5:50 PM Monday12 - January 2026
ಬ್ರೇಕಿಂಗ್ ನ್ಯೂಸ್
ಜಿ ರಾಮ್ ಜಿ ಬಗ್ಗೆ ಕಾಂಗ್ರೆಸ್ ಸುಳ್ಳು ಸಂಕಥನ: ಕೇಂದ್ರ ಸಚಿವ ಎಚ್.ಡಿ.… ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಿದಾಗ ಮಾತ್ರ ಸುಖಿ ರಾಜ್ಯ ಸ್ಥಾಪನೆ… ಕಿಂಗ್ ಸಿಗರೇಟ್: ಎಂಆರ್‌ಪಿ ₹170 ಇದ್ದರೂ ₹250ಕ್ಕೆ ಮಾರಾಟ; ನಿಯಂತ್ರಣವಿಲ್ಲದ ದರ; ಗ್ರಾಹಕರ… ಒಣಗಿದ್ದ ಸಿಪ್ಪೆ ಸಾಗಿಸುತ್ತಿದ್ದ ಲಾರಿ ಬೆಂಕಿಗಾಹುತಿ: ಮೈಸೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ವಾಹನ ಕೇರಳ ಸರ್ಕಾರದಿಂದ ಭಾಷಾ ಸ್ವಾತಂತ್ರ್ಯದ ಉಲ್ಲಂಘನೆ: ಸಚಿವ ಶಿವರಾಜ್ ‌ತಂಗಡಗಿ ಪ್ರಹ್ಲಾದ್ ಜೋಶಿ ಅವರಿಗೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಇತಿಹಾಸ ಗೊತ್ತಿಲ್ಲ: ಡಿಸಿಎಂ ಡಿ.ಕೆ.… ನಿಷ್ಕ್ರಿಯ ಪತ್ರಿಕೆಗಾಗಿ ರಾಜ್ಯದ ಖಜಾನೆ ಲೂಟಿ ಮಾಡಿದ ಕಾಂಗ್ರೆಸ್ ಸರ್ಕಾರ: ಕೇಂದ್ರ ಸಚಿವ… ವಿಮಾನದಲ್ಲಿ ಶೈಕ್ಷಣಿಕ ಪ್ರವಾಸ: ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ನಿಂತ ಮುತ್ತಿಗೆಪುರ ಸರಕಾರಿ… ಅಕ್ರಮ ಗಾಂಜಾ ಮಾರಾಟ: ಅಸ್ಸಾಂ ಮೂಲದ ಇಬ್ಬರು ಆರೋಪಿಗಳ ಬಂಧನ ನಮ್ಮ ಮೆಟ್ರೋದಲ್ಲಿ ವಿದ್ಯಾರ್ಥಿಗಳಿಗೆ ರಿಯಾಯಿತಿ ಪಾಸ್: ಎಎಪಿ ಯುವ ಘಟಕದಿಂದ ಸಹಿ ಸಂಗ್ರಹಣ…

ಇತ್ತೀಚಿನ ಸುದ್ದಿ

ಯುವ ಶಕ್ತಿಯ ಸದ್ಬಳಕೆಗೆ ಸಂಸದರ ಕ್ರೀಡಾ ಮಹೋತ್ಸವ: ಹಾವೇರಿಯಲ್ಲಿ ಬಸವರಾಜ ಬೊಮ್ಮಾಯಿ

12/01/2026, 17:49

ಹಾವೇರಿ(reporterkarnataka.com): ನಮ್ಮ ದೇಶದ ಯುವ ಶಕ್ತಿಯ ಸದ್ಬಳಕೆ ಮಾಡಿಕೊಂಡು ಅವರ ಇಚ್ಛಾನುಸಾರ ಕೆಲಸ ಮಾಡಲು ಅವಕಾಶ ಕೊಡಬೇಕು. ಅದಕ್ಕೆ ಸದೃಡ ವ್ಯಕ್ತಿತ್ವ ರೂಪುಗೊಂಡರೆ ನಮ್ಮ ದೇಶದ ಭವಿಷ್ಯ ನಿಶ್ಚಿತವಾಗಿಯೂ ಉಜ್ವಲವಾಗುತ್ತದೆ ಎಂದು ಪಧಾನಿ ನರೇಂದ್ರ ಮೋದಿಯವರು ಯುವ ಶಕ್ತಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡೆಯಲ್ಲಿ ತೊಡಗಿಸಲು ಸಂಸದರ ಕ್ರೀಡಾ ಮಹೋತ್ಸವ ಕಾರ್ಯಕ್ರಮ ರೂಪಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.


ಅವರು ಹಾವೇರಿ ಲೋಕಸಭಾ ಕ್ಷೇತ್ರದ ಸಂಸದರ ಕ್ರೀಡಾ ಮಹೋತ್ಸವ ಕಾರ್ಯಕ್ರಮನ್ನು ಭಾನುವಾರ ಹಾವೇರಿ ಜಿಲ್ಲಾ ಕ್ರೀಡಾಂಗಣದಲ್ಲಿ ಉದ್ಘಾಟನೆ ಮಾಡಿ ಮಾತನಾಡಿದರು. ನೆಚ್ಚಿನ ಪಧಾನಿ ನರೇಂದ್ರ ಮೋದಿಯವರು ರೂಪಿಸಿರುವ ಸಂಸದರ ಕ್ರೀಡಾ ಮಹೋತ್ಸವವನ್ನು ನಮ್ಮ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಲ್ಲ ತಾಲೂಕುಗಳಲ್ಲಿ ಏರ್ಪಡಿಸಲಾಗುತ್ತಿದೆ. ನಮ್ಮ ಭಾರತ ಬಹಳ ದೊಡ್ಡ ಜನಸಂಖ್ಯೆ ಇರುವ ದೇಶ ಇಡಿ ಜಗತ್ತಿಗೆ ಹೋಲಿಸಿದರೆ ಅತಿ ಹೆಚ್ಚು ಜನಸಂಖ್ಯೆ ಇರುವ ದೇಶ. ಶೇ 60 ರಷ್ಟು ಜನರು 45 ವರ್ಷ ಒಳಗಿನ ಜನಸಂಖ್ಯೆ ಇದೆ. 18 ರಿಂದ 25 ವರ್ಷದೊಳಗಿನ ಜನಸಂಖ್ಯೆ ಶೇ30 ರಷ್ಟಿದೆ. ಅಮೇರಿಕಾ, ಯುರೋಪ್ ನಲ್ಲಿ ಐವತ್ತು ವರ್ಷ ಮೇಲಿನವರೇ ಹೆಚ್ಚಿದ್ದಾರೆ. ಜಪಾನಲ್ಲಿ 70 ವರ್ಷದ ಮೇಲಿನವರು ಹೆಚ್ಚಿದ್ದಾರೆ. ನಮ್ಮ ದೇಶದ ಯುವ ಶಕ್ತಿಯ ಸದ್ಬಳಕೆ ಮಾಡಿಕೊಳ್ಳಬೇಕು. ಅವರ ಇಚ್ಛಾನುಸಾದ ಕೆಲಸ ಮಾಡಲು ಅವಕಾಶ ಕೊಡಬೇಕು. ಅದಕ್ಕೆ ಸದೃಡ ಮನಸ್ಸು ಮತ್ತು ದೇಹ ಇರಬೇಕು. ಆ ಸದೃಢ ವ್ಯಕ್ತಿತ್ವ ರೂಪಗೊಂಡರೆ ನಮ್ಮ ದೇಶದ ಭವಿಷ್ಯ ನಿಶ್ಚಿತವಾಗಿಯೂ ಉಜ್ವಲವಾಗುತ್ತದೆ. ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ದೇಶವನ್ನು ಬಹಳಷ್ಟು ಮುಂದುವರೆಸಿದ್ದಾರೆ. ಬಡತನ ನಿರ್ಮೂಲನೆ ಸಾಧ್ಯವಿಲ್ಲ ಅಂತ ಹೇಳಿದ್ದರು. ಆದರೆ, ನಮ್ಮ ಪ್ರಧಾನಿ 25 ಕೋಟಿ ಜನರನ್ನು ಬಡತನದಿಂದ ನಿರ್ಮೂಲನೆ ಮಾಡಿದ್ದಾರೆ. ಕೈಗೆ ಕೆಲಸ, ವಿದ್ಯಾಭ್ಯಾಸ, ಗ್ಯಾಸ್, ಮನೆ ಎಲ್ಲವನ್ನೂ ನಿಡಿದ್ದಾರೆ. ಕೊವಿಡ್ ನಂತರ ಎಲ್ಲ ದೇಶಗಳು ಚೇತರಿಸಿಕೊಂಡಿಲ್ಲ. ಭಾರತ ಶೇ 7.5 ರಷ್ಟು ಆರ್ಥಿಕ ಬೆಳವಣಿಗೆ ಆಗುತ್ತಿದೆ. ಅಮೇರಿಕಾ ಶೇ 2 ರಷ್ಟು, ಜಪಾನ್ ಶೇ 4 ರಷ್ಟು ಬೆಳವಣಿಗೆ ಆಗುತ್ತಿವೆ. ನಮ್ಮ ದೇಶದ ಆರ್ಥಿಕ ಬೆಳವಣಿಗೆಯಿಂದ ತಲಾವಾರು ಆದಾಯ ಹೆಚ್ಚಳ ಆಗುತ್ತಿದೆ. ಪ್ರಧಾನಿಯವರು ಶಿಕ್ಷಣ ಕ್ಷೇತದಲ್ಲಿ ಎನ್‌ಇಪಿ ತಂದು ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಹಣ ನೀಡುತ್ತಿದ್ದಾರೆ. ನಮ್ಮ ದೇಶದ ಸುರಕ್ಷತೆಗೆ ಹೆಚ್ಚು ಹಣ ನೀಡುತ್ತಿದ್ದಾರೆ. ನಮ್ಮ ಸೈನ್ಯವನ್ನು ದೊಡ್ಡ ಪಮಾಣದಲ್ಲಿ ಸಿದ್ಧ ಮಾಡಿದ್ದಾರೆ ಎಂದು ಹೇಳಿದರು.

*ಕ್ರೀಡೆಗೂ ಆದ್ಯತೆ:*
ಪ್ರಧಾನಿ ನರೇಂದ್ರ ಮೋದಿಯವರು ಕ್ರೀಡೆಗೂ ಆದ್ಯತೆ ನೀಡಿದ್ದಾರೆ. ಮೊದಲು ಫಿಟ್ ಇಂಡಿಯಾ ಎಂದರು ನಂತರ ಖೇಲೋ ಇಂಡಿಯಾ ಅಂತ ಆಟ ಆಡಲು ಹೇಳಿದರು. ಅದು ವಿಶೇಷವಾಗಿ ಗ್ರಾಮೀಣ ಕ್ರೀಡೆಗಳಿಗೆ ಆದ್ಯತೆ ನೀಡಿದರು. ಓಲಂಪಿಕ್ಸ್ ಬಂದಾಗ ಜೀತೋ ಇಂಡಿಯಾ ಅಂತ ಹೇಳಿದರು. ಅದರ ಪರಿಣಾಮ ಓಲಿಂಪಿಕ್ಸ್‌ನಲ್ಲಿ ಭಾರತ ಮೋದಿಯವರ ಅವಧಿಯಲ್ಲಿ ಅತಿ ಹೆಚ್ಚು ಮೆಡಲ್ ಪಡೆಯುವಂತಾಯಿತು. ಪ್ಯಾರಾ ಓಲಿಂಪಿಕ್ಸ್‌ನಲ್ಲಿ ಭಾರತ ಅತಿ ಹೆಚ್ಚು ಮೆಡಲ್ ಪಡೆದಿದೆ. ಕ್ರೀಡೆಗೆ ಹೆಚ್ಚು ಒತ್ತು ಕೊಡಬೇಕು ಅಂತ ಸಂಸದರ ಕ್ರೀಡಾ ಮಹೋತ್ಸವ ಆಯೋಜನೆ ಮಾಡಿದ್ದಾರೆ. ನಾವು 100 ಮೀಟರ್, 4×100 ರಿಲೇ, ಲಾಂಗ್ ಜಂಪ್ ಇಟ್ಟಿದ್ದೇವೆ. ಕಬಡ್ಡಿ, ಖೋ ಖೋ, ವಾಲಿಬಾಲ್, ಹಗ್ಗ ಎಳೆಯುವ ಗ್ರಾಮೀಣ ಗುಂಪು ಕ್ರೀಡೆಗಳನ್ನು ಇಟ್ಟಿದ್ದೇವೆ. ಸರ್ಕಾರಿ ನೌಕರರು ಮತ್ತು ಪೊಲೀಸರು ಇದರಲ್ಲಿ ಭಾಗವಹಿಸುತ್ತಾರೆ. ಇವತ್ತು ಗೆಲ್ಲುವವರಿಗೆ ಮೆಡಲ್ ಕೂಡ ಕೊಡುತ್ತೇವೆ. ಅಂತಿಮ ಹಂತದಲ್ಲಿ ಗೆಲ್ಲುವವರಿಗೆ ಕ್ಯಾಶ್ ಪ್ರೈಜ್ ಕೊಡುತ್ತೇವೆ ಎಂದು ಅವರು ನುಡಿದರು.
ಸಂಸದರ ಕ್ರೀಡಾ ಮಹೋತ್ಸವ ಆಯೋಜನೆಯಲ್ಲಿ ಜಿಲ್ಲಾಡಳಿತ ಬಹಳ ದೊಡ್ಡ ಸಹಕಾರ ನೀಡಿದೆ. ಜಿಲ್ಲಾ ಕ್ರೀಡಾಧಿಕಾರಿ ಲತಾ ಅವರ ನೇತೃತ್ವದಲ್ಲಿ ಒಳ್ಳೆಯ ರೀತಿ ಆಯೋಜನೆ ಮಾಡಿದ್ದಾರೆ. ಜಿಲ್ಲೆಯ ಎಲ್ಲ ಅಧಿಕಾರಿಗಳಿಗೆ ಅಭಿನಂದನೆ ಹಾಗೂ ಧನ್ಯವಾದಗಳು. ಎಲ್ಲ ಕ್ರೀಡಾಪಟುಗಳಿಗೆ ಶುಭ ಕೋರುತ್ತೇನೆ. ಯಾರು ಸೋಲಲು ಹೆದರುವುದಿಲ್ಲ. ಅವನು ಮಾತ್ರ ಗೆಲ್ಲುತ್ತಾನೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ಸಿ. ಪಾಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕ ಅರುಣ್ ಕುಮಾರ್ ಪೂಜಾರ, ಜಿಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ ಹಾಗೂ ಮತ್ತಿತರರು ಹಾಜರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು