ಇತ್ತೀಚಿನ ಸುದ್ದಿ
ಮುಚ್ಚೂರು: ಗ್ರಾಮ ಸ್ನೇಹಿ ಕಾರ್ಯಕ್ರಮ ಶಾಸಕ ಡಾ. ಭರತ್ ಶೆಟ್ಟಿ ಉದ್ಘಾಟನೆ; ಮನೆ, ಆರೋಗ್ಯ ಕಾರ್ಡ್, ವೃದ್ಧಾಪ್ಯ ವೇತನ ವಿತರಣೆ
09/09/2022, 19:13

ಸುರತ್ಕಲ್(reporterkarnataka.com): ಗ್ರಾಮ ಪಂಚಾಯತ್ ಮುಚ್ಚೂರು, ಲಯನ್ಸ್ ಕ್ಲಬ್ ಮುಚ್ಚೂರು, ಶ್ರೀ ರಾಮ ಯುವಕ ಸಂಘ ಮುಚ್ಚೂರು ಕಾನ, ಪ್ರಗತಿ ಯುವಕ ಮಂಡಲ ಮುಚ್ಚೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಗ್ರಾಮ ಸ್ನೇಹಿ ಕಾರ್ಯಕ್ರಮವನ್ನು ಶಾಸಕ ಡಾ. ಭರತ್ ಶೆಟ್ಟಿ ವೈ. ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ 169 ಕಟ್ಟಡ ಕಾರ್ಮಿಕರ ನೋಂದಾವಣಿ ಮತ್ತು ನವೀಕರಣ, 69 ಜಾತಿ ಮತ್ತು ಆದಾಯ ಪ್ರಮಾಣಪತ್ರ, 171ಆರೋಗ್ಯ ಕಾರ್ಡ್, 3 ಜನರಿಗೆ ವೃದ್ಧಾಪ್ಯ ವೇತನ, 34 ಪರಿಶಿಷ್ಟ ಪಂಗಡದವರಿಗೆ ನೀರಿನ ಟ್ಯಾಂಕ್, ಬಸವ ವಸತಿ ಯೋಜನೆಯಡಿಯಲ್ಲಿ 10 ಮನೆ ವಿತರಣೆ ಮತ್ತು 2 ಮನೆಗಳಿಗೆ ನೆರೆ ಪರಿಹಾರದ ಚೆಕ್ ಅನ್ನು
ಡಾ.ಭರತ್ ಶೆಟ್ಟಿ ವಿತರಿಸಿದರು.
ವೇದಿಕೆಯಲ್ಲಿ ಜಿಪಂ ಮಾಜಿ ಸದಸ್ಯರಾದ ಜನಾರ್ದನ ಗೌಡ, ಗ್ರಾಪಂ ಅಧ್ಯಕ್ಷರಾದ ಮೋಹಿನಿ, ಉಪಾಧ್ಯಕ್ಷರಾದ ನಾರಾಯಣ, ಎ ಎಸ್ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಸ್ಟ್ಯಾನಿ ಪಿಂಟೋ, ಲಯನ್ಸ್ ಕ್ಲಬ್ ಸದಸ್ಯರಾದ ಮುಕ್ತಾನಂದ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರಾದ ವೀರಪ್ಪ ಗೌಡ, ಸುಮನಾ, ಪೂರ್ಣಿಮಾ, ರಾಜೇಂದ್ರ ಪಿಂಟೋ, ಪಿಡಿಒ ಜಲಜಾ, ಕಾರ್ಯದರ್ಶಿ ಸತೀಶ್ ಕುಮಾರ್ ಉಪಸ್ಥಿತರಿದ್ದರು.