ಇತ್ತೀಚಿನ ಸುದ್ದಿ
ಮೂಡುಬಿದರೆಯ ಆಳ್ವಾಸ್ ಆಸ್ಪತ್ರೆ ಯುದ್ಧ ಸ್ಮಾರಕದಲ್ಲಿ ಕಾರ್ಗಿಲ್ ವಿಜಯ ದಿವಸ ಆಚರಣೆ
26/07/2021, 18:44
ಮೂಡುಬಿದರೆ(reporterkarnataka news); ಮೂಡುಬಿದಿರೆ ವಲಯದ ಬೆಳುವಾಯಿ ಕ್ಲಸ್ಟರ್ ವ್ಯಾಪ್ತಿಯ ಶಿಕ್ಷಕರ ವತಿಯಿಂದ ಆಳ್ವಾಸ್ ಆಸ್ಪತ್ರೆಯಲ್ಲಿ ಇರುವ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಕಾರ್ಗಿಲ್ ವಿಜಯ ದಿವಸದ ಪ್ರಯುಕ್ತ ಸೋಮವಾರ ಗೌರವ ಅರ್ಪಿಸಲಾಯಿತು.
ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಪ್ರಸನ್ನ ವಿ. ಶೆಣೈ , ಸರಕಾರಿ ನೌಕರರ ಸಂಘದ ಅಧ್ಯಕ್ಷ ನಾಗೇಶ್, ಒಂದು ವರ್ಷಗಳಿಂದ ಕೊರೊನಾ ಕರ್ತವ್ಯ ನಿರ್ವಹಿಸುತ್ತಿರುವ ಶಮಂತ್ ಯು ಎಸ್,ಫರ್ಜಾನ ಬಾನು, ಪ್ರಶಾಂತ ಆಚಾರ್ಯ,ಲೋಲಾಕ್ಷಿ ಮತ್ತು ಆಳ್ವಾಸ್ ನ ಭಾಸ್ಕರ್ ಉಪಸ್ಥಿತರಿದ್ದರು.