ಇತ್ತೀಚಿನ ಸುದ್ದಿ
ಮೂಡಿಗೆರೆ: ಬಿಜೆಪಿಯಿಂದ ಅಮಾನತ್ತಾಗಿದ್ದ ಮುಖಂಡರಿಂದ ಗೋಡೆ ಬರಹಕ್ಕೆ ಚಾಲನೆ
23/02/2024, 00:27
ಮೂಡಿಗೆರೆ: ಬಿಜೆಪಿಯಿಂದ ಅಮಾನತ್ತಾಗಿದ್ದ ಮುಖಂಡರಿಂದ ಗೋಡೆ ಬರಹಕ್ಕೆ ಚಾಲನೆ
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ದೇಶಾದ್ಯಂತ ನಡೆಯುತ್ತಿರುವ ಮತ್ತೊಮ್ಮೆ ಮೋದಿ ಸರ್ಕಾರದ ಗೋಡೆ ಬರಹಕ್ಕೆ, ಮೂಡಿಗೆರೆಯ ರೆಬೆಲ್ ಮುಖಂಡರು ಹಲವಾರು ಕಾರ್ಯಕರ್ತರನ್ನು ಸೇರಿಸಿಕೊಂಡು ಚಾಲನೆ ನೀಡಿದ್ದಾರೆ.
ಮೂಡಿಗೆರೆಯ ನಗರದ ಪ್ರಮುಖ ಕಟ್ಟಡಗಳ ಗೋಡೆಗಳ ಮೇಲೆ ಮತ್ತೊಮ್ಮೆ ಮೋದಿ ಸರ್ಕಾರ ಎಂಬ ತಲೆ ಬರಹದ ಕಮಲ ಚಿಹ್ನೆಯ ಗೋಡೆ ಬರಹಗಳನ್ನು ಹಲವು ಕಡೆಗಳಲ್ಲಿ ಬರೆದಿದ್ದಾರೆ. ಇತ್ತೀಚಿಗೆ ಪಕ್ಷದಿಂದ ಅಮಾನತ್ತಾಗಿದ್ದ ರೆಬಲ್ ಮುಖಂಡರಾದ ಪಟ್ಟದೂರು ಪುಟ್ಟಣ್ಣ ಹಾಗೂ ಕನ್ನೇಹಳ್ಳಿ ಭರತ್ ರೊಂದಿಗೆ ಹಲವಾರು ಮೂಡಿಗೆರೆ ಬಿಜೆಪಿ ಕಾರ್ಯಕರ್ತರು ಸೇರಿದ್ದರು. ಈ ಸಂದರ್ಭದಲ್ಲಿ ಪುಟ್ಟಣ್ಣ ಮಾತನಾಡಿ ದೇಶದಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ ಬರಬೇಕು, ದೇಶದ ಉತ್ತಮ ಆಡಳಿತ ಮತ್ತೆ ಮುಂದುವರಿಯಬೇಕು, ಹಾಗಾಗಿ ಮುಂದಿನ ಚುನಾವಣೆಯಲ್ಲಿ ಹಗಲಿರಲು ಶ್ರಮಿಸುವುದಾಗಿ ತಿಳಿಸಿದರು,
ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಜೊತೆಗಿದ್ದರು