ಇತ್ತೀಚಿನ ಸುದ್ದಿ
ಮೂಡಿಗೆರೆ: ಅರಣ್ಯ ಇಲಾಖೆ ಆನೆ ಓಡಿಸುತ್ತಿಲ್ಲ! ಬದಲಿಗೆ ಪೊಲೀಸರು ಗ್ರಾಮಸ್ಥರ ಬಂಧಿಸುತ್ತಿದ್ದಾರೆ!!
23/11/2022, 18:28

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಅನೆಯಿಂದ ಹತ್ಯೆ ನಡೆದ ಸ್ಥಳದಲ್ಲೆ ನಿನ್ನೆ ರಾತ್ರಿಯಿಂದ ಬುಧವಾದ ಬೆಳಗ್ಗೆ ಎಂಟು ಗಂಟೆವರೆಗೆ ಉನ್ಮಾದದಿಂದ ಮೂರು ಅನೆಗಳು ಬೀಡುಬಿಟ್ಟಿದ್ದು, ಗೀಳಿಟ್ಟು ಬೆಳೆ ನಾಶ ಮಾಡುತ್ತಿದ್ದರೂ
ಒಡಿಸುವ ಬದಲು ಅರಣ್ಯ ಮತ್ತು ಪೋಲಿಸ್ ಇಲಾಖೆ ಮಹಿಳೆಯರು, ಪುರುಷರು ಎನ್ನದೆ ಎಲ್ಲರನ್ನು ಬಂಧಿಸುತ್ತಿದ್ದಾರೆ. ಇಡೀ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಮೊನ್ನೆ ಮೊನ್ನೆ ಭಾನುವಾರ ಹುಲ್ಲೆಮನೆ ಕುಂದೂರು ಗ್ರಾಮದಲ್ಲಿ ಶೋಭಾ ಎಂಬ ರೈತ ಮಹಿಳೆಯನ್ನು ಆಕಳುಗಳಿಗೆ ಮೇವು ಕುಯ್ಯುವ ಸಂದರ್ಭದಲ್ಲಿ ಆನೆ ಹತ್ಯೆ ಮಾಡಿತ್ತು. ಅಲ್ಲೆ ಎರಡು ಕಿಮೀ ಅಂತರದಲ್ಲಿ ಹಾರ್ಗೋಡಿನಲ್ಲಿ ಅನಂದ್ ದೇವಾಡಿಗ ಎಂಬುವವರನ್ನು ಕೊಂದು ಹಾಕಿತ್ತು. ಅಂದು ಅರಣ್ಯ ಇಲಾಖೆ ನೀಡಿದ ಆಸ್ವಾಶನೆ ಒಂದು ನೆರವೇರದ ಕಾರಣ ಮೊನ್ನೆ ಶೋಭಾರವರ ಹತ್ಯೆ ವೇಳೆ ಜನರ ಅಕ್ರೋಶ ಕಟ್ಟೆ ಒಡೆಯಲು ಕಾರಣವಾಗಿತ್ತು. ನಂತರ ನಡೆದ ಪ್ರತಿಭಟನೆಗಳಲ್ಲಿ ಕೆಲವರು ಅತಿರೇಕ ವ್ಯಕ್ತಪಡಿಸಿದ್ದರು. ಈ ವೇಳೆ ಮೂಡಿಗೆರೆ ಶಾಸಕ ಕುಮಾರಸ್ವಾಮಿ ಅವರ
ಮೇಲೆ ಹಲ್ಲೆಗು ಮುಂದಾದ ಘಟನೆ ನಡೆದಿತ್ತು.
ಇದನ್ನು ಗ್ರಾಮಸ್ಥರು ಒಕ್ಕೊರಲಿನಿಂದ ಖಂಡಿಸಿದ್ದರು ಕೂಡ.
ಅರಣ್ಯ ಇಲಾಖೆ ಹಾಗೂ ಪೊಲೀಸರ ಮೇಲೆ ಕೂಡ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ಸಂಜೆ ನಂತರ ಮೂಡಿಗೆರೆ ಪೊಲೀಸರು ಮತ್ತು ಅರಣ್ಯ ಇಲಾಖೆ ಶವವನ್ನು ಪೋಸ್ಟ್ ಮಾರ್ಟಮ್ ಗೆ ಕಳಿಸಿದ ನಂತರ ಸ್ಥಳೀಯರನ್ನು ಬಂಧಿಸುವ ಕೆಲಸಕ್ಕೆ ಇಳಿದಿದ್ದರು. ಅದರಂತೆ ಅಂದೆ ರಾತ್ರಿ ಸುಮಾರು 8 ಜನರನ್ನು ಬಂಧಿಸಲಾಗಿತ್ತು. ಬಂಧನ ಸುದ್ದಿ ತಿಳಿದ ಸುತ್ತಮುತ್ತಲ ಗ್ರಾಮದ ಬಹುತೇಕ ಪುರುಷರು ಹಾಗೂ ಮಹಿಳೆಯರು ಗ್ರಾಮ ತೊರೆದಿದ್ದರೂ ಕೆಲವು ರಾಜಕೀಯ ವ್ಯಕ್ತಿಗಳು ಯಾರನ್ನು ಬಂಧಿಸುವುದಿಲ್ಲ ಎಂಬ ಆಶ್ವಾಸನೆಯ ಮೇರೆಗೆ ಕೆಲವರು ಗ್ರಾಮದಲ್ಲೇ ಉಳಿದಿದ್ದರು. ಆದರೆ ಮಂಗಳವಾರ ರಾತ್ರಿ ಸುಮಾರು 3 ರಿಸರ್ವ್ ಪೊಲೀಸ್ ವ್ಯಾನ್ ಗಳೊಂದಿಗೆ ಇಲ್ಲಿನ ಹುಲ್ಲೆಮನೆ, ಬೈರಿಗದ್ದೆ, ತಳವಾರ, ಕುಂಡ್ರ,ಕಣಗದ್ದೆ ಸೇರಿದಂತೆ ನಾಲ್ಕಾರು ಗ್ರಾಮಗಳಲ್ಲಿ ಅನೇಕರನ್ನು ಬಂಧಿಸಿದ್ದು. ಇಡೀ ಗ್ರಾಮವೇ ದಿಗ್ಬ್ರಾಂತವಾಗಿದ್ದು ಬಹುತೇಕರು ಊರನ್ನು ತೊರೆಯುತ್ತಿದ್ದಾರೆ. ಗ್ರಾಮದಲ್ಲಿ ಸ್ಮಶಾನ ಮೌನ ಅವರಿಸಿದೆ.
ಅನೆಗಳು ನಗರದಲ್ಲಿಯು ಸಾವು ಉಂಟು ಮಾಡುವ ದಿನ ದೂರವಿಲ್ಲ ಎಂದು ರಾಜಕಾರಣಿಗಳಿಗೆ, ಅದಿಕಾರಗಳಿಗೆ ಹಾಗೂ ಸರ್ಕಾರಕ್ಕೆ ಜನರು ಶಾಪ ಹಾಕುತ್ತಿದ್ದಾರೆ.
ಬುದವಾರ ಬೆಳಗ್ಗೆ ಎಂಟು ಗಂಟೆವರೆಗೆ ಆನೆಗಳು ಸ್ಥಳದಲ್ಲೇ ಗಿಳಿಟ್ಟು ಜನರನ್ನು ಭಯಭೀತಿ ಗೊಳಿಸುತ್ತಿತ್ತು. ಅವುಗಳನ್ನು ಸ್ಥಳದಿಂದ ಓಡಿಸುವ ಬದಲು ಅರಣ್ಯ ಮತ್ತು ಪೊಲೀಸ್ ಇಲಾಖೆ ತನ್ನ ಸಂಪೂರ್ಣ ಬಲ ಬೆಳೆಸಿ ಬಂಧನದಲ್ಲಿ ತೊಡಗಿದ್ದು. ಗ್ರಾಮಸ್ಥರನ್ನು ಭಯಭೀತಿ ಉಂಟುಮಾಡಿದ್ದು ವ್ಯವಸ್ಥೆ ವಿರುದ್ದ ಇಡೀ ಸುತ್ತಮುತ್ತಲು ಗ್ರಾಮಗಳ ಆಕ್ರೋಶಕ್ಕೆ ಕಾರಣವಾಗಿದೆ.