1:51 AM Saturday31 - January 2026
ಬ್ರೇಕಿಂಗ್ ನ್ಯೂಸ್
ಮೊದಲಿನಂತೆ ಸ್ವತಂತ್ರವಾಗಿ ಸಿನಿಮಾ ಮಾಡಲಾಗುತ್ತಿಲ್ಲ: ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ನಟ-ನಿರ್ದೇಶಕ ಅನುರಾಗ್ ಕಶ್ಯಪ್ ಇಂದ್ರಿಯ ನಿಗ್ರಹಿಸುವುದೇ ನೈಜ ಜ್ಞಾನ; ಇದುವೇ ಜೀವನ ಮಾರ್ಗ : ಶೃಂಗೇರಿ ಶಾರದಾಪೀಠದ… ಗೃಹ ಸಚಿವರ ರಾಜೀನಾಮೆ, ಪೊಲೀಸ್ ಕಮೀಷನರ್ ಅಮಾನತಿಗೆ ಬಿಜೆಪಿ ಆಗ್ರಹ ಕಾನ್ಫಿಡೆಂಟ್‌ ಗ್ರೂಪ್‌ ಚೇರ್‌ಮೆನ್ ಸಿ.ಜೆ. ರಾಯ್‌ ಗುಂಡಿಕ್ಕಿಕೊಂಡು ಆತ್ಮಹತ್ಯೆ: ಐಟಿ ದಾಳಿಗೆ ಹೆದರಿದರೇ… ಕಾಡಾನೆ ದಾಳಿಯಿಂದ ಅದೃಷ್ಟವಶಾತ್ ತಂದೆ- ಮಗಳು ಜಸ್ಟ್ ಮಿಸ್: ಕೊಡಗಿನಲ್ಲಿ ತಪ್ಪಿದ ಭಾರಿ… ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ವಿ ಬಿ ಜಿ ರಾಮ್… 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ಉದ್ಘಾಟನೆ ಕೊಡಗು: ಮುಂದುವರಿದ ಆನೆ- ಮಾನವ ಸಂಘರ್ಷ; ಕಾಡಾನೆ ದಾಳಿಗೆ ಕಾರ್ಮಿಕ ಬಲಿ ಆರ್ಥಿಕ ಬೆಳವಣಿಗೆಗೆ ಕೇಂದ್ರದ ಆರ್ಥಿಕ ನೀತಿಗಳೇ ಕಾರಣ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ… ನಮ್ಮ ಸರ್ಕಾರ ಯಾರ ಪೋನ್ ಟ್ಯಾಪ್ ಮಾಡುವುದಿಲ್ಲ: ಸಿಎಂ ಸಿದ್ದರಾಮಯ್ಯ

ಇತ್ತೀಚಿನ ಸುದ್ದಿ

ಮುಧೋಳ: ಬೇಡಜಂಗಮ ಬೃಹತ್ ಸಮಾವೇಶ ಸಂವಿಧಾನಬದ್ಧ ಹಕ್ಕಿಗೆ ಆಗ್ರಹ

19/02/2022, 22:26

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ 

info.reporter@gmail.com

ಮುಧೋಳದಲ್ಲಿ ಇಂದು ನಡೆದ ಬೇಡಜಂಗಮ ಬೃಹತ್ ಸಮಾವೇಶ ಇಂದು ಮುಧೋಳದಲ್ಲಿ ನಡೆಯಿತು. ಸುಮಾರು 20 ಸಾವಿರ ಜನರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಚಳಿಗೇರಿ ಶ್ರೀಗಳು ಮಾತನಾಡಿ, ಬೇಡ ಜಂಗಮರಿಗೆ ಸಂವಿಧಾನಬದ್ಧವಾದ ಹಕ್ಕನ್ನು ನೀಡಬೇಕೆಂದು ಒತ್ತಾಯಿಸಿದರು. 

ಒಕ್ಕೂಟದ ಅಧ್ಯಕ್ಷ ಬಿಡಿ ಹಿರೇಮಠ ಅವರು ಮಾತನಾಡಿ, ಪರಿಶಿಷ್ಟ ಜಾತಿ ಪಟ್ಟಿಯಲ್ಲಿ 19ನೇ ಕಾಲದಲ್ಲಿ ಬರುವ ಬೇಡಜಂಗಮ ಜಾತಿಯು ಈಗಾಗಲೇ ಸಂವಿಧಾನಾತ್ಮಕವಾಗಿದ್ದು, ಜಾತಿ ಸರ್ಟಿಫಿಕೇಟ್ ಕೇಳಿದರೆ ವೀರಶೈವ-ಲಿಂಗಾಯತ ಎಂದು ನೀಡುತ್ತಿರುವುದು ಅವೈಜ್ಞಾನಿಕ. ವೀರಶೈವ ಲಿಂಗಾಯತ ವು ಒಂದು ಪಂಥವಾಗಿದ್ದು ಅದು ಜಾತಿ ಆಗಿರುವುದಿಲ್ಲ ಎಂದು ಹೇಳಿದ ಅವರು ಮುಂದಿನ ಹೋರಾಟ ಬೆಂಗಳೂರಿನಲ್ಲಿ ಉಗ್ರವಾಗಿ ಮಾಡಲಾಗುವುದು ಎಂದು ಹೇಳಿದರು.
ರಾಜ್ಯಾಧ್ಯಕ್ಷ ದ್ವಾರಕೀಶ್ ಮಾತನಾಡಿ, ಸಮಾಜದಲ್ಲಿ ಜಂಗಮ ಸಮಾಜಕ್ಕೆ ದೊಡ್ಡ ಗೌರವ ಇದೆ.
ದಲಿತ ಸಂಘಟನೆಯ ರಾಜಾಧ್ಯಕ್ಷ ವೆಂಕಟೇಶ್ ಅವರ  ಬೆಂಬಲವಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಆದೇಶ ಮೇರಿಗೆ ಇನ್ನು ಎರಡು ತಿಂಗಳಲ್ಲಿ ಎಲ್ಲ ಜಂಗಮರಿಗೆ ಬೇಡ ಜಂಗಮ ಪ್ರಮಾಣಪತ್ರ ಸಿಗಲಿದೆ ಎಂದು ಹೇಳಿದರು.

ಕೆಲವು ಶಾಸಕರು ಜಂಗಮರಿಗೆ ಸಿಗಬೇಕು ಪ್ರಮಾಣ ಪತ್ರಕೆ ಅಡ್ಡಿ ಮಾಡಿದರು ಎಂದರು.

ಬೃಹತ್ ಪ್ರತಿಭಟನಾ ಮೆರವಣಿಗೆ ಮುಧೋಳ ಪಟ್ಟದಿಂದ ರನ್ನ ಕ್ರೀಡಾಂಗಣಕ್ಕೆ ಬಂದು ತಲುಪಿತು. 

ರಾಜ್ಯ ದಲಿತ ಸಂಘರ್ಷ ಸಮಿತಿಯ ವೆಂಕಟೇಶ್ ಅವರು ಮಾತನಾಡಿ, ಬೇಡ ಜಂಗಮರ ಹೋರಾಟ ನ್ಯಾಯಯುತವಾಗಿದ್ದು ನಾವು ನಿಮ್ಮ ಜೊತೆಗೆ ಇದ್ದೇವೆ ಎಂದು ಹೇಳಿದರು.

ಸಮಾವೇಶದಲ್ಲಿ ರಾಯಚೂರು ಜಿಲ್ಲಾ ಬೇಡಜಂಗಮ ಸಮಾಜದ ಮುಖಂಡರಾದ ಆದಿ ಬಸವರಾಜ್ ಸಿಂಧನೂರು, ಸಂಪಾದಕರಾದ
ವಿರುಪಾಕ್ಷಯ್ಯ ಸಾಲಿಮಠ, ರಾಯಚೂರು ಬಸವರಾಜ್ ಹಿರೇಮಠ, ಮುಸ್ಲಿಂ ಕಾರಲಕುಂಟೆ ಮಲ್ಲಿಕಾರ್ಜುನ್ ಲಿಂಗಸ್ಗೂರು ರಮೇಶ್ ಸಿಂಗ ಪತ್ರಕರ್ತ  ಬಸವರಾಜ್ ಸಿದ್ದಲಿಂಗಯ್ಯ ಸಿದ್ದಲಿಂಗಯ್ಯ ಸ್ವಾಮಿ ಮಠ ಗಣ ಮಠದಯ್ಯ ಸ್ವಾಮಿ ಶಿವಕುಮಾರ್ ಮುಂತಾದವರು ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು