10:58 PM Wednesday30 - October 2024
ಬ್ರೇಕಿಂಗ್ ನ್ಯೂಸ್
ಪಿಎಲ್ಐ ಯೋಜನೆಯಡಿ ಮೆರಿಲ್ ಸುಧಾರಿತ ಉತ್ಪಾದನಾ ಸೌಲಭ್ಯ: ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಜಿ ಸಂಸದ ದ್ರುವನಾರಾಯಣ್ ಸ್ಮರಣಾರ್ಥ ಆಶ್ರಯ ಚಾರಿಟೀಸ್ ವತಿಯಿಂದ ಬಡಬಗ್ಗರಿಗೆ ವಿವಿಧ ಸವಲತ್ತು… ಅಧ್ಯಯನ ಪ್ರವಾಸ: ದಕ್ಷಿಣ ಕೊರಿಯಾಕ್ಕೆ ಸ್ಪೀಕರ್ ಖಾದರ್ ಭೇಟಿ; ಶಿಕ್ಷಣ, ಆರೋಗ್ಯ, ವ್ಯಾಪಾರ… ರಾಜ್ಯ ಸರಕಾರಿ ನೌಕರರ ಸಂಘದ ನಂಜನಗೂಡು ಶಾಖೆ ಚುನಾವಣೆಗೆ ಕೋರ್ಟ್ ತಡೆಯಾಜ್ಞೆ ಗ್ರಾಮ ಪಂಚಾಯಿತಿ ಸದಸ್ಯೆಯ ಪತಿಯ ಕೊಲೆ ಪ್ರಕರಣ: ಉಪ್ಪಾರ ಸಮಾಜದಿಂದ ವಿಶೇಷ ಸಭೆ;… ಯುವತಿ ಆತ್ಮಹತ್ಯೆ ಯತ್ನಕ್ಕೆ ಪೊಲೀಸ್ ಇಲಾಖೆ ವೈಫಲ್ಯ ಕಾರಣ: ಶಾಸಕ ಡಾ. ಭರತ್… ಬೆಳಗಾವಿಯಲ್ಲಿ ರಾಜ್ಯೋತ್ಸವ ದಿನದಂದು ಕರಾಳ ದಿನಾಚರಣೆ ಆಚರಿಸಲು ಅವಕಾಶ ಬೇಡ: ಕರವೇ ಕಿತ್ತೂರಿನ‌ ಇತಿಹಾಸ ರಾಷ್ಟ್ರಮಟ್ಟಕ್ಕೆ ಪರಿಚಯಿಸುವುದು ನಮ್ಮೆಲ್ಲರ ಜವಾಬ್ದಾರಿ: ಸಚಿವ ಸತೀಶ್ ಜಾರಕಿಹೊಳಿ ಬೇಲೆಕೇರಿ ಬಂದರಿನಿಂದ 11,312 ಮೆಟ್ರಿಕ್ ಟನ್ ಅದಿರು ನಾಪತ್ತೆ ಪ್ರಕರಣ: ಸಿಬಿಐನಿಂದ ಕಾಂಗ್ರೆಸ್… ಬರೋಬ್ಬರಿ 16 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಇಬ್ಬರು…

ಇತ್ತೀಚಿನ ಸುದ್ದಿ

ಮುದಗಲ್ಲ: 5 ಲಕ್ಷ ರೂ. ವೆಚ್ಚದಲ್ಲಿ ಗೋಶಾಲೆ ಶೆಡ್ ನಿರ್ಮಾಣಕ್ಕೆ ಸಂಸದರಿಂದ ಭೂಮಿ ಪೂಜೆ

27/08/2021, 08:33

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು

info.reporterkarnataka@gmail.com

ಮುದಗಲ್ಲ ಪಟ್ಟಣದ ಗೋಶಾಲೆಗೆ ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆ ಮತ್ತು ಸಂಸದರ ಪ್ರದೇಶಾಭಿವೃದ್ದಿ ಯೋಜನೆಯಡಿಯಲ್ಲಿ ಮುದಗಲ್ಲ ಶ್ರೀ ಶರಣಮ್ಮ ಮಾತೆ ಗೋಶಾಲೆ ಕೇಂದ್ರಕ್ಕೆ ಅಂದಾಜು ಮೊತ್ತ 5 ಲಕ್ಷ ರೂಪಾಯಿ ಮೌಲ್ಯದ ಶೆಡ್ ನಿರ್ಮಾಣಕ್ಕೆ ಸಂಸದ ರಾಜಾ ಅಮರೇಶ್ವರ ನಾಯಕ ಗೋಶಾಲೆಯಲ್ಲಿ ಗೋಮಾತೆಗೆ ಪೂಜೆ ಸಲ್ಲಿಸಿಭೂಮಿ ಪೂಜೆ ನೆರವೇರಿಸಿದರು. 

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನ ಮಂತ್ರಿ ಆದರ್ಶ ಗ್ರಾಮ  2018-19 ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ 30 ಗ್ರಾಮಗಳು ಆಯ್ಕೆ ಮಾಡಲಾಗಿದೆ. ತಾಲ್ಲೂಕಿನ ಆಶಿಹಾಳ ತಾಂಡ, ಕೆ. ಮರಿಯಮ್ಮನ ಹಳ್ಳಿ, ಜಂಗಿರಾಂಪೂರು, ಛತ್ತರ ನಾಲ್ಕು ಗ್ರಾಮಗಳು ಆದರ್ಶ ಗ್ರಾಮ ಯೋಜನೆಗೆ ಆಯ್ಕೆಯಾಗಿದ್ದು, ಪ್ರತಿ ಗ್ರಾಮಕ್ಕೆ ಅಂದಾಜು ಮೊತ್ತ 40 ಲಕ್ಷ ರೂಪಾಯಿರಂತೆ ಒಟ್ಟು1. 60 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಈ ಯೋಜನೆ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು. 

ಮುಂದಿನ ಪೀಳಿಗೆಗಾಗಿ ಗೋವು ಮತ್ತು ಪರಿಸರವನ್ನು ಕಾಪಾಡುವುದು ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯವಾಗಿದೆ. ವಿವಿಧ ಬಗೆಯ ಗೋವುಗಳಿಂದ  ಸಕಲವೂ ಮನುಷ್ಯನಿಗೆ ಆರೋಗ್ಯಕ್ಕೆ ಔಷಧಿಯಾಗಿದೆ. ನಮ್ಮ ಸರ್ಕಾರ ಜನರ ಆರೋಗ್ಯ ರಕ್ಷಣೆಗೆ 1 ಕೋಟಿ 20 ಲಕ್ಷ ರೂಪಾಯಿ ಅಂಬುಲೆನ್ಸ್ ಗೆ ಬಿಡುಗಡೆ 

ಮಾಡಿದೆ. ಜನರ ಶುದ್ಧ ಕುಡಿಯುವ ನೀರಿಗಾಗಿ ಜಲ ಜೀವನ್ ಮಿಷನ್, ಜಲಧಾರೆ ಯೋಜನೆ, ಹರ್ ಗರ್ ಜಲ್ ಯೋಜನೆ,  ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ 2800 ಕೋಟಿ ರೂಪಾಯಿ ರೈತರಿಗೆ ನೀರಾವರಿ ಯೋಜನೆ ಮೀಸಲಿರಿಸಿದೆ. ಕೋವಿಡ್ ಅಲೆಯಿಂದ ತತ್ತರಿಸಿದ ಬಡ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಉಚಿತ ಅನ್ನ ಭಾಗ್ಯ ಯೋಜನೆ ಮುಂತಾದ ಜನಪರವಾದ ಯೋಜನೆ ಜಾರಿಗೆ ತಂದಿದೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಡಾ. ಗುರುರಾಜ ದೇಶಪಾಂಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಗೋವು ರಕ್ಷಿತೆ ರಕ್ಷಿತ‌ಃ ನಾವು ಗೋವುಗಳನ್ನು ರಕ್ಷಣೆ ಮಾಡಿದರೆ ಗೋವು ನಮ್ಮ ಆರೋಗ್ಯ ರಕ್ಷಣೆ ಮಾಡುತ್ತದೆ. ಗೋಮಾತೆಗೆ ಯ ಸಗಣಿಯಿಂದ ಸಕಲವೂ ಸರ್ವ ಔಷಧಿ ಉಂಟಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ  ಬಿಜೆಪಿ ಮಂಡಲ ಅಧ್ಯಕ್ಷ ಸಣ್ಣ ಸಿದ್ದಯ್ಯ ಸ್ವಾಮಿ ಮೇಗಳಪೇಟೆ, ಗೋಶಾಲೆ ಅಧ್ಯಕ್ಷ ಶಿತಲ್ ಜೈನ್,  ಮಹಾಂತೇಶ ಹಿರೇಮಠ, ಗುರು ಬಸಪ್ಪ ಸಜ್ಜನ, ಗಜೇಂದ್ರ ನಾಯಕ, ಜಗನ್ನಾಥ ಕುಲಕರ್ಣಿ, ಗಿರಿಮಲ್ಲನಗೌಡ, ದ್ಯಾಮಣ್ಣ ನಾಯಕ, ಹುಲ್ಲೇಶ ಸಾಹುಕಾರ, ಸಂಗಮೇಶ, ವಿಜಯ ಪಾಟೀಲ್, ಫಕೀರಪ್ಪ ಕುರಿ ಮುಂತಾದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು