ಇತ್ತೀಚಿನ ಸುದ್ದಿ
ಮೂಡಿಗೆರೆ: ಒಣ ಗಾಂಜಾ ಮಾರಾಟ; ಮಾಲು ಸಹಿತ ಆರೋಪಿ ಬಂಧನ
28/11/2021, 11:13
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕೊಲ್ಲಿಬೈಲ್ ವೃತ್ತದಲ್ಲಿ ಒಣ ಗಾಂಜಾ ಹೊಂದಿದ ಪ ಆರೋಪಿದ ಮೇಲೆ ಮೂಡಿಗೆರೆ ತಾಲೂಕಿನ ಬಿಳುಗುಳ ಗ್ರಾಮದ ಅಲ್ಬರ್ಟ್ ಡಿಸೋಜ ಎಂಬಾತನನ್ನು ಬಂಧಿಸಲಾಗಿದೆ.
ಅಲ್ಬರ್ಟ್ ಡಿಸೋಜನನ್ನು ಶನಿವಾರ ರಾತ್ರಿ ಎನ್ ಡಿಪಿಎಸ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ ದಸ್ತಗಿರಿ ಮಾಡಲಾಗಿದೆ. ಮಾಲು ಸಹಿತ ಆರೋಪಿಯನ್ನು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಕಾರ್ಯದಲ್ಲಿ ಅಬಕಾರಿ ಉಪ ವಿಭಾಗದ ನಿರೀಕ್ಷಕರಾದ ಲೋಕೇಶ್, ಸಿಬ್ಬಂದಿಗಳಾದ ಸಂತೋಷ್ ಮುಖ್ಯ ಪೇದೆ, ಅಬಕಾರಿ ಪೇದೆಗಳಾದ ಬಸವರಾಜು ಬಂಗಾರಿ, ಶಂಕರ್ ಗುರುವ ಹಾಗೂ ಚಾಲಕರಾದ ಪ್ರಸನ್ನ ಕುಮಾರ್ ಭಾಗವಹಿಸಿದ್ದರು.