ಇತ್ತೀಚಿನ ಸುದ್ದಿ
ಮೋಜಿನಾಟ ಪ್ರಾಣವನ್ನೇ ಕಸಿಯಿತು: ಸ್ನೇಹಿತರ ಜತೆ ಆರ್ಬಿ ಫಾಲ್ಸ್ ನಲ್ಲಿ ಈಜಲು ತೆರಳಿದ ವಿದ್ಯಾರ್ಥಿನಿ ನೀರು ಪಾಲು
02/08/2021, 20:34

ಕಾರ್ಕಳ(reporterkarnataka.com): ಸ್ನೇಹಿತರೊಂದಿಗೆ ನಿಟ್ಟೆ ಸಮೀಪದ ಆರ್ಬಿ ಫಾಲ್ಸ್ ಗೆ ಈಜಲು ತೆರಳಿದ ಕಾರ್ಕಳ ಕಾಲೇಜೊಂದರ ವಿದ್ಯಾರ್ಥಿನಿ ನೀರುಪಾಲಾದ ದಾರುಣ ಘಟನೆ ಸೋಮವಾರ ನಡೆದಿದೆ.
ಮಂಗಳೂರಿನ ವರ್ಷಿತಾ(19) ತನ್ನ ಇಬ್ಬರು ಸ್ನೇಹಿತರ ಜತೆ ಆರ್ಬಿ ಫಾಲ್ಸ್ ಗೆ ತರಳಿದ್ದಳು. ಈಜಲು ಚೆನ್ನಾಗಿ ಬರುವ ಆಕೆ ನೀರಿನ ಸುಳಿಗೆ ಸಿಲುಕಿ ನೀರುಪಾಲಾದಳು ಎಂದು ತಿಳಿದು ಬಂದಿದೆ. ಅಗ್ನಿಶಾಮಕ ದಳದ ಸಿಬ್ಬಂದಿಗಳು ಶವ ಪತ್ತೆ ಮಾಡಿದ್ದಾರೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.