12:09 PM Saturday22 - November 2025
ಬ್ರೇಕಿಂಗ್ ನ್ಯೂಸ್
ಮಂಡ್ಯ ಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಸಚಿನ್ ಚಲುವರಾಯಸ್ವಾಮಿ ಆಯ್ಕೆ ಅರಣ್ಯ ಪ್ರದೇಶದಿಂದ ಅಕ್ರಮವಾಗಿ ಮಣ್ಣು ಸಾಗಾಟ: ಸ್ಥಳೀಯರ ತೀವ್ರ ಆಕ್ಷೇಪ; ಮೌನ ವಹಿಸಿದ… ದ್ವಿಚಕ್ರ ವಾಹನದಲ್ಲಿ ಮಕ್ಕಳಿಗೂ ಹೆಲ್ಮೆಟ್‌ ಕಡ್ಡಾಯ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ಆದೇಶ ಡಿ. 6ರಂದು ಹಾಸನಕ್ಕೆ ಸಿಎಂ ಭೇಟಿ: ನೂತನ ಕಂದಾಯ ಗ್ರಾಮಗಳ ನಿವಾಸಿಗಳಿಗೆ ಹಕ್ಕುಪತ್ರ… Bangalore | ನಾಯಿ ದಾಳಿಯಿಂದ ಸಾವನ್ನಪ್ಪಿದವರಿಗೆ ರಾಜ್ಯ ಸರ್ಕಾರ 5 ಲಕ್ಷ ರೂ.… ಕಲಾ ಗ್ರಾಮದಲ್ಲಿ ಸಾಲುಮರದ ತಿಮ್ಮಕ್ಕ ಜತೆಗೆ ಸಾಹಿತಿ ಯು.ಆರ್. ಅನಂತಮೂರ್ತಿ, ಕವಿ ಡಾ.… ಬಿಜೆಪಿಯಿಂದ ಭೀಮ ಸ್ಮರಣೆ ಕಾರ್ಯಕ್ರಮ; ಕಾಂಗ್ರೆಸ್‌ ಮಾಡಿದ ಅನ್ಯಾಯದ ಕುರಿತು ಜಾಗೃತಿ: ಪ್ರತಿಪಕ್ಷ… ಭಾರತದ ಅತ್ಯಂತ ವಿಶ್ವಾಸಾರ್ಹ ಹೂಡಿಕೆಯ ತಾಣ ಕರ್ನಾಟಕ: ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮದಿನಾಚರಣೆ ಚಾಲಕನ ಅಜಾಗರೂಕತೆ: ವಿದ್ಯಾರ್ಥಿಗಳಿಂದ ತುಂಬಿದ್ದ ಕೇರಳ ಮೂಲದ ಪ್ರವಾಸಿ ಬಸ್ ಪಲ್ಟಿ

ಇತ್ತೀಚಿನ ಸುದ್ದಿ

ಮೊಡಂಕಾಪು ಕಾರ್ಮೆಲ್ ಕಾಲೇಜಿನಲ್ಲಿ ಹಿಂದಿ ದಿವಸ್ ಆಚರಣೆ

24/09/2023, 21:53

ಬಂಟ್ವಾಳ(reporterkarnataka.com): ಮೊಡಂಕಾಪು ಕಾರ್ಮೆಲ್ ಕಾಲೇಜಿನಲ್ಲಿ ಹಿಂದಿ ದಿವಸ್ ಆಚರಣೆ ಇತ್ತೀಚಿಗೆ ಜರುಗಿತು.
ಕಾರ್ಯಕ್ರಮವನ್ನು ಮುಖ್ಯ ಅತಿಥಿ ಬಂಟ್ವಾಳ ಎಸ್. ವಿ. ಎಸ್ . ಕಾಲೇಜಿನ ಹಿಂದಿ ಉಪನ್ಯಾಸಕಿ ಚಂದ್ರಿಕಾ ಆರ್. ರಾವ್ ಉದ್ಘಾಟಿಸಿದರು. ಅವರು ಮಾತನಾಡಿ, ಹಿಂದಿ ಭಾಷೆಯನ್ನು ಆಂಗ್ಲ ಭಾಷೆಯ ಪರ್ಯಾಯವಾಗಿ ಉಪಯೋಗಿಸಿ, ಬೆಳೆಸಬೇಕು ಎಂದರು.


ಕಬೀರದಾಸ್ ರವರ ಜನಪ್ರಿಯ ದೋಹಾಗಳನ್ನು ವಾಚಿಸಿ ಅದರ ಭಾವಾರ್ಥವನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಅವರು ಹೇಳಿದರು.
ಪ್ರಾಂಶುಪಾಲೆ ಸಿಸ್ಟರ್ ಲತಾ ಫೆರ್ನಾಂಡಿಸ್, ಹಿಂದಿ ಉಪನ್ಯಾಸಕಿ ಪ್ರೀತಿ ಹಾಗೂ ಕಾರ್ಯದರ್ಶಿ ವಿದ್ಯಾರ್ಥಿನಿ ಶಾಲ್ಮ ಉಪಸ್ಥಿತರಿದ್ದರು.


ವಿದ್ಯಾರ್ಥಿಗಳಾದ ಅಲ್ವಿಶಾ ಮತ್ತು ಜೊಸ್ವಿಟ ಹಿಂದಿ ದಿವಸ್ ಗೀತೆಯನ್ನು ಹಾಡಿದರು. ಜ್ಯೋತಿ ಹಿಂದಿ ಭಾಷೆಯ ಮಹತ್ವವನ್ನು ಸಾರುವ ಕವಿತೆಯನ್ನು ವಾಚಿಸಿದರು. ಹಿಂದಿ ಪ್ರಬಂಧ ಹಾಗು ಪಿಕ್ & ಸ್ಪೀಚ್ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮುಖ್ಯ ಅತಿಥಿಗಳು ಬಹುಮಾನವನ್ನು ವಿತರಿಸಿದರು. ಫಾತಿಮತ್ ನಜ್ಮಿಯ ಕಾರ್ಯಕ್ರಮವನ್ನು ವಿದ್ಯಾರ್ಥಿ ಗಳಾದ ಫಾತಿಮತ್ ನಜ್ಮಿಯ
ನಿರೂಪಿಸಿ, ರಾಮ್ಝೀನ ಸ್ವಾಗತಿಸಿ, ಶಾಲ್ಮ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು