ಇತ್ತೀಚಿನ ಸುದ್ದಿ
ಮೋಹಿನಿಯ ಮೋಹಜಾಲಕ್ಕೆ ಬಿದ್ದ ಒಂಟಿ ಸಲಗ: ಅರಣ್ಯ ಇಲಾಖೆಯ ಹನಿಟ್ರ್ಯಾಪ್ ಕೊನೆಗೂ ಯಶಸ್ವಿ
25/08/2022, 21:29
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕಳೆದ ನಾಲ್ಕೈದು ತಿಂಗಳಿನಿಂದ ಮಲೆನಾಡಿಗರ ನಿದ್ದೆಗೆಡಿಸಿದ್ದ ಹಾವೇರಿಯ ಕಾಡಾನೆ ಕೊನೆಗೂ ಹನಿಟ್ರ್ಯಾಪ್ ಗೆ ಸಿಲುಕಿದೆ. ಮೋಹಿನಿಯ ಮೋಹಜಾಲಕ್ಕೆ ಸಿಲುಕಿದ ಟಸ್ಕರನ್ನು ಅರಣ್ಯ ಸಿಬ್ಬಂದಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಪ್ಪ ತಾಲೂಕಿನ ಜಯಪುರ ಸಮೀಪದ ಎಲೆಮಡಿಲು ಗ್ರಾಮದಲ್ಲಿ ಹನಿಟ್ರ್ಯಾಪ್ ಮೂಲಕ ಹಾವೇರಿ ಟಸ್ಕರ್ ನ ಹಿಡಿಯುವಲ್ಲಿ ಅರಣ್ಯಾಧಿಕಾರಿಗಳು ಸಫಲರಾಗಿದ್ದಾರೆ. ಮೋಹಿನಿ ಎಂಬ ಹೆಣ್ಣಾನೆಯನ್ನು ಬಿಟ್ಟು ಈ ಒಂಟಿ ಸಲಗವನ್ನು ಸೆರೆ ಹಿಡಿಯಲಾಯಿತು.ನಾಲ್ಕೈದು ತಿಂಗಳಿಂದ ಈ ಆನೆ ಮಲೆನಾಡಿಗರ ನಿದ್ದೆಗೆಡಿಸಿತ್ತು.
ಐದು ಸಾಕಾನೆಯಿಂದ ಒಂದು ಒಂಟಿ ಸಲಗಕ್ಕಾಗಿ ಕಾರ್ಯಚರಣೆ ನಡೆಸಲಾಗಿತ್ತು. 40ಕ್ಕೂ ಹೆಚ್ಚು ಸಿಬ್ಬಂದಿ 6 ದಿನದಿಂದ ಕಾರ್ಯಾಚರಣೆ ನಡೆಸುತ್ತಿದ್ದರು. ಈ ಒಂಟಿ ಸಲಗ ಹಗಲಲ್ಲಿ ದಾಂಧಲೆ ನಡೆಸಿ ಸಂಜೆ ಪ್ರಪಾತದ ಸ್ಥಳಕ್ಕೆ ಹೋಗುತ್ತಿತ್ತು.