ಇತ್ತೀಚಿನ ಸುದ್ದಿ
ಮಿಸೆಸ್ ಇಂಡಿಯಾ ಸ್ಪರ್ಧೆ: ಮಂಗಳೂರಿನ ಪ್ಲೇವಿ ಗ್ಲಾಡಿಸ್ ಡಿಮೆಲ್ಲೊ ಮಿಸೆಸ್ ಇಂಡಿಯಾ ಗುಡ್ ವಿಲ್ ಅಂಬಾಸಿಡರ್
24/02/2023, 14:05
ಮಂಗಳೂರು(reporterkarnataka.com): ರಾಜಸ್ಥಾನದ ರಥಂಬೋರ್ ನಲ್ಲಿ ಇತ್ತೀಚೆಗೆ ನಡೆದ ಮಿಸೆಸ್ ಇಂಡಿಯಾ 2022-23 ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಬಿಜೈ ಕಾಪಿಕಾಡ್ ನ ಫ್ಲೇವಿ ಗ್ಲಾಡಿಸ್ ಡಿಮೆಲ್ಲೊ ಅವರು ಮಿಸೆಸ್ ಇಂಡಿಯಾ ಗುಡ್ ವಿಲ್ ಅಂಬಾಸಿಡರ್ ಆಗಿ ಜಯಗಳಿಸಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಮೂರು ವಿಭಾಗದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಫ್ಲೇವಿ ಅವರು 40 -60 ವಯೋಮಾನದಲ್ಲಿ ಜಯ ಗಳಿಸುವ ಮೂಲಕ ಮಿಸೆಸ್ ಏಷ್ಯಾ ಇಂಡಿಯಾ 2023-24 ಸ್ಪರ್ಧೆಗೆ ಆಯ್ಕೆಗೊಂಡಿದ್ದಾರೆ. ಪ್ರಸ್ತುತ ಇವರು ಮಂಗಳೂರು ಮಹಾನಗರ ಪಾಲಿಕೆಯ ಪರಿಷತ್ತು ವಿಭಾಗದಲ್ಲಿ ಕಚೇರಿ ವ್ಯವಸ್ಥಾಪಕಿಯಾಗಿ ದುಡಿಯುತ್ತಿದ್ದು, ಹಲವಾರು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದಾರೆ.