ಇತ್ತೀಚಿನ ಸುದ್ದಿ
ಮೂಡಿಗೆರೆ: ಬಿನ್ನಡಿ ದೇವಸ್ಥಾನದ ಜಾಗ ಒತ್ತುವರಿ ತೆರವುಗೊಳಿಸಲು ತಾಲೂಕು ದಂಡಾಧಿಕಾರಿಗೆ ಗ್ರಾಮಸ್ಥರ ಮನವಿ
18/09/2025, 22:13

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnata@gmail.com
ಮೂಡಿಗೆರೆ ತಾಲ್ಲೂಕು ಬಿನ್ನಡಿ ಗ್ರಾಮದಲ್ಲಿ 12ನೇ ಶತಮಾನದಲ್ಲಿ ಕಟ್ಟಿದ ಐತಿಹಾಸಿಕ ಕನ್ನೆರಮ್ಮ ದೇವಸ್ಥಾನವಿದ್ದು ಆ ದೇವಸ್ಥಾನದ ಜೊತೆಗೆ ಬ್ರಹ್ಮಲಿಂಗೇಶ್ವರ, ಬಾಸಮ್ಮ ಹಾಗೂ ದೇವಿರಮ್ಮ ದೇವಸ್ಥಾನಗಳಿಗೆ ಊರಿನ ಹಿರಿಯರು ಮೀಸಲಿಟ್ಟಿದ್ದ ಸುಮಾರು 11 ಎಕರೆ ಜಾಗದಲ್ಲಿ ಮುಕ್ಕಾಲು ಪಾಲು ಒತ್ತುವರಿ ಆಗಿದ್ದು ದೇವಸ್ಥಾನದ ಆಚಾರ ವಿಚಾರಗಳಿಗೆ ಜಾಗವಿಲ್ಲದಂತ ಸ್ಥಿತಿ ನಿರ್ಮಾಣವಾಗಿರುವುದರಿಂದ ಗ್ರಾಮಸ್ಥರು ಹಿಂದೆ ಜಿಲ್ಲಾಧಿಕಾರಿಗಳನ್ನು ಮನವಿ ಮಾಡಿದ್ದರು. ಈಗ ತಾಲ್ಲೂಕು ದಂಡಾಧಿಕಾರಿಗಳಿಗೆ ಭೇಟಿ ಮಾಡಿ ಸರ್ವೇ ಮಾಡಿ ಒತ್ತುವರಿ ತೆರವು ಮಾಡಿಸಿ ದೇವಸ್ಥಾನದ ಜಾಗವನ್ನು ಅಧಿಕೃತ ಮಾಡಿ ಕೊಡುವಂತೆ ಕೋರಲಾಯಿತು.
ಗ್ರಾಮಸ್ಥರೊಂದಿಗೆ ಬಿಜೆಪಿ ನಾಯಕರಾದ ದೀಪಕ್ ದೊಡ್ಡಯ್ಯ, ಗ್ರಾಮಸ್ಥರಾದ ವಿಜೇಂದ್ರ,ರಮೇಶ್,ಬಿ.ಟಿ. ದೇವರಾಜ್, ರವಿ ಕುಮಾರ್, ವೀರೇಂದ್ರ, ಧರ್ಮರಾಜ್, ಸುನೀಲ್, ವೆಂಕಟೇಶ್, ಉಪೇಂದ್ರ,ಲಕ್ಷ್ಮಣ,ವಿನುತ್,ಮೋಹನ್,ಅಭಿಜಿತ್,ಪೂರ್ಣೇಶ್,ಸಂಪತ್,ಅರುಣ್ ಬಿನ್ನಡಿ. ಮೊದಲಾದವರು ಇದ್ದರು.