1:09 PM Tuesday16 - September 2025
ಬ್ರೇಕಿಂಗ್ ನ್ಯೂಸ್
ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು… Kodagu | ಕಾಲೇಜಿನಲ್ಲಿ ಮಚ್ಚು ಹಿಡಿದು ರೀಲ್ಸ್: ವಿದ್ಯಾರ್ಥಿ ವಿರುದ್ದ ಪ್ರಕರಣ ದಾಖಲು;… Kodagu | ಕೇರಳದ ಕಸಾಯಿಖಾನೆಗೆ ಕೋಣಗಳ ಸಾಗಾಟ: 34 ಕೋಣಗಳ ರಕ್ಷಣೆ ಸಂತೋಷದ ಬಾಗಿಲಿನತ್ತ ಪೂಜಾಳ ಪಯಣ: ಬಿಹಾರದಲ್ಲಿರುವ ಕುಟುಂಬ ಜತೆ ಪುನರ್ಮಿಲನ

ಇತ್ತೀಚಿನ ಸುದ್ದಿ

ಶಾಸಕರು, ಸಂಸದರು ವಿಮಾನ ಏರುತ್ತಾರೆ!; ಪಾಪ, ಅವರಿಗೇನು ಗೊತ್ತು ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿ ದುಃಸ್ಥಿತಿ?!!

23/06/2024, 20:55

ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.ಕಂ

ರಸ್ತೆಯಲ್ಲಿ ನೀರು ಇದೆಯೋ ಅಥವಾ ನೀರಿನಲ್ಲೇ ರಸ್ತೆ ಇದೆಯೋ ಎಂಬ ಗಲಿಬಿಲಿ ಈ ರಸ್ತೆಯಲ್ಲಿ ಸಂಚರಿಸುವ ಯಾವುದೇ ಪ್ರಯಾಣಿಕನಿಗೆ ಒಂದು ಕ್ಷಣ ಆದರೆ ಅತಿಶಯೋಕ್ತಿಯಾಗಲಾರದು. ಯಾಕೆಂದರೆ ಅಷ್ಟು ಕೆಟ್ಟು ಹೋಗಿದೆ ರಸ್ತೆ. ಇದು ಮಂಗಳೂರನ್ನು ರಾಜಧಾನಿ ಬೆಂಗಳೂರಿಗೆ ಜೋಡಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕಲ್ಲಡ್ಕ ಎಂಬ ಪೇಟೆಯ ದುಃಸ್ಥಿತಿ. ಮಂಗಳೂರಿನಿಂದ ಹೋಗುವಾಗ ಬಿ.ಸಿ.ರೋಡ್ ನಿಂದ ಕೇವಲ 3- 4 ಕಿಮೀ. ದೂರದಲ್ಲಿ ಕಲ್ಲಡ್ಕ ಎಂಬ ಬೆಳೆಯುತ್ತಿರುವ ಪೇಟೆ ಸಿಗುತ್ತದೆ. ವಿಟ್ಲ ಮತ್ತು ಪುತ್ತೂರು ರಸ್ತೆ ಕವಲೊಡೆಯುವ ಜಾಗವೇ ಕಲ್ಲಡ್ಕ. ಇಲ್ಲಿಂದ ರಾಷ್ಟ್ರೀಯ ಹೆದ್ದಾರಿಯಲ್ಲೇ ಸಾಗಿದರೆ ಉಪ್ಪಿನಂಗಡಿಯಾಗಿ ಬೆಂಗಳೂರು ಸೇರಬಹುದು. ಉಪ್ಪಿನಂಗಡಿಗೆ ಹೋಗುವ ದಾರಿಯಲ್ಲಿ ಮಾಣಿ ಎಂಬ ಮತ್ತೊಂದು ಜಂಕ್ಷನ್ ಸಿಗುತ್ತದೆ. ಇಲ್ಲಿ ಬಲ ಬದಿಯ ರಸ್ತೆಯಲ್ಲಿ ಚಲಿಸಿದರೆ ಪುತ್ತೂರು ಸೇರಬಹುದು. ಹಾಗೆ ಕಲ್ಲಡ್ಕ ಜಂಕ್ಷನ್ ನಲ್ಲಿ ಬಲಬದಿಯ ರಸ್ತೆಯಿಂದ ಸಾಗಿದರೆ ವಿಟ್ಲ ತಲುಪಬಹುದು. ಅಲ್ಲಿಂದ ಕೇರಳ ರಾಜ್ಯ ಪ್ರವೇಶಿಸಲೂ ಆಗುತ್ತದೆ. ಈ ಎಲ್ಲ ಕಾರಣಗಳಿಂದ ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಗಲು- ರಾತ್ರಿ ಎನ್ನದೆ ನಿರಂತರವಾಗಿ ವಾಹನಗಳು ಸಾಗುತ್ತಲೇ ಇರುತ್ತದೆ. ಅಂತಹ ಜಂಕ್ಷನ್ ಪ್ರದೇಶದಲ್ಲಿ ರಸ್ತೆ ದುಃಸ್ಥಿತಿ ಈ ಪಾಟಿ ಕೆಟ್ಟು ಹೋಗಿದೆ.


ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿ.ಸಿ.ರೋಡ್ ನಿಂದ ಕೆಂಪು ಹೊಳೆ ತನಕ ಚತುಷ್ಪಥ ಕಾಮಗಾರಿ ನಡೆಯುತ್ತಿರುವುದರಿಂದ ಇಲ್ಲಿ ಸುಮಾರು 2 ಕಿಮೀ. ಉದ್ದಕ್ಕೆ ಫ್ಲೈ ಓವರ್ ಕಾಮಗಾರಿ ಕಳೆದ ಒಂದು ವರ್ಷದಿಂದ ನಡೆಯುತ್ತಿದೆ. ಆದರೆ ಈ ಕಾಮಗಾರಿ ಆರಂಭಿಸುವ ಮುನ್ನ ಸಾಕಷ್ಟು ಮುಂಜಾಗ್ರತೆ ವಹಿಸಿ ಸರಿಯಾದ ಸರ್ವಿಸ್ ರಸ್ತೆ ನಿರ್ಮಿಸದೇ ಇರುವುದೇ ಈ ಎಲ್ಲ ಅವಾಂತರಕ್ಕೆ ಕಾರಣವಾಗಿದೆ. ಮಳೆ ಬಂದಾಗ ಇಲ್ಲಿ ನಿರ್ಮಾಣ ಹಂತದಲ್ಲಿರುವ ಪ್ರತಿಯೊಂದು ಫ್ಲೈ ಓವರ್ ನಿಂದ ಜಲಪಾತದಿಂದ ನೀರು ಇಳಿದಾಗೆ ಮಳೆ ನೀರು ಕೆಳಗೆ ಧುಮುಕುತ್ತದೆ. ರಸ್ತೆಯಲ್ಲಿ ಬಸ್ಸಿನ ಟಯರ್ ಮುಳುಗುವಷ್ಟು ನೀರು ತುಂಬಿರುತ್ತದೆ. ಇಲ್ಲಿನ ನಿವಾಸಿಗಳು, ಪರ ಊರಿನಿಂದ ಬಂದ ಪಾದಚಾರಿಗಳು ಇದರ ಮೇಲೆಯೇ ನಡೆದುಕೊಂಡು ಹೋಗಬೇಕು. ರಸ್ತೆ ದಾಟುವ ಕಷ್ಟ ಹೇಳಿ ತೀರದು. ನೀವು ಪ್ರಶ್ನಿಸಬಹುದು, ಇದೆಲ್ಲ ಇಲ್ಲಿನ ಸಂಸದರಿಗೆ, ಶಾಸಕರಿಗೆ ಗೊತ್ತಿಲ್ವಾ? ಎಂದು. ನಮ್ಮ ಸಂಸದರಿಗೆ, ಶಾಸಕರಿಗೆಲ್ಲ ಇಲ್ಲಿನ ಕಷ್ಟ ಗೊತ್ತಿಲ್ಲ. ಯಾಕೆಂದರೆ ಹಿಂದಿನ ಶಾಸಕರು ಬೆಂಗಳೂರಿಗೆ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ನಂತರ ಶಾಸಕರೆಲ್ಲ ಕಾರಿನಲ್ಲಿ ಪ್ರಯಾಣಿಸಲು ಆರಂಭಿಸಿದರು. ಆಗೆಲ್ಲ ಅವರಿಗೆ ರಸ್ತೆ ಕೆಟ್ಟು ಹೋಗಿದ್ದರೆ ಅರಿವಿಗೆ ಬರುತ್ತಿತ್ತು. ಆದರೆ ಈಗಿನ ನಮ್ಮ ಎಲ್ಲ ಶಾಸಕರು ವಿಮಾನದಲ್ಲೇ ಬೆಂಗಳೂರಿಗೆ ಹಾರುವುದು!. ಅವರು ರಸ್ತೆಯಲ್ಲಿ ಸಂಚರಿಸುವುದಿಲ್ಲ. ಹಾಗಾಗಿ ಮತ್ತೆ ಹೇಗೆ ಗೊತ್ತಾಗುತ್ತೆ ಅವರಿಗೆ ರಸ್ತೆ ದುಃಸ್ಥಿತಿ?

ಇತ್ತೀಚಿನ ಸುದ್ದಿ

ಜಾಹೀರಾತು