8:45 PM Friday4 - April 2025
ಬ್ರೇಕಿಂಗ್ ನ್ಯೂಸ್
Bangaluru | ಚಿಲಿ ಅಧ್ಯಕ್ಷ ಗ್ಯಾಬ್ರಿಯಲ್ ಬೋರಿಕ್ ಫಾಂಟ್ ಬೆಂಗಳೂರಿಗೆ ಭೇಟಿ: 2… Mangaluru | ಸ್ಪೆಲ್‌ ಬೀ ವಿಜ್‌ ನ್ಯಾಶನಲ್‌ ಸ್ಪೆಲ್‌ ಬೀ: ಮಂಗಳೂರಿನ ಸಿಯೆಲ್‌… Bangaluru | ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರು ಜಲ ಮಂಡಳಿಯಿಂದ ವಿನೂತನ ಯೋಜನೆ:… Good News | ರೈತರಿಗೆ 7 ವರ್ಷಗಳ ನಂತರ ಮತ್ತೆ ಸೂಕ್ಷ್ಮ ನೀರಾವರಿಗೆ… Chikkamagaluru | ಕಾಫಿನಾಡಿನಲ್ಲಿ ಭಾರೀ ಮಳೆ: ಕೊಟ್ಟಿಗೆಹಾರ, ಬಣಕಲ್, ಬಾಳೂರು, ಚಾರ್ಮಾಡಿಯಲ್ಲಿ ವರ್ಷಧಾರೆ Solar power | ದೇಶದ 2,249 ರೈಲು ನಿಲ್ದಾಣಗಳಲ್ಲಿ 209 ಮೆಗಾವ್ಯಾಟ್‌ ಸೌರ… EX CM | ವಕ್ಸ್ ಆಸ್ತಿ ಕಬಳಿಸಿರುವುದನ್ನು ಮುಚ್ಚಿ ಹಾಕಲು ಕಾಂಗ್ರೆಸ್‌ ತಿದ್ದುಪಡಿ… Chikkamagaluru | ಅನ್ನದಾತ ಆತ್ಮಹತ್ಯೆ: ಕಿರುಕುಳ ನೀಡಿದ ಬ್ಯಾಂಕ್ ಎದುರು ರೈತನ ಪಾರ್ಥಿವ… Mangaluru | ಜಾಮರ್ ಸಮಸ್ಯೆ ಬಗೆಹರಿಸದಿದ್ದರೆ ಜೈಲಿನೊಳಗೆ ನುಗ್ಗಿ ಕಿತ್ತು ಬಿಸಾಕ ಬೇಕಾಗುತ್ತದೆ:… Delhi | ರಾಜ್ಯದ್ದು “ಜನ-ಕರ” ವಸೂಲಿ ಸರಕಾರ: ಕಾಂಗ್ರೆಸ್‌ ವಿರುದ್ಧ ಕೇಂದ್ರ ಸಚಿವ…

ಇತ್ತೀಚಿನ ಸುದ್ದಿ

ಮೊಡಂಕಾಪು ಕಾರ್ಮೆಲ್ ಕಾಲೇಜು:ರಾಷ್ಟ್ರೀಯ ಸೇವಾ ಯೋಜನೆ ಚಟುವಟಿಕೆಗಳ ಉದ್ಘಾಟನೆ

17/01/2022, 19:11

ಬಂಟ್ವಾಳ(reporterkarnataka.com):
ಕಾರ್ಮೆಲ್ ಕಾಲೇಜ್ ಮೊಡಂಕಾಪು ರಾಷ್ಟ್ರೀಯ ಸೇವಾ ಯೋಜನಾ ಘಟಕದ 2021-22ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆಗಳ ಉದ್ಘಾಟನೆ ಹಾಗೂ ರಾಷ್ಟ್ರೀಯ ಯುವ ದಿನಾಚರಣೆಯ ಕಾರ್ಯಕ್ರಮ ಕಾಲೇಜು ಸಭಾಂಗಣದಲ್ಲಿ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಹರಿಪ್ರಸಾದ್ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಅವರು ಮಾತನಾಡಿ, ಎನ್ಎಸ್ಎಸ್ ನ ಪ್ರಾಮುಖ್ಯತೆ ಮತ್ತು ಅದರಿಂದ ವ್ಯಕ್ತಿಗೆ ಆಗುವ ಪ್ರಯೋಜನಗಳು ಹಾಗೂ ಸ್ವಾಮಿ ವಿವೇಕಾನಂದರು ರಾಷ್ಟ್ರ ನಿರ್ಮಾಣದಲ್ಲಿ ಯುವಕರನ್ನು ಪ್ರೇರೇಪಿಸಿದ ಬಗೆಯನ್ನು ಸಂಕ್ಷಿಪ್ತವಾಗಿ ತಿಳಿಸಿಕೊಟ್ಟರು.ಹಾಗೂ ಪ್ರಾತ್ಯಕ್ಷಿಕೆಯ ಮೂಲಕ ಎನ್ಎಸ್ಎಸ್ ಧ್ಯೇಯೋದ್ದೇಶವನ್ನು ಪರಿಚಯಿಸಿಕೊಟ್ಟರು

ಪ್ರಾಂಶುಪಾಲರಾದ ಡಾ.ಸಿಸ್ಟರ್ ಲತಾ ಫೆರ್ನಾಂಡಿಸ್ ರವರು ಎನ್ಎಸ್ಎಸ್ ನಾಯಕರಿಗೆ ಬ್ಯಾಡ್ಜ್ ಮತ್ತು ಎನ್ಎಸ್ಎಸ್ ಧ್ವಜವನ್ನು ಹಸ್ತಾಂತರಿಸಿ, ಪ್ರಮಾಣ ವಚನವನ್ನು ಬೋಧಿಸಿದರು.
ಅವರು ಅಧ್ಯಕ್ಷೀಯ ನುಡಿಯಲ್ಲಿ ಯುವಜನರ ಭವಿಷ್ಯದಲ್ಲಿ ಎನ್ಎಸ್ಎಸ್ ಹೇಗೆ ಸಹಕಾರಿಯಾಗಿದೆ ಎಂಬುದರ ಬಗ್ಗೆ ತಿಳಿಸಿಕೊಟ್ಟರು. 

ರಾ.ಸೆ.ಯೋ ಘಟಕದ ನಾಯಕ ಹರ್ಷಿತ್,ನಾಯಕಿ ಶ್ರೀಪ್ರಜ್ಞಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.100 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ರಾ.ಸೇ.ಯೋ ಸಹಾಯಕ ಯೋಜನಾಧಿಕಾರಿ ಕೀರ್ತನ್ ವಂದಿಸಿದರು. ದ್ವಿತೀಯ ಬಿಕಾಂ ನಸೀರಾ ಬಾನು ಕಾರ್ಯಕ್ರಮವನ್ನು ನಿರೂಪಿಸಿದರು. 

ಇತ್ತೀಚಿನ ಸುದ್ದಿ

ಜಾಹೀರಾತು