ಇತ್ತೀಚಿನ ಸುದ್ದಿ
ಮೂಡಿಗೆರೆ ತಾಲೂಕಿಗೆ ಕುಡಿಯುವ ನೀರು ಕೊಡದಷ್ಟು ಸರಕಾರ ಅಸಮರ್ಥವಾಗಿದೆ: ಬಿಜೆಪಿ ತಾಲೂಕು ವಕ್ತಾರ ವಿನಯ್ ಹಳೆಕೋಟೆ ಆರೋಪ
25/03/2024, 18:09

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮೂಡಿಗೆರೆ ತಾಲೂಕಿನಲ್ಲಿ ಬರ ತಾಂಡವಾಡುತ್ತಿದ್ದು ಜನರಿಗೆ ಕುಡಿಯಲು ನೀರನ್ನು ಕೊಡದಷ್ಟು ಸರ್ಕಾರ ಅಸಮರ್ಥವಾಗಿದ್ದು. ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಅಭಿವೃದ್ಧಿ ಕಾರ್ಯಗಳು ಕುಂಟಿತ ಆಗಿವೆ ಎಂದು ಬಿಜೆಪಿ ತಾಲೂಕು ವಕ್ತಾರ ವಿನಯ್ ಹಳೆಕೋಟೆ ಆರೋಪಿಸಿದ್ದಾರೆ. ಅವರು ಹೇಳಿಕೆಯಲ್ಲಿ ತಿಳಿಸಿ ಮೋಸ ಕುತಂತ್ರ ಮತ್ತು ಸುಳ್ಳು ಭರವಸೆಗಳಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ರಾಜ್ಯದ ಬಕ್ಕಸವನ್ನು ಬರಿದು ಮಾಡಿ ದಿವಾಳಿ ಅಂಚಿಗೆ ತಂದಿದ್ದು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ಶೂನ್ಯವಾಗಿವೆ ಪ್ರಮುಖವಾಗಿ ನಮ್ಮ ಜಿಲ್ಲೆಯಲ್ಲಿ ಬರ ತಾಂಡವಾಡುತ್ತಿದ್ದು ಜನ ಜಾನುವಾರುಗಳಿಗೆ ಕುಡಿಯುವ ನೀರನ್ನು ನೀಡುತ್ತಿಲ್ಲ. ಮೇವಿಲ್ಲದೆ ಗೋವುಗಳನ್ನು ಕಟಕರಿಗೆ ಮಾರಲಾಗುತ್ತಿದೆ. ಇದನ್ನು ತಪ್ಪಿಸಲು ಗೋಶಾಲೆಗಳನ್ನು ತೆರೆಯಬೇಕಾಗಿತ್ತು. ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ನೀರನ್ನು ಒದಗಿಸಲು ಕ್ರಿಯೆ ಯೋಜನೆ ರೂಪಿಸಬೇಕಿತ್ತು. ನಿರಂತರ ವಿದ್ಯುತ್ ನೀಡಲು ಕರೆಂಟ್ ಖರೀದಿ ಕಾರ್ಯಗಳನ್ನು ಮಾಡಬೇಕಿತ್ತು. ಬರದಿಂದ ಕಂಗೆಟ್ಟಿರುವ ರೈತರಿಗೆ ಬೆಳೆಗಳಿಗೆ ನೀರು ಹರಿಸಲು ಸರಿಯಾದ ವಿದ್ಯುತ್ ಕೂಡ ನೀಡುತ್ತಿಲ್ಲ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಪ್ರಾರಂಭವಾಗಿದ್ದು ರಾತ್ರಿ ಹಗಲೆನ್ನದೆ ವಿದ್ಯುತ್ ಕಡಿತ ಮಾಡಲಾಗುತ್ತದೆ. ಇದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಿದೆ.
ಅಧಿಕಾರಿಗಳು ಚುನಾವಣೆ ಹೆಸರಲ್ಲಿ ಜನರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಸರ್ಕಾರಿ ಕಚೇರಿಯಲ್ಲಿ ಭ್ರಷ್ಟಾಚಾರ ಹೆಚ್ಚಿದೆ. ಬರ ನಿರ್ವಹಣೆಗೆ ಅಧಿಕಾರಿಗಳು ಜನಪ್ರತಿನಿಧಿಗಳ ಟಾಸ್ಕ್ ಪೋರ್ಸ್ ರಚಿಸಿಕೊಳ್ಳಬೇಕಿತ್ತು ಇದ್ಯಾವುದನ್ನು ಮಾಡದೆ ಜನರನ್ನು ಸಂಕಷ್ಟಕ್ಕೆ ನೋಡಿದ್ದಾರೆ ಎಂದು ಹೇಳಿದ್ದಾರೆ.
ಪೋಟೊ ವಿನಯ್ ಹಳೆಕೋಟೆ