2:02 PM Wednesday3 - December 2025
ಬ್ರೇಕಿಂಗ್ ನ್ಯೂಸ್
ಮಂಗಳೂರಿಗೆ ಆಗಮಿಸಿದ ಕೆ.ಸಿ. ವೇಣುಗೋಪಾಲ್: ಡಿಕೆ ಪರ ಘೋಷಣೆ ಕೂಗಿದ ಕೈ ಕಾರ್ಯಕರ್ತರು Kodagu | ವಿರಾಜಪೇಟೆಯ ಕರಡಿಗೋಡುನಲ್ಲಿ ಕಾಡಾನೆಗಳ ಉಪಟಳ: ಬೆಳೆ ನಾಶ ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ…

ಇತ್ತೀಚಿನ ಸುದ್ದಿ

ಮೊಡಂಕಾಪು: ಕೊಂಕಣಿ ಯುವ ಲೇಖಕರಿಗೆ ತರಬೇತಿ ಕಾರ್ಯಾಗಾರ

29/11/2024, 22:48

ಬಂಟ್ವಾಳ(reporterkarnataka.com): ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಕಥೊಲಿಕ್‌ ಸಭಾ ಮಂಗ್ಳುರ್‌ ಪ್ರದೇಶ್‌ (ರಿ.) ಬಂಟ್ವಾಳ ವಲಯದ ಸಹಯೋಗದಿಂದ ಮೊಡಂಕಾಪು ಕನ್ನಡ ಮೀಡಿಯಂ ಶಾಲೆಯ ಸಭಾಂಗಣದಲ್ಲಿ ಯುವ ಲೇಖಕರಿಗೆ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮದ ಉದ್ಘಾಟನೆ ನಡೆಯಿತು. ಬಂಟ್ವಾಳ ವಲಯದ ಆಧ್ಯಾತ್ಮಿಕ ನಿರ್ದೇಶಕರಾದ ವಂ|ಫಾ| ವಲೇರಿಯನ್‌ ಡಿಸೋಜ, ಕಾರ್ಯಾಗಾರದ ಅಧ್ಯಕ್ಷರಾಗಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಜೋಕಿಂ ಸ್ಟ್ಯಾನಿ ಆಲ್ವಾರಿಸ್, ಮುಖ್ಯ ಅತಿಥಿಗಳಾಗಿ ಕಥೊಲಿಕ್‌ ಸಭಾ ಮಂಗ್ಳುರ್‌ ಪ್ರದೇಶ್‌ (ರಿ.) ಬಂಟ್ವಾಳ ವಲಯದ ಅಧ್ಯಕ್ಷರಾದ ಜೋನ್‌ ಲಸ್ರಾದೊ, ಬಂಟ್ವಾಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮಿಣ ಅಭಿವೃದ್ದಿ ಬ್ಯಾಂಕ್‌ ಅಧ್ಯಕ್ಷರಾದ ಅರುಣ್‌ ರೋಶನ್‌ ಡಿಸೋಜ, ಕಥೊಲಿಕ್‌ ಸಭಾ ಮಂಗ್ಳುರ್‌ ಪ್ರದೇಶ್‌ (ರಿ.) ಕೇಂದ್ರಿಯ ನಿಕಟಪೂರ್ವ ಅಧ್ಯಕ್ಷರಾದ ಸ್ಟ್ಯಾನಿ ಲೋಬೊರ ಅವರು ಉಪಸ್ಥಿತರಿದ್ದರು,
ತರಬೇತುದಾರರಾಗಿ ಕವಯತ್ರಿಯಾದ ಡಿಂಪಲ್‌ ಜೆನಿಫರ್ ಫೆರ್ನಾಂಡಿಸ್‌ ಅವರು ಕವಿತೆ ರಚನೆ ಬಗ್ಗೆ ಹಾಗೂ ತಮ್ಮ ಅನುಭವದ ಬಗ್ಗೆ ಮಾಹಿತಿ ಹಂಚಿಕೊಂಡರು. ಕವನಗಳು ಹೇಗೆ ಉದ್ಬವಗೊಳ್ಳುತ್ತವೆ, ಯಾವ ರೀತಿ ಕವನ ಬರೆಯಬಹುದೆಂದು ಮಾಹಿತಿ ನೀಡಿದರು. ಯುವಕವಿ, ಕಥೆಗಾರರಾದ ಗ್ಲ್ಯಾನಿಷ್‌ ಮಾರ್ಟಿಸ್‌ ಯುವ ಲೇಖಕರಿಗೆ ಕಥೆ ಬರೆಯುವ ವಿಧಾನ/ ಹಂತಗಳ ಬಗ್ಗೆ ಮಾಹಿತಿ ನೀಡಿ, ಕಥೆ ಹೇಗೆ ಬರೆಯಬೇಕೆಂದು ತಿಳಿಸಿದರು.
ಸಮರ್ಥ್‌ ಭಟ್‌ರವರ ಸದಸ್ಯ ಸಂಚಾಲಕತ್ವದಲ್ಲಿ ಈ ನಡೆಯಿತು, ಅಕಾಡೆಮಿ ಸದಸ್ಯರುಗಳಾದ ನವೀನ್‌ ಲೋಬೊ, ಅಕ್ಷತಾ ಎಂ. ನಾಯಕ್‌ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು