ಇತ್ತೀಚಿನ ಸುದ್ದಿ
ಮೃತ ಮಹಿಳೆಯ ಮನೆಗೆ ಸಾಲ ವಸೂಲಿಗೆ ಬಂದ ಆನ್ ಲೈನ್ ಲೋನ್ ಕಂಪನಿಯ ಸಿಬ್ಬಂದಿ: ಸಾರ್ವಜನಿಕರ ಆಕ್ರೋಶ
23/12/2022, 09:58

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporter Karnataka@gmail.com
ಮೂಡಿಗೆರೆ ತಾಲ್ಲೂಕಿನ ಬಣಕಲ್ ನ ಮೃತವ್ಯಕ್ತಿಯ ಮನೆಗೆ ಸಾಲ ವಸೂಲಿಗೆಂದು ಆನ್ ಲೈನ್ ಲೋನ್ ಕಂಪನಿಯ ಸಿಬ್ಬಂದಿ ಬಂದಿದ್ದು ಇದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಕೆಲ ತಿಂಗಳ ಹಿಂದೆ ಬಣಕಲ್ ನ ಇಂದಿರಾ ನಗರದ ಮಹಿಳೆಯೊಬ್ಬರು ಮೃತಪಟ್ಟಿದ್ದು ಮೃತರ ಮನೆಗೆ ಆನ್ ಲೈನ್ ಲೋನ್ ಕಂಪನಿಯ ಸಿಬ್ಬಂದಿಗಳು ಸಾಲ ವಸೂಲಾತಿಗೆ ಬಂದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.