6:07 PM Saturday31 - January 2026
ಬ್ರೇಕಿಂಗ್ ನ್ಯೂಸ್
ಕಾನ್ಫಿಡೆಂಟ್‌ ಗ್ರೂಪ್‌ ಚೇರ್‌ಮೆನ್ ಸಿ.ಜೆ. ರಾಯ್‌ ಗುಂಡಿಕ್ಕಿಕೊಂಡು ಆತ್ಮಹತ್ಯೆ: ಐಟಿ ದಾಳಿಗೆ ಹೆದರಿದರೇ… ಕಾಡಾನೆ ದಾಳಿಯಿಂದ ಅದೃಷ್ಟವಶಾತ್ ತಂದೆ- ಮಗಳು ಜಸ್ಟ್ ಮಿಸ್: ಕೊಡಗಿನಲ್ಲಿ ತಪ್ಪಿದ ಭಾರಿ… ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ವಿ ಬಿ ಜಿ ರಾಮ್… 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ಉದ್ಘಾಟನೆ ಕೊಡಗು: ಮುಂದುವರಿದ ಆನೆ- ಮಾನವ ಸಂಘರ್ಷ; ಕಾಡಾನೆ ದಾಳಿಗೆ ಕಾರ್ಮಿಕ ಬಲಿ ಆರ್ಥಿಕ ಬೆಳವಣಿಗೆಗೆ ಕೇಂದ್ರದ ಆರ್ಥಿಕ ನೀತಿಗಳೇ ಕಾರಣ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ… ನಮ್ಮ ಸರ್ಕಾರ ಯಾರ ಪೋನ್ ಟ್ಯಾಪ್ ಮಾಡುವುದಿಲ್ಲ: ಸಿಎಂ ಸಿದ್ದರಾಮಯ್ಯ ಕನ್ನಡ ಭಾಷೆ ಎಂದರೆ ಹಲವು ಆಯಾಮಗಳ ಸಾಧ್ಯತೆ: ಪುರುಷೋತ್ತಮ ಬಿಳಿಮಲೆ 600ಕ್ಕೂ ಹೆಚ್ಚು ಜಿಟಿಸಿಸಿ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಲಿರುವ ರ‍್ಯಾಂಗ್‌ಸನ್ಸ್‌ ಏರೋಸ್ಪೇಸ್, ​​ಎಕ್ಸೈಡ್ ಎನರ್ಜಿ ಸುನಿಲ್ ಕುಮಾರ್ ಪರಶುರಾಮನ ಮೂರ್ತಿಯ ಫೈಬರ್ ನಲ್ಲಿ ಮಾಡಿಸಿ ಕಂಚಿನದ್ದು ಎಂದು ನಂಬಿಸಿದ್ದರು:…

ಇತ್ತೀಚಿನ ಸುದ್ದಿ

ಎಂಆರ್ ಪಿಎಲ್ 4ನೇ ಹಂತದ ಭೂಸ್ವಾಧೀನ: ನಿರ್ವಸಿತರಿಗೆ ನ್ಯಾಯೋಚಿತ ಪರಿಹಾರ, ಉದ್ಯೋಗಾವಕಾಶಕ್ಕೆ ಜಿಲ್ಲಾಧಿಕಾರಿಗೆ ಮನವಿ

12/10/2022, 10:13

ಮಂಗಳೂರು(reporterkarnataka.com): ಎಂಆರ್ ಪಿ ಎಲ್ 4ನೇ ಹಂತದ ಭೂಸ್ವಾಧೀನ ಸಂದರ್ಭ ನಿರ್ವಸಿತರಾಗುವ ಕುಟುಂಬಗಳಿಗೆ
ಪ್ರಧಾನ ಆದ್ಯತೆಯನ್ನು ನೀಡಿ ನ್ಯಾಯೋಚಿತ ಪರಿಹಾರಗಳನ್ನು ಮತ್ತು ಉದ್ಯೋಗಾವಕಾಶಗಳನ್ನು ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆವಿ ಅವರಿಗೆ ನಾಲ್ಕನೇ ಹಂತದ ಎಂ ಆರ್ ಪಿ ಎಲ್ ಭೂ ನಿರ್ವಸಿತರ ಹಿತರಕ್ಷಣ ಸಮಿತಿ ಒತ್ತಾಯಿಸಿತು.

ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಭೂಮಿಯನ್ನು ಕಳೆದುಕೊಳ್ಳುತ್ತಿರುವ ಕುಟುಂಬದ ಜೊತೆ ಶಾಸಕರಾದ ಡಾ.ವೈ ಭರತ್ ಶೆಟ್ಟಿ ಹಾಗೂ ಉಮಾನಾಥ ಕೋಟ್ಯಾನ್ ಅವರ ಮುಂದಾಳತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪ್ರಮುಖ ಬೇಡಿಕೆ ಬಗ್ಗೆ ಚರ್ಚಿಸಲಾಯಿತು.

ಭೂಮಿಯನ್ನ ಕಳೆದುಕೊಳ್ಳುತ್ತಿರುವ ರೈತ ಮುಖಂಡರ ಜೊತೆ ಹಾಗೂ ನಾಲ್ಕನೇ ಹಂತದ ಎಂ ಆರ್ ಪಿ ಎಲ್ ಭೂಸ್ವಾಧೀನ ನಿರ್ವಸಿತರ ಸಮಿತಿಯ ಮುಖಂಡರ ಜೊತೆ ಅವರ ಅಹವಾಲುಗಳನ್ನು ಆಲಿಸಿದರು.
ಶಾಸಕರಾದ ಡಾ.ಭರತ್ ಶೆಟ್ಟಿ ವೈ ಅವರು ಮಾತನಾಡಿ, ಈ ಹಿಂದೆ ಪುನರ್ ವಸತಿ ಕಾಲನಿಯಲ್ಲಿ ಗೊಂದಲಕ್ಕೆ ಕಾರಣವಾಗಿತ್ತು. ಈ ಬಾರಿ ಅಂತಹ ಸಮಸ್ಯೆಯನ್ನು ನಿರ್ವಸಿತರು ಎದುರಿಸದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು. ನಿರ್ವಸಿತ ಕುಟುಂಬಕ್ಕೆ ಉದ್ಯೋಗಕ್ಕೆ ಪ್ರಾಮುಖ್ಯತೆ ನೀಡುವಂತೆ ಸಲಹೆ ನೀಡಿದರು.

ಶಾಸಕ ಉಮಾನಾಥ ಕೋಟ್ಯಾನ್ , ಹಿತ ರಕ್ಷಣಾ ಸಮಿತಿಯ ಗೌರವಾಧ್ಯಕ್ಷ ಜೋಕಿಂ ಐವನ್ ಡೋನಿ ಸುವಾರೀಸ್, ಭೋಜರಾಜ್ ಸೂರಿಂಜೆ,ಸಮಿತಿ ಅಧ್ಯಕ್ಷ ಸುಧಾಕರ ಶೆಟ್ಟಿ, ಉಪಾಧ್ಯಕ್ಷರಾದ ಜಿ.ಕೆ ಪೂವಪ್ಪ, ಹೆನ್ರಿ ಫೆರ್ನಾಂಡಿಸ್, ಪ್ರಧಾನ ಕಾರ್ಯದರ್ಶಿ ಕೇಶವ ಶೆಟ್ಟಿ, ಕಾರ್ಯದರ್ಶಿ ಹೇಮನಾಥ್, ಕೋಶಾಧಿಕಾರಿ ಕುಸುಮಾಕರ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಸುರೇಶ್ ರಾಮ,ಕೃಷ್ಣಮೂರ್ತಿ, ಸಂಚಾಲಕ ಸ್ಟಾನಿ ಫೆರ್ನಾಂಡಿಸ್ , ಅಧಿಕಾರಿಗಳು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು