ಇತ್ತೀಚಿನ ಸುದ್ದಿ
ಮೂಡುಬೆಳ್ಳೆ- ಅಲೆವೂರು ರಾಜ್ಯ ಹೆದ್ದಾರಿ ಸೇತುವೆಯಿಂದ ಯುವಕ ನದಿಗೆ ಹಾರಿದ ಶಂಕೆ: ಹುಡುಕಾಟ ಆರಂಭ
07/07/2022, 09:51
ಉಡುಪಿ(reporterkarnataka.com): ಮೂಡುಬೆಳ್ಳೆ- ಅಲೆವೂರು ರಾಜ್ಯ ಹೆದ್ದಾರಿಯ ಸಂಪರ್ಕ ರಸ್ತೆಯ ಸೇತುವೆಯ ಮೇಲೆ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಯುವಕನೊಬ್ಬ ನದಿಗೆ ಹಾರಿದ್ದನೆಂದು ಸ್ಥಳಿಯರು ಶಂಕೆ ವ್ಯಕ್ತಪಡಿಸಿದ್ದಾರೆ .
ಜುಲೈ6ರ ಮಧ್ಯಾಹ್ನ 2.30 ಘಂಟೆ ಸಮಯದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ದ್ವಿಚಕ್ರ ವಾಹನದಲ್ಲಿ ಪರ್ಸ್, ಆಧಾರ್ ಕಾರ್ಡ್ ಹಾಗೂ ವಾಹನದ ಬೀಗವೂ ಇದೆ. ಶಿವಮೊಗ್ಗ ಅರ್ಟಿ ಒ ನೋಂದಾವಣಿಯ ದ್ವಿಚಕ್ರ ವಾಹನವಾಗಿದೆ. ಸ್ಥಳೀಯ 25 ವರ್ಷದ ಯುವಕ ಪುನಿತ್ ಎಂದು ಸ್ಥಳೀಯರು ಹೇಳುತಿದ್ದಾರೆ ಎಲ್ಲವು ಅಸ್ಪಷ್ಟವಾಗಿದೆ.
ಸ್ಥಳೀಯರು ಹುಡುಕಾಟ ಅರಂಭಿಸಿದ್ದು ನದಿಯಲ್ಲಿ ಮಳೆಯ ಕಾರಣ ನೀರಿನ ಹರಿವಿನ ತೀವ್ರ ತೆ ಹೆಚ್ಚಾಗಿದೆ.
ಅದರಲ್ಲೇ ಇದ್ದು ಸಂಶಯಕ್ಕೆ ಎಡೆಮಾಡಿದ್ದು, ಸ್ಥಳದಲ್ಲಿ ಜನರು ಜಮಾಯಿಸಿದ್ದಾರೆ.