2:19 AM Wednesday15 - January 2025
ಬ್ರೇಕಿಂಗ್ ನ್ಯೂಸ್
ಗರೋಡಿ ಜಾತ್ರೆಗೂ ಊರವರಿಗೆ ನೀರಿಲ್ಲ!: 5 ದಿನಗಳಿಂದ ನೋ ವಾಟರ್!!; ಮೇಯರ್ ಅವರೇ… ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಸಚಿವ ಜಮೀರ್‌ ಭಾವಚಿತ್ರಕ್ಕೆ ಸಗಣಿ ಬಳಿದು ಬಿಜೆಪಿ… ಕೆಚ್ಚಲು ಕೊಯ್ದ ಪ್ರಕರಣ: ದನದ ಮಾಲೀಕನ ತಾಯಿಗೆ 3 ಹಸು ಕೊಡಿಸಿದ ಸಚಿವ… 5 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ: ಆರೋಪಿಯ ತಕ್ಷಣ ಬಂಧಿಸಲು ಆಗ್ರಹಿಸಿ ಎಐಎಂಎಸ್ಎಸ್… ಕಾಡಾನೆಯ ಚಿತ್ರೀಕರಣ ಮಾಡಲು ಹೋದ ಯೂಟ್ಯೂಬರ್ ಮೇಲೆ ಸಲಗ ದಾಳಿ: ಕೂದಲೆಳೆ ಅಂತರದಲ್ಲಿ… ವಿಕಲಚೇತನ ಉದ್ಯೋಗಿಗಳ ಜತೆ ಸಂಕ್ರಾಂತಿ ಹಬ್ಬ ಆಚರಿಸಿಕೊಂಡ ಕೇಂದ್ರ ಸಚಿವ ಕುಮಾರಸ್ವಾಮಿ ಶಬರಿಮಲೆ: ಆಕಾಶದತ್ತ ಮುಖ ಮಾಡಿ ಕಾಯುತ್ತಿದ್ದ ಭಕ್ತರಿಗೆ ಮಕರ ಜ್ಯೋತಿ ದರ್ಶನ: ಪುನೀತರಾದ… ನಂಜನಗೂಡು: ಶಿವಶರಣ ಶ್ರೀ ಸಿದ್ದರಾಮೇಶ್ವರ ರ ಜಯಂತಿ ಆಚರಣೆ ಜಿಹಾದಿ ಮನಸ್ಥಿತಿಯನ್ನು ಪೋಷಿಸಿ ಬೆಳೆಸುತ್ತಿರುವ ಸಿದ್ದರಾಮಯ್ಯ ಸರಕಾರ: ಸಂಸದ ಕ್ಯಾ ಬ್ರಿಜೇಶ್ ಚೌಟ… ವಿಜಯಪುರ: 4 ಮಂದಿ ಮಕ್ಕಳ ಜತೆ ಕಾಲುವೆಗೆ ಜಿಗಿದ ಹೆತ್ತಬ್ಬೆ: ಮಕ್ಕಳ ದಾರುಣ…

ಇತ್ತೀಚಿನ ಸುದ್ದಿ

‘ಮಿಸ್ಟರ್ ಹುಬ್ಬಳ್ಳಿ’ ಮಿಲನ್ ಗೆ ಕರ್ನಾಟಕ ವಿವಿ ಡಾಕ್ಟರೇಟ್ಪದವಿ ಪ್ರದಾನ

18/07/2022, 23:24

ಧಾರವಾಡ(reporterkarnataka.com): ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ಹಾಗೂ ಸೂಕ್ಷ್ಮ ಜೀವಶಾಸ್ತ್ರ ಅಧ್ಯಯನ ವಿಭಾಗದ ಸಂಶೋಧನಾ ವಿದ್ಯಾರ್ಥಿ ಮಿಲನ ವಿ. ಕಾಂಬಳೆ ಅವರು ಮಂಡಿಸಿದ “ಐಡೆಂಟಿಫಿಕೇಶನ್ ಆ್ಯಂಡ್ ಕ್ಯಾರಕ್ಟರೈಜೇಶನ್ ಆಫ್ ಡೌನಿ ಮೆಲ್ಡಿವ್ ರೆಸ್ಪಾನ್ಸಿವ್ ಮೈಕ್ರೊಆರ್‌ಎನ್‌ಯೆಸ್ ಇನ್ ಇಂಡಿಯನ್ ವಿಟಿಸ್ ವಿನಿಫೆರಾ ಬೈ ಹಾಯ್- ಥ್ರೋಪುಟ್ ಸಿಕ್ವೆನ್ಸಿಂಗ್” ಎಂಬ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ಲಭಿಸಿದೆ.

ಇವರಿಗೆ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಸುಧೀಶ ಜೋಗಯ್ಯ ಅವರು ಮಾರ್ಗದರ್ಶನದಲ್ಲಿ ಮಹಾ ಪ್ರಬಂಧ ಮಂಡಿಸಿದ್ದರು.ಬಹುಮುಖ ಪ್ರತಿಭೆ: ಸಾಮಾನ್ಯ ಕುಟುಂಬವೊಂದರಿಂದ ಬಂದ ಮಿಲನ್ ಕಾಂಬಳೆ  ಎಲ್ಲ ಕಷ್ಟಗಳ ಮಧ್ಯಯೂ ತಮ್ಮೆಲ್ಲ ಆಸಕ್ತಿಗಳನ್ನು ಪೋಷಿಸುತ್ತಲೆ ಬಂದ ಒಬ್ಬ ಬಹುಮುಖ ಪ್ರತಿಭೆ. ತಮ್ಮ ಕಾಲೇಜು ದಿನಗಳಿಂದಲೂ ನೃತ್ಯ, ಹಾಗೂ ಬಾಡಿ ಬಿಲ್ಡಿಂಗ್ ಕುರಿತು ಅಪಾರ ಆಸಕ್ತಿಯನ್ನು ಹೊಂದಿದ್ದರು. 

ಇವರು  ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನೂ ಪಡೆದಿದ್ದಾರೆ. 

ಮಿಸ್ಟರ್ ಹುಬ್ಬಳ್ಳಿ: ಧಾರವಾಡ ಬಾಡಿ ಬಿಲ್ಡಂಗ್ ಅಸೋಯೇಶನ್ ವತಿಯಿಂದ ಹುಬ್ಬಳ್ಳಿಯಲ್ಲಿ ಜರುಗಿದ ೧೯ನೇ ಮಿಸ್ಟರ್ ಹುಬ್ಬಳ್ಳಿ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಸಿ ಮಿಸ್ಟರ್ ಹುಬ್ಬಳ್ಳಿ ಎನಿಸಿದ್ದರು. 

ಈ ಮೂಲಕ ಸಂಶೋಧನೆ ಮಾತ್ರವಲ್ಲದೇ ಪಠ್ಯೇತರ ಚಟುವಟಿಕೆಗಳಲ್ಲೂ ಮಿಲನ್ ಸಾಧನೆ ಮಾಡಿದ್ದಾರೆ. 

ತಮ್ಮ ಸಂಶೋಧನಾ ಅವಧಿಯಲ್ಲಿ ಮಿಲನ್ ಚೀನಾ ಸೇರಿದಂತೆ ಇತರಡೆ ಪ್ರವಾಸ ಕೈಗೊಂಡು ಸಂಶೋಧನಾ ಕಾರ್ಯ ಪೂರ್ಣಗೊಳಿಸಿದ್ದಾರೆ. ಒಟ್ಟಿನಲ್ಲಿ ಸಂಶೋಧಕರು ಎಂದ ತಕ್ಷಣ ಕೇವಲ ಪ್ರಯೋಗಾಲಯಕ್ಕೆ ಮಾತ್ರ ಸೀಮಿತವಲ್ಲ ದೇಹದಾರ್ಢ್ಯಕ್ಕೂ ಸೈ ಎಂದು ಮಿಲನ್ ತಮ್ಮ ಪ್ರತಿಭೆಯ ಮೂಲಕ ತೋರಿಸಿಕೊಟ್ಟಿದ್ದಾರೆ.

ಮಿಲನ್‌ನ ಈ ಸಾಧನೆಗೆ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ಮತ್ತು ಸ್ಮೂಕ್ಷ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಎ.ಬಿ. ವೇದಮೂರ್ತಿ ಮತ್ತು ಸಂಶೋಧನಾ ಮಾರ್ಗದರ್ಶಕರಾದ   ಡಾ. ಸುಧೀಶ ಜೋಗಯ್ಯ ಅವರು ಅಭಿನಂದಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು