ಇತ್ತೀಚಿನ ಸುದ್ದಿ
ಮೂಡಿಗೆರೆ: ಕೆಂಪು ಬಸ್ಸಿಗೆ ಅಡ್ಡ ಬಂದ ಒಂಟಿ ಸಲಗ!: ಅದು ಹೆಣ್ಣಾನೆ ಸರಕಾರ ಫ್ರೀ ಪ್ರಯಾಣಕ್ಕೆ ಬಂದದ್ದು ಎಂದು ವ್ಯಂಗ್ಯವಾಡಿದ ಜನರು!
25/06/2023, 10:50

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಸರಕಾರಿ ಬಸ್ಸೊಂದಕ್ಕೆ ಒಂಟಿ ಸಲಗವೊಂದು ಅಡ್ಡ ಬಂದ ಘಟನೆ ಮೂಡಿಗೆರೆ ತಾಲೂಕಿನ ಕೊಲ್ಲಿಬೈಲ್ ಗ್ರಾಮದಲ್ಲಿ ನಡೆದಿದೆ.
ಚಿಕ್ಕಮಗಳೂರು-ಮೂಡಿಗೆರೆ ರಸ್ತೆಯ ಕೊಲ್ಲಿಬೈಲ್
ಸಮೀಪ ಕಾಫಿ ಡೇ ಮಾಲೀಕ ದಿ. ಸಿದ್ಧಾರ್ಥ್ ಹೆಗ್ಡೆ ವನದ ಬಳಿ ಬಸ್ ನಿಲ್ಲಿಸುತ್ತಿಂತೆ ಬಸ್ಸಿಗೆ ಅಡ್ಡ ಬಂದ ಆನೆ ನಂತರ ಬಸ್ಸಿನ ಬದಿಯಿಂದಲೇ ಓಡಿ ಹೋಯಿತು.
ಆನೆ ಕಂಡು ಬಸ್ಸಿನಲ್ಲಿದ್ದ ಬೆರಳೆಣಿಕೆಯ ಪ್ರಯಾಣಿಕರು ಕೂಗಾಡಿದರು. ಜನ ಕೂಗಾಡುತ್ತಿದ್ದಂತೆ ರಸ್ತೆ ಬದಿಯಲ್ಲಿ ಗಜರಾಜ ಓಡಿ ಹೋಗಿ ಕಾಡಿಗೆ ಪ್ರವೇಶಿಸಿತು. ಅದು ಹೆಣ್ಣಾನೆ
ಸರ್ಕಾರದ ಫ್ರೀ ಬಸ್ ಗಾಗಿ ಕಾಯುತ್ತಿತ್ತು ಎಂದು ಜನ ವ್ಯಂಗ್ಯವಾಡಿದರು.