್ದವು. ಮುಂದಿನ ದಿನಗಳಲ್ಲಿ ಎಲ್ಲ ಕಾರ್ಯಗಳು ಮುಂದುವರೆಸುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಜೆಡಿಎಸ್ ಜಿಲ್ಲಾ ಅಧ್ಯಕ್ಷರಾದ ರಂಜನ್ ಅಜಿತ್ ಕುಮಾರ್ ಅವರು, ನನ್ನ ರಾಜಕೀಯ ಜೀವನ ಹಾಗೂ ವ್ಯವಹಾರಿಕ ಜೀವನದಲ್ಲಿ ಕಡಿದಾಳು ಗ್ರಾಮಸ್ಥರು ನನ್ನ ಏಳು ಬೀಳುಗಳಲ್ಲಿ ಜೊತೆಗಿದ್ದು ಕೈ ಹಿಡಿದು ನಡೆಸಿರುವುದನ್ನು ಎಂದಿಗೂ ಮರೆಯಲಾಗದು ಎಂದೂ ಸ್ಮರಿಸಿದರು. ಗ್ರಾಮದ ಅಭಿವೃದ್ಧಿಗೆ ಸದಾ ಕಾಲ ಜೊತೆಗಿರುವೆ. ಇಂದು ಗುದ್ದಲಿ ಪೂಜೆ ಕಾರ್ಯ ನೆರವೇರಿದ್ದು ಖುಷಿ ವಿಚಾರ ಎಂದರು. ಇದೇ ಸಂದರ್ಭದಲ್ಲಿ ನಿವೇಶನ ದಾನಿಗಳು ವಸಂತ್ ಅವರಿಗೆ ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತ ರಾಘವೇಂದ್ರ ಕೆಸವಳಲು, ಮಾಜಿ ತಾಲೂಕ ಪಂಚಾಯಿತಿ ಅಧ್ಯಕ್ಷ ಡಿ.ಬಿ. ಜಯಪ್ರಕಾಶ್ ಕೆಂಪೇಗೌಡ ಒಕ್ಕಲಿಗ ವೇದಿಕೆ ತಾಲೂಕು ಅಧ್ಯಕ್ಷ ಬ್ರಿಜೇಶ್ ಕಡಿದಾಳ್, ಕಾರ್ಯ ನಿರ್ವಾಹಕ ಅಧಿಕಾರಿ ಹರ್ಷ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಹೇಮಂತ್, ದೈಹಿಕ ಶಿಕ್ಷಣ ಪರಿವೀಕ್ಷಕ ಶ್ರೀನಿವಾಸ್, ಎಸ್ ಡಿಎಂಸಿ ಅದ್ಯಕ್ಷ ವೆಂಕಟೇಶ್, ಉಪಾಧ್ಯಕ್ಷ ದಿನೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕುಸುಮ, ಸದಸ್ಯರಾದ ವಿಕ್ರಂ ಗೌಡ ದಾರದಹಳ್ಳಿ, ಮಂಜುನಾಥ, ಸಿದ್ದೇಶ್, ಪುನೀತ್ ಕಡಿದಾಳ್, ಗುತ್ತಿಗೆದಾರ ವಿನಯ್, ಹರೀಶ್ ಹಳ್ಳಿಬೈಲು, ಮುಖ್ಯ ಶಿಕ್ಷಕಿ ವೀಣಾ, ಶಾಲಾ ಶಿಕ್ಷಕಿ ಶಹಾನ ನಾಜಿಂ. ಸೇರಿದಂತೆ ಗ್ರಾಮಸ್ಥರು ಇದ್ದರು.