ಇತ್ತೀಚಿನ ಸುದ್ದಿ
ಮೂಡಿಗೆರೆ: ಧರ್ಮಸ್ಥಳದಿಂದ ಹೊರನಾಡಿಗೆ ಹೊರಟ ಟಿಟಿ ವಾಹನ ಪಲ್ಟಿ; ಶಿರಸಿ ಮೂಲದ ಹಲವರಿಗೆ ಗಂಭೀರ ಗಾಯ
16/10/2023, 11:04

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಾಲಕನ ನಿಯಂತ್ರಣ ತಪ್ಪಿ ಕೊಟ್ಟಿಗೆಹಾರ ಸಮೀಪ ದೇವನ ಗುಲ್ ಬಳಿ ಟಿಟಿ ವಾಹನವೊಂದು ಪಲ್ಟಿ ಹೊಡೆದ ಘಟನೆ ನಡೆದಿದ್ದು, ಹಲವರು ಗಾಯಗೊಂಡಿದ್ದಾರೆ.
ಧರ್ಮಸ್ಥಳದಿಂದ ಹೊರನಾಡು ಅನ್ನಪೂರ್ಣೇಶ್ವರಿ ದರ್ಶನಕ್ಕೆ ಸುಮಾರು 15 ಮಂದಿ ಭಕ್ತಾಧಿಗಳು ಟಿಟಿ ವಾಹನದಲ್ಲಿ
ಹೊರಟಿದ್ದರು. ಅಪಘಾತದಲ್ಲಿ
ವಾಹನದಲಿದ್ದ ಕೆಲವರಿಗೆ ಗಂಭೀರ ಗಾಯಾಗಳಾಗಿದ್ದು ಮೂಡಿಗೆರೆ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಟಿಟಿ ವಾಹನದಲಿದ್ದ 15 ಜನರು ಶಿರಸಿ ಮೂಲದವರು ಎಂದು ತಿಳಿದು ಬಂದಿದೆ.
ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.