2:00 AM Friday19 - June 2026
ಬ್ರೇಕಿಂಗ್ ನ್ಯೂಸ್
ವಿಧಾನ ಪರಿಷತ್‌ ಚುನಾವಣೆಯಲ್ಲಿ ಅಡ್ಡ ಮತದಾನ: ಬಿ.ವೈ. ವಿಜಯೇಂದ್ರಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ… Bangalore | ಕಳ್ಳನ ಹಿಡಿಯಬೇಕಿದ್ದ ಖಾಕಿಯಿಂದಲೇ ಲೂಟಿ!: 20 ಲಕ್ಷ ದೋಚಿದ ಸಿಐಡಿ… ಕುಶಾಲನಗರ | ಹೆತ್ತ ತಾಯಿಯಿಂದಲೇ ಮಗನ ಬಲವಂತದ ಮತಾಂತರ: ಇಬ್ಬರ ಬಂಧನ ಗ್ಯಾರಂಟಿ ಸೌಲಭ್ಯಕ್ಕೆ ಹೊಸದಾಗಿ ಅರ್ಜಿ ಬೇಡ, ಮರು ಪರಿಶೀಲನೆ ಮಾತ್ರ: ಸಿಎಂ ಸಭೆಯಲ್ಲಿ… ವಿಧಾನ ಪರಿಷತ್ ಚುನಾವಣೆ ಫಲಿತಾಂಶ: ಫಲಿಸಿದ ಸಿಎಂ ಡಿಕೆಶಿ ರಣತಂತ್ರ; 5ರಲ್ಲಿ ಕೈ… ಬಾರ್ಬರ್ ಶಾಪ್‌ನಿಂದ ಬಿ-ಸ್ಕೂಲ್‌ವರೆಗೆ: ತಂದೆಯ ಕತ್ತರಿ ಹಿಡಿದ ಬಿಬಿಎ ವಿದ್ಯಾರ್ಥಿನಿ ಬಿಂದುಪ್ರಿಯಾ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರಾವಳಿ ಸಹಿತ ರಾಜ್ಯಾದ್ಯಂತ ಬಿರುಸಿನ ಮಳೆ ನಿರೀಕ್ಷೆ ದುಬಾರೆ ದುರಂತದ ಬಳಿಕ ರಾಜ್ಯದ ಆನೆ ಶಿಬಿರಗಳಲ್ಲಿ ಹೊಸ ನಿಯಮ ಜಾರಿ: ಪ್ರವಾಸಿಗರ… ವಿದ್ಯಾರ್ಥಿನಿ ಜೊತೆ ಅನೈತಿಕ ಸಂಬಂಧ ಆರೋಪ: ಕರ್ನಾಟಕ ವಿವಿ ಪ್ರೊ. ದೇವರಾಜನ್ ತಂಗದುರೈ… ವಿಧಾನ ಪರಿಷತ್ ಚುನಾವಣೆ: ದೇವನಹಳ್ಳಿ ರೆಸಾರ್ಟ್‌ಗೆ ಜೆಡಿಎಸ್ ಶಾಸಕರು ಶಿಫ್ಟ್; ಜನಾರ್ದನ ರೆಡ್ಡಿ…

ಇತ್ತೀಚಿನ ಸುದ್ದಿ

ಮುದ್ದೇಬಿಹಾಳ: ಭಕ್ತಸಾಗರದ ನಡುವೆ ನಾಲತವಾಡ ಅಯ್ಯನಗುಡಿ ರಥೋತ್ಸವ; ಪಲ್ಲಕ್ಕಿ ಮೆರವಣಿಗೆ

09/02/2025, 21:12

ಶಿವು ರಾಠೋಡ ಹುಣಸಗಿ ವಿಜಯಪುರ

info.reporterkarnataka@gmail.com
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ನಾಲತವಾಡ ಸರ್ವ ಧರ್ಮಗಳ ಸಾಮರಸ್ಯದ ಪ್ರತೀಕವಾದ ಅಯ್ಯನಗುಡಿ ಗಂಗಪ್ಪಯ್ಯನ ರಥೋತ್ಸವ ನಡೆಯಿತು.

ರಥೋತ್ಸವ ಆರಂಭಕ್ಕೂ ಮುನ್ನ ದೇಗುಲದ ಮುಂಭಾಗದಲ್ಲಿ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್.ನಾಡಗೌಡ ಸಹೋದರರ ಸಹಭಾಗಿತ್ವದಲ್ಲಿ ವಿಶ್ವಕರ್ಮ ಸಮಾಜದ ಬಂಧುಗಳ ಪರವಂತಿಕೆ, ನಂದಿ ಕೋಲು ಪ್ರದರ್ಶನ, ಪಲ್ಲಕ್ಕಿ ಮೆರವಣಿಗೆ ರಥದ ಸುತ್ತಲೂ ಪ್ರದಕ್ಷಿಣೆ ನಡೆಯಿತು.
*ಭಕ್ತಿ ಅರ್ಪಣೆ:* ರಾಜ್ಯದ ಮೂಲೆ ಮೂಲೆಯಿಂದ ಆಗಮಿಸಿದ್ದ ಅಪಾರ ಭಕ್ತರ ದಂಡು ರಥಕ್ಕೆ ಉತ್ತತ್ತಿ ಲಿಂಬೆ ಬಾಳೆ ಹಣ್ಣಿನಿಂದ ಎಸೆದು ಗಂಗಪ್ಪಯ್ಯ ಹರ ಹರ ಮಹಾದೇವ ಘೋಷಣೆಯಿಂದ ರಥ ತಲುಪುವ ಸುಮಾರು 200 ಮೀಟರ್ ದೂರದ ಪಾದ ಗಟ್ಟೆದರೆಗೆ ತೆರಳಿ ತಮ್ಮ ಭಕ್ತಿ ತೋರ್ಪಡಿಸಿಕೊಂಡರು.
*ಶಾಸಕರಿಂದ ಚಾಲನೆ:* ರಥ ಎಳೆಯುವ ಮುಂಚೆ ಸಾಂಪ್ರದಾಯದಂತೆ ಗಂಗಪ್ಪಯ್ಯನ ಜಾತ್ರೋತ್ಸವವನ್ನು ಹಬ್ಬದ
ರೂಪದಲ್ಲಿ ಆಚರಿಸಲು ಬಲದಿನ್ನಿ ನಾಡಗೌಡ ಧಣಿಗಳು ವ್ಯವಸ್ಥೆ ಮಾಡಿದ್ದರು. ಶಾಸಕ ಸಿ.ಎಸ್.ನಾಡಗೌಡ ಸಹೋದರರಾದ ಮುನ್ನಾಧಣಿ, ಬಾಳಸಾಹೇಬ, ಪ.ಪಂ ಮಾಜಿ ಅಧ್ಯಕ್ಷ_ ಹಾಲಿ ಸದಸ್ಯರಾದ ಹೃತ್ತಿರಾದ, ರಾಹುಲ್, ರಿತೀಶ್ ಅವರು ರಥೋತ್ಸವಕ್ಕೆ ಪೂಜೆ ನೆರವೇರಿಸಿ ತಾವೂ ಸಹ ರಥದ ಹಗ್ಗಕ್ಕೆ ಕೈ ಜೋಡಿಸಿ ಚಾಲನೆ ನೀಡಿದರು.
*ಬಿಗಿ ಬಂದೋಬಸ್ತ್:* ರಥೋತ್ಸವಕ್ಕೆ ಡಿವೈಎಸ್ಪಿ ಬಲ್ಲಪ್ಪ ನಂದಗಾವಿ, ಮುದ್ದೇಬಿಹಾಳದ ಸಿಪಿಐ ಮಹದ ಫೈಜುದ್ದಿನ್, ಪಿಎಸೈ ತಿಪ್ಪಾರೆಡ್ಡಿ ನೇತೃತ್ವದಲ್ಲಿ ಪೋಲೀಸ್ ಬಂದೋಬಸ್ತ ಕೈಗೊಳ್ಳಲಾಗಿತ್ತು.

ಇತ್ತೀಚಿನ ಸುದ್ದಿ

ಜಾಹೀರಾತು