10:02 PM Wednesday27 - November 2024
ಬ್ರೇಕಿಂಗ್ ನ್ಯೂಸ್
ಡಿ.8ರಂದು ಉರ್ವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬ: ಬಿಷಪ್ ಡಾ. ಪೀಟರ್… ಕರ್ತವ್ಯಲೋಪ: ಚಿಕ್ಕಮಗಳೂರು ನಗರ ಠಾಣೆ ಇನ್ಸ್ ಪೆಕ್ಟರ್ ರೇಣುಕಾ ಪ್ರಸಾದ್ ಅಮಾನತು ರಾಜ್ಯ ಸರಕಾರದ ಜನಪರ ಕೆಲಸಕ್ಕೆ ಮತದಾರರ ಜೈ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್… ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ… ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​

ಇತ್ತೀಚಿನ ಸುದ್ದಿ

ಮೊಬೈಲ್ ಚೋರನ ಬೆನ್ನಟ್ಟಿ ಹಿಡಿದ ಎಎಸ್ ಐ ವರುಣ್ ಆಳ್ವ: ಎಸ್ ಸಿಐ ಮಂಗಳೂರು ಲೀಜನ್ ನಿಂದ ವಿಶೇಷ ಗೌರವ

23/01/2022, 18:34

ಮಂಗಳೂರು(reporterkarnatakanews):ಇತ್ತೀಚೆಗೆ ಮಂಗಳೂರು ನಗರದಲ್ಲಿ ಮೊಬೈಲ್ ಕಳ್ಳತನ ನಡೆಸಿದ ಕಳ್ಳನನ್ನು ಸುಮಾರು ಒಂದು ಕಿ.ಮೀ. ವರೆಗೆ ಬೆನ್ನಟ್ಟಿ ಹಿಡಿದ ಎ.ಎಸ್.ಐ. ವರುಣ್ ಆಳ್ವರಿಗೆ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಮಂಗಳೂರು ಲೀಜನ್ ವತಿಯಿಂದ ವಿಶೇಷ ಸನ್ಮಾನ ಕಾರ್ಯಕ್ರಮವು ಕೊಟ್ಟಾರ ಚೌಕಿ ಜಂಕ್ಷನ್ ನಲ್ಲಿರುವ ಉದ್ಭವ ಸ್ಕ್ವೇರ್ ಕಟ್ಟಡದಲ್ಲಿ ಜರುಗಿತು.


ಎ.ಎಸ್.ಐ. ವರುಣ್ ಆಳ್ವ ಅವರನ್ನು ಎಸ್.ಸಿ.ಐ. ಮಂಗಳೂರು ಘಟಕದ ಪದಾಧಿಕಾರಿಗಳು ಶಾಲು ಹೊದಿಸಿ, ಪೇಟ ತೊಡಿಸಿ, ಸನ್ಮಾನ ಪತ್ರ ಹಾಗೂ ಫಲಪುಷ್ಪ ನೀಡಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಮಂಗಳೂರು ಘಟಕದ ಅಧ್ಯಕ್ಷ ರಾದ ಹರಿಪ್ರಸಾದ್ ರೈ, ಕಾರಮೊಗರುಗುತ್ತು ಅವರು ವರುಣ್ ಆಳ್ವರನ್ನು ಶ್ಲಾಘಿಸಿದರಲ್ಲದೇ ಇವರು ಇನ್ನು ಮುಂದಕ್ಕೂ ನಮ್ಮ ನಾಡಿಗೆ ಹೆಮ್ಮೆ ತರಲಿ ಎಂದು ಆಶಿಸಿದರು. ಅಷ್ಟೇ ಅಲ್ಲದೇ ನಮ್ಮ ಸೀನಿಯರ್ ಚೇಂಬರ್ ಮಂಗಳೂರು ಲೀಜನ್ ನ ಸದಸ್ಯರ ಒಗ್ಗೂಡುವಿಕೆಯಿಂದ ಇಂತಹ ಕಾರ್ಯಕ್ರಮವನ್ನು ನಡೆಸಲು ಸಹಕಾರಿಯಾಯಿತು ಎಂದು ತಿಳಿಸಿದರು. ಸನ್ಮಾನ ಪತ್ರವನ್ನು ಎಸ್.ಸಿ.ಐ. ನ ಸದಸ್ಯರಾದ ಸುಬ್ರಹ್ಮಣ್ಯ ಅವರು ವಾಚಿಸಿದರು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ವರುಣ್ ಆಳ್ವ ಅವರು ನಾನು ಮಾಡಿದ ಸಣ್ಣ ಕೆಲಸವನ್ನು ಗುರುತಿಸಿ ಸೀನಿಯರ್ ಚೇಂಬರ್ ನವರು ನನಗೆ ಸನ್ಮಾನವನ್ನು ಮಾಡಿದ್ದಕ್ಕೆ ನಾನು ಅಭಾರಿಯಾಗಿದ್ದೇನೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಎಸ್.ಸಿ.ಐ. ನ ಸದಸ್ಯೆ ಲತಾ ಕರ್ಕೇರ ಅವರ ಮಗಳಾದ ಸಂಜನಾ ಅವರ ಹುಟ್ಟು ಹಬ್ಬವನ್ನು ಕೇಕ್ ಕತ್ತರಿಸಿ ಆಚರಿಸಲಾಯಿತು.

ಇಂದಿನ ಸನ್ಮಾನ ಕಾರ್ಯ ಕ್ರಮಕ್ಕೆ ಸ್ಥಳಾವಕಾಶವನ್ನು ಎಡಲ್ ವೈಸ್ ಟೋಕಿಯೋ ಲೈಫ್ ಇನ್ಸೂರೆನ್ಸ್ ನ ಬ್ರಾಂಚ್ ಟೀಮ್ ಲೀಡರ್ ಪ್ರತಿಭಾ ಶೆಟ್ಟಿಯವರು ನೀಡಿದ್ದು ಅವರಿಗೆ ಕೃತಜ್ಞತೆ ಸಲ್ಲಿಸಲಾಯಿತು. ಸಮಾರಂಭದಲ್ಲಿ ಎಸ್.ಸಿ.ಐ. ಮಂಗಳೂರು ಘಟಕದ ಕಾರ್ಯದರ್ಶಿ ಶಾಲಿನಿ ಸುವರ್ಣ, ಸದಸ್ಯರಾದ ಫ್ಲೇವಿ ಗ್ಲಾಡಿಸ್ ಡಿಮೆಲ್ಲೊ, ಲತಾ ಕರ್ಕೇರ, ಉಷಾ ಶೆಟ್ಟಿ, ಸದಾನಂದ ಶೆಟ್ಟಿ, ಲತಾ ಕಲ್ಲಡ್ಕ, ಎಡಲ್ ವೈಸ್ ನ ಜಯಲಕ್ಷ್ಮಿ ಶೆಟ್ಟಿ, ನಾಗರಾಜ್, ಸೋನಿಯಾ,ಮಾಲತಿ ಶೆಟ್ಟಿ ಮತ್ತಿತ್ತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಹರಿಪ್ರಸಾದ್ ರೈ ನಿರೂಪಿಸಿ, ಶಾಲಿನಿ ಸುವರ್ಣ ವಂದಿಸಿದರು.ಕೊನೆಯಲ್ಲಿ ಎ.ಎಸ್.ಐ. ವರುಣ್ ಆಳ್ವರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.

ಇತ್ತೀಚಿನ ಸುದ್ದಿ

ಜಾಹೀರಾತು